For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ 2022: ಫೆಬ್ರವರಿ 16ರಿಂದ ಟೂರ್ನಿ ಆರಂಭಕ್ಕೆ ವೇದಿಕೆ ಸಿದ್ಧ

Ranji Trophy 2022 season is all set to start from February 16 to March 5

ಕಡೆಗೂ ರಣಜಿ ಟೂರ್ನಿಯ ಆರಂಭಕ್ಕೆ ವೇದಿಕೆ ಸಜ್ಜಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫೆಬ್ರವರಿ 16 ರಿಂದ ಮಾರ್ಚ್ 5ರ ಮಧ್ಯೆ ರಣಜಿ ಟ್ರೋಫಿ 2022ರ ಲೀಗ್ ಪಂದ್ಯಗಳನ್ನು ಆಯೋಜಿಸಲು ವೇದಿಕೆ ಸಜ್ಜುಗೊಳಿಸುತ್ತಿದೆ. ಬಿಸಿಸಿಐನ ಆಪರೇಶನ್ ಟೀಮ್ ಈ ದಿನಾಂಕವನ್ನು ನೀಡಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಹೀಗಾಗಿ ಟೂರ್ನಿಯ ಆಯೋಜನೆಗೆ ಬಿಸಿಸಿಐ ಕೊರೊನಾವೈರಸ್‌ನಿಮದ ಕಡಿಮೆ ಅಪಾಯಗಳಿರುವ ರಾಜ್ಯಗಳನ್ನು ಗುರುತಿಸುತ್ತಿದ್ದು ಅಲ್ಲಿ ಪಂದ್ಯಗಳನ್ನು ಆಯೋಜಿಸುವ ಯೋಜನೆ ಹೊಂದಿದೆ.

ಕೋಲ್ಕತ್ತಾ, ಅಹಮದಾಬಾದ್, ಚೆನ್ನೈ ಮತ್ತು ಕಟಕ್ ಎಲೈಟ್ ಗುಂಪಿನ ಪಂದ್ಯಗಳಿಗೆ ಸಂಭಾವ್ಯ ತಾಣಗಳಾಗಿದೆ. ಈ ಬಗ್ಗೆ ಬಿಸಿಸಿಐ ಇನ್ನಷ್ಟೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ. ತಲಾ ನಾಲ್ಕು ತಂಡಗಳ ಎಂಟು ಗುಂಪುಗಳು ಈ ಬಾರಿ ಕಾಣಿಸಿಕೊಳ್ಳಲಿದ್ದು, ಆರು ಟೀಮ್ ಪ್ಲೇಟ್ ಗ್ರೂಪ್ ಪಂದ್ಯಗಳು ಏಕಕಾಲದಲ್ಲಿ ನಡೆಯಲಿದೆ.

ಎರಡು ಬಾರಿ ಕೊರೊನಾವೈರಸ್ ಕಾರಣದಿಂದಾಗಿ ರಣಜಿ ಟೂರ್ನಿಯ ಆರಂಭ ಮುಂದೂಡಿಕೆಯಾಗಿದ್ದ ನಂತರ ಜನವರಿಯಲ್ಲಿ ಬಿಸಿಸಿಐ ತನ್ನ ಅಪೆಕ್ಸ್ ಕೌನ್ಸಿಲ್ ಸಭೆ ನಡೆಸಿತು. ಈ ಸಂದರ್ಭದಲ್ಲಿ ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಟೂರ್ನಿಯನ್ನು ಮುಂದೂಡಿವುದಾಗಿ ಘೋಷಿಸಿತ್ತು. ಆದರೆ ಸತತ ಎರಡನೇ ವರ್ಷವೂ ಬಿಸಿಸಿಐ ರಣಜಿ ಟೂರ್ನಿಯನ್ನು ರದ್ದುಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ವಿಚಾರವಾಗಿ ಸಾಕಷ್ಟು ಟೀಕೆಗಳು ಒತ್ತಡಗಳು ಬಂದವು. ಹೀಗಾಗಿ ಟೂರ್ನಿ ಆಯೋಜಿಸುವ ಅನಿವಾರ್ಯತೆಗೆ ಒಳಗಾಯಿತು ಬಿಸಿಸಿಐ. 2021ರಲ್ಲಿಯೂ ರಣಜಿ ಟೂರ್ನಿಯನ್ನು ಕೊರೊನಾವೈರಸ್ ಕಾರಣದಿಂದಾಗಿ ಮುಂದೂಡಲಾಗಿತ್ತು. ಈ ಕಾರಣದಿಂದಾಗಿ ಆಟಗಾರರಿಗೆ ಪರಿಹಾರ ಧನವನ್ನು ಬಿಸಿಸಿಐ ನೀಡಿತ್ತು.

ಈ ಋತುವಿನಲ್ಲಿ ರಣಜಿ ಟ್ರೋಫಿಯನ್ನು ಎರಡು ಹಂತಗಳಲ್ಲಿ ನಡೆಸಲು ಮಂಡಳಿ ನಿರ್ಧರಿಸಿದೆ. ಮೊದಲ ಹಂತದಲ್ಲಿ ಎಲ್ಲಾ ಲೀಗ್ ಹಂತದ ಪಂದ್ಯಗಳನ್ನು ನಡೆಸಲು ನಾವು ನಿರ್ಧರಿಸಿದ್ದು ಜೂನ್‌ನಲ್ಲಿ ನಾಕೌಟ್ ಪಂದ್ಯಗಳು ನಡೆಯಲಿದೆ. ಕೊರೊನಾವೈರಸ್‌ನ ಅಪಾಯವನ್ನು ಕಡಿಮೆ ಗೊಳಿಸಲು ನಮ್ಮ ತಂಡ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದು ಸ್ಪರ್ಧಾತ್ಮಕ ರೆಡ್‌ಬಾಲ್ ಕ್ರಿಕೆಟ್‌ಅನ್ನು ನಡೆಸಲು ನಾವು ಬದ್ಧವಾಗಿದ್ದೇವೆ" ಎಂದು ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಅಧಿಕೃತ ಪ್ರಕಟಣೆಯಲ್ಲಿ ಇತ್ತೀಚೆಗಷ್ಟೇ ತಿಳಿಸಿದ್ದಾರೆ.

ಜಯ್ ಶಾ ತಮ್ಮ ಪ್ರಕಟಣೆಯಲ್ಲಿ "ರಣಜಿ ಟ್ರೋಫಿ ನಮಗೆ ಅತ್ಯಂತ ಪ್ರತಿಷ್ಠಿತ ದೇಶೀಯ ಸ್ಪರ್ಧೆಯಾಗಿದೆ. ಇದು ಪ್ರತಿ ವರ್ಷ ಭಾರತೀಯ ಕ್ರಿಕೆಟ್‌ಗೆ ಸಾಕಷ್ಟು ಪ್ರತಿಭಾವಂತ ಆಟಗಾರರನ್ನು ನೀಡುತ್ತದೆ. ಈ ಅತ್ಯುನ್ನತ ಟೂರ್ನಿಯ ಹಿತಾಸಕ್ತಿಯನ್ನು ಕಾಪಾಡಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ" ಎಂದು ಹೇಳಿದ್ದರು.

ದೇಶದಲ್ಲಿ ಕೊರೊನಾವೈರಸ್‌ನ ನಾಲ್ಕನೇ ಅಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನವರಿ 4 ರಂದು ಬಿಸಿಸಿಐ ರಣಜಿ ಟ್ರೋಫಿಯನ್ನು ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡು. ರಣಜಿ ಟ್ರೋಫಿ ಮಾತ್ರವಲ್ಲದೆ ಕರ್ನಲ್ ಸಿಕೆ ನಾಯುಡು ಟ್ರೋಫಿ ಕೂಡ ಈ ವರ್ಷದ ಜನವರಿಯಲ್ಲಿ ಪ್ರಾರಂಭವಾಗಬೇಕಿತ್ತು.

Story first published: Monday, January 31, 2022, 21:52 [IST]
Other articles published on Jan 31, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+