Ranji Trophy: ಕೊಹ್ಲಿ ಔಟ್ ಮಾಡೋಕೆ ಬೌಲರ್‌ಗೆ ಬಸ್ ಡ್ರೈವರ್ ಟಿಪ್ಸ್!
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಅನೇಕ ಶ್ರೇಷ್ಠ ಬೌಲರ್‌ಗಳನ್ನು ಮಂಡಿಯೂರುವಂತೆ ಮಾಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ವಿರಾಟ್ ಅವರ ಬ್ಯಾಟ್ ಮೌನವಾಗಿರುವಂತೆ ಕಾಣುತ್ತಿದೆ. ದೆಹಲಿ ಮತ್ತು ರೈಲ್ವೇಸ್ ನಡುವಿನ ರಣಜಿ ಪಂದ್ಯದಲ್ಲಿ ಕೊಹ್ಲಿಗೆ ಅದ್ಭುತ ಇನ್ನಿಂಗ್ಸ್ ಆಡಲು ಅವಕಾಶ, ವಾತಾವರಣ ಮತ್ತು ಉತ್ತಮ ವೇದಿಕೆ ಸಿಕ್ಕಿತ್ತು. ಆದರೆ ಒಬ್ಬ ಬಸ್ ಚಾಲಕ ಎಲ್ಲಾ ಭರವಸೆಗಳನ್ನು ಹುಸಿಗೊಳಿಸಿದ್ದನು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ರೈಲ್ವೇಸ್ ತಂಡದ ವೇಗದ ಬೌಲರ್ ಹಿಮಾಂಶು ಸಂಗ್ವಾನ್ ಔಟ್ ಮಾಡಿದ್ದರು. ಆದರೆ ಹಿಮಾಂಶು ಸಾಂಗ್ವಾನ್ ಗೆ ಬಸ್ ಚಾಲಕ ವಿರಾಟ್ ಕೊಹ್ಲಿಯನ್ನು ಹೇಗೆ ಕಟ್ಟಿ ಹಾಕಬೇಕೆಂದು ಟಿಪ್ಸ್ ಕೊಟ್ಟಿದ್ದರು. ಈ ಬಗ್ಗೆ ಹಿಮಾಂಶು ಸಂಗ್ವಾನ್ ಬಹಿರಂಗಪಡಿಸಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ವಿರಾಟ್ ಬ್ಯಾಟಿಂಗ್ ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳ ಬಳಗ ಸೇರಿತ್ತು. ಇಡೀ ಜೇಟ್ಲಿ ಕ್ರೀಡಾಂಗಣವು ಸಾಮರ್ಥ್ಯಕ್ಕೆ ತಕ್ಕಂತೆ ತುಂಬಿತ್ತು. ವಿರಾಟ್ ಕೊಹ್ಲಿ ಅವರ ಆರಂಭ ಅದ್ಭುತವಾಗಿತ್ತು. ಹಿಮಾಂಶು ಅವರ ಚೆಂಡಿಗೆ ಅದ್ಭುತ ಫೋರ್ ಬಾರಿಸಿದ ತಕ್ಷಣ ಅಭಿಮಾನಿಗಳು ಕೂಗಿದ ಶಬ್ದದ ಮೀಟರ್ ಏರಿತು. ಆದರೆ ಮುಂದಿನ ಎಸೆತದಲ್ಲೇ ಹಿಮಾಂಶು ಸಾಂಗ್ವಾನ್ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದರು. ಹಿಮಾಂಶು ಸಾಂಗ್ವಾನ್ ಎಸೆದ ಚೆಂಡಿನ ಹೊಡೆತಕ್ಕೆ ಕೊಹ್ಲಿಯ ಸ್ಟಂಪ್ ಬೇರು ಸಹಿತ ಕಿತ್ತು ವಿಕೆಟ್ ಕೀಪರ್ ಬಳಿ ಬಿದ್ದಿತು.
ಸಾಂಗ್ವಾನ್ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ಮಾತನಾಡಿರುವ ಹಿಮಾಂಶು, ನಮ್ಮ ಬಸ್ ಚಾಲಕ ಕೊಹ್ಲಿಯ ದೌರ್ಬಲ್ಯವನ್ನು ಹೇಗೆ ಎತ್ತಿ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಪಂದ್ಯಕ್ಕೂ ಮೊದಲು ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ದೆಹಲಿ ಪರ ಆಡುವ ಬಗ್ಗೆ ಮಾತು ಕೇಳಿಬಂದಿತ್ತು. ಆ ಸಮಯದಲ್ಲಿ, ಪಂದ್ಯದ ನೇರ ಪ್ರಸಾರವಾಗುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ಇದರ ನಡುವೆ ರಿಷಭ್ ಪಂತ್ ಆಡುವುದಿಲ್ಲ, ಆದರೆ ವಿರಾಟ್ ಆಡುತ್ತಾರೆ ಎಂಬುದು ನಮಗೆ ತಿಳಿಯಿತು. ನಾನು ರೈಲ್ವೇಸ್‌ನ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸುತ್ತಿದ್ದೇನೆ. ತಂಡದ ಪ್ರತಿಯೊಬ್ಬ ಸದಸ್ಯರು ವಿರಾಟ್ ಕೊಹ್ಲಿಯನ್ನು ನಾನು ಔಟ್ ಮಾಡುತ್ತೇನೆ ಎಂದು ಭಾವಿಸಿದ್ದರು ಎಂದು ಹೇಳಿದ್ದಾರೆ.
ಬಸ್ ಚಾಲಕ ಟಿಪ್ಸ್
ನಾವು ಪ್ರಯಾಣಿಸುತ್ತಿದ್ದ ಬಸ್ ಚಾಲಕ ಕೂಡ ವಿರಾಟ್ ಕೊಹ್ಲಿಗೆ ನಾಲ್ಕನೇ-ಐದನೇ ಸ್ಟಂಪ್ ಲೈನ್‌ನಲ್ಲಿ ಬೌಲಿಂಗ್ ಮಾಡಿದರೆ ಔಟ್ ಆಗುತ್ತಾರೆ ಎಂದು ಎಂದು ನನಗೆ ಹೇಳಿದರು.' ನನಗೆ ನನ್ನ ಮೇಲೆ ವಿಶ್ವಾಸವಿತ್ತು. ನಾನು ಬೇರೆಯವರ ದೌರ್ಬಲ್ಯಗಳಿಗಿಂತ ನನ್ನ ಸಾಮರ್ಥ್ಯದ ಮೇಲೆ ಕೇಂದ್ರೀಕರಿಸಲು ಬಯಸಿದ್ದೆ. ನನ್ನ ಶಕ್ತಿಗೆ ತಕ್ಕಂತೆ ಬೌಲಿಂಗ್ ಮಾಡಿ ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದೆ ಎಂದು ಹಿಮಾಂಶು ಬಸ್ ಚಾಲಕನಿಂದ ಪಡೆದ ಟಿಪ್ಸ್ ಅನ್ನು ಬಹಿರಂಗಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications