For Quick Alerts
ALLOW NOTIFICATIONS  
For Daily Alerts
 

Ranji Trophy: ಸೋಲಿನ ಅವಮಾನಕ್ಕೆ ಅಂಡರ್-19 ವಿಶ್ವಕಪ್ ವಿಜೇತನನ್ನು ನಾಯಕತ್ವದಿಂದ ಕೆಳಗಿಳಿಸಿದ ದೆಹಲಿ

2024ರ ರಣಜಿ ಟ್ರೋಫಿ ಉದ್ಘಾಟನಾ ಪಂದ್ಯದಲ್ಲಿ ಪುದುಚೇರಿ ವಿರುದ್ಧ ಹೀನಾಯ ಸೋಲು ಅನುಭವಿಸಿದ ಕೆಲವೇ ಗಂಟೆಗಳ ನಂತರ, ಅಂದರೆ ಸೋಮವಾರ ಭಾರತದ ಅಂಡರ್-19 ವಿಶ್ವಕಪ್ ವಿಜೇತ ಆಟಗಾರ ಯಶ್ ಧುಲ್ ಅವರನ್ನು ದೆಹಲಿ ತಂಡದ ನಾಯಕತ್ವದಿಂದ ತೆಗೆದುಹಾಕಲಾಗಿದೆ.

ದೆಹಲಿ ತಂಡವು 21 ವರ್ಷದ ಬ್ಯಾಟರ್ ಯಶ್ ಧುಲ್ ಅವರನ್ನು ನಾಯಕನಾಗಿ ತೆಗೆದುಹಾಕುವುದಾಗಿ ಮತ್ತು ಹಿರಿಯ ಬ್ಯಾಟರ್ ಹಿಮ್ಮತ್ ಸಿಂಗ್ ಅವರು ಜನವರಿ 12ರಿಂದ ಜಮ್ಮು ಮತ್ತು ಕಾಶ್ಮೀರ ತಂಡ ಎದುರಿಸುವ ದೆಹಲಿ ತಂಡವನ್ನು ಮುನ್ನಡೆಸಲಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ದೆಹಲಿ ತಂಡದ ಅದೃಷ್ಟವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನದಲ್ಲಿ, ಅಂಡರ್-19 ವಿಶ್ವಕಪ್ ವಿಜೇತ ನಾಯಕ ಯಶ್ ಧುಲ್ ಅವರನ್ನು ಡಿಸೆಂಬರ್ 2022ರಲ್ಲಿ ತಂಡದ ನಾಯಕನನ್ನಾಗಿ ಮಾಡಲಾಯಿತು.

Ranji Trophy 2024: Delhi Removed Yash Dhul As Captain After Defeat Against Puducherry

ಫೆಬ್ರವರಿ 2022ರಲ್ಲಿ ಪದಾರ್ಪಣೆ ಮಾಡಿದ ನಂತರ ಯಶ್ ಧುಲ್ 43.88ರ ಸರಾಸರಿಯಲ್ಲಿ 1185 ರನ್ ಗಳಿಸಿದ್ದಾರೆ. ಪುದುಚೇರಿ ವಿರುದ್ಧ ತವರಿನಲ್ಲಿ ಒಂಬತ್ತು ವಿಕೆಟ್‌ಗಳ ಸೋಲಿನಲ್ಲಿ ಯಶ್ ಧುಲ್ ಕೇವಲ 2 ಮತ್ತು 23 ರನ್ ಗಳಿಸಿದರು. 21 ವರ್ಷದ ಬ್ಯಾಟರ್ ಈ ಋತುವಿನ ಹಿಂದಿನ ವೈಟ್-ಬಾಲ್ ಪಂದ್ಯಾವಳಿಗಳಲ್ಲಿ ದೆಹಲಿ ತಂಡವನ್ನು ಮುನ್ನಡೆಸಿದ್ದರು.

"ಯಶ್ ಧುಲ್ ಪ್ರತಿಭಾವಂತ ಆಟಗಾರ. ಆದರೆ ಬ್ಯಾಟಿಂಗ್ ಫಾರ್ಮ್‌ನಿಂದ ಹೊರಗಿದ್ದಾರೆ. ಅವರು ಬ್ಯಾಟರ್ ಆಗಿ ಉತ್ತಮವಾಗಿ ರನ್ ಗಳಿಸಬೇಕೆಂದು ನಾವು ಬಯಸಿದ್ದೇವೆ. ಅದಕ್ಕಾಗಿಯೇ ನಾವು ಅವರನ್ನು ನಾಯಕತ್ವದ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದೇವೆ. ಹಿಮ್ಮತ್ ಸಿಂಗ್ ನಮ್ಮ ಹಿರಿಯ ಆಟಗಾರ ಮತ್ತು ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ನಾಯಕತ್ವ ವಹಿಸುತ್ತಾರೆ," ಎಂದು ಡಿಡಿಸಿಎ ಜಂಟಿ ಕಾರ್ಯದರ್ಶಿ ರಾಜನ್ ಮಂಚಂಡ ಪಿಟಿಐಗೆ ತಿಳಿಸಿದರು.

ಯಶ್ ಧುಲ್ ಎದುರಾಳಿ ತಂಡದ ವೇಗದ ಬೌಲರ್‌ಗಳ ವಿರುದ್ಧ ಹೋರಾಡಿದ್ದಾರೆ ಮತ್ತು ಇನ್ನಿಂಗ್ಸ್ ತೆರೆಯಲು ಇಷ್ಟವಿರಲಿಲ್ಲ. ಹಿಮ್ಮತ್ ಸಿಂಗ್ ಕಳೆದ ಋತುವಿನಲ್ಲಿ ಮಾಜಿ ಆಟಗಾರರ ಅನುಪಸ್ಥಿತಿಯಲ್ಲಿ ದೆಹಲಿ ತಂಡವನ್ನು ಮುಂಬೈ ವಿರುದ್ಧ ಮಹತ್ವದ ಗೆಲುವಿಗೆ ಕಾರಣರಾಗಿದ್ದರು. 27 ವರ್ಷದ ಹಿಮ್ಮತ್ 2017ರಲ್ಲಿ ಚೊಚ್ಚಲ ಪ್ರವೇಶ ಮಾಡಿ, 22 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ.

Ranji Trophy 2024: Delhi Removed Yash Dhul As Captain After Defeat Against Puducherry

ಯಶ್ ಧುಲ್‌ಗಿಂತ ಆರು ವರ್ಷ ಹಿರಿಯನಾಗಿರುವ ಹಿಮ್ಮತ್ ಸಿಂಗ್ ನಾಯಕತ್ವದ ಅನುಭವವನ್ನು ಹೊಂದಿದ್ದಾರೆ. ಏಕೆಂದರೆ ಯಶ್ ಧುಲ್ ಅನುಪಸ್ಥಿತಿಯಲ್ಲಿ ಹಂಗಾಮಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ಹಿಮ್ಮತ್ ಸಿಂಗ್ ಅವರು 39.13ರ ಸರಾಸರಿಯಲ್ಲಿ 1174 ರನ್ ಗಳಿಸಿದ್ದಾರೆ ಎಂಬುದು ಗಮನಾರ್ಹ ಸಂಗತಿ. ಇದಲ್ಲದೆ, ಅವರು ಕಳೆದ ಋತುವಿನಲ್ಲಿ 22 ಪ್ರಥಮ ದರ್ಜೆ ಪಂದ್ಯಗಳಲ್ಲಿ 45.25ರ ಸರಾಸರಿಯನ್ನು ಹೊಂದಿದ್ದರು.

ದೆಹಲಿ ತಂಡವು ಋತುವಿನ ಮುಂಬರುವ ಪಂದ್ಯಗಳಲ್ಲಿ ಗೆಲುವಿನತ್ತ ಹೆಜ್ಜೆ ಮತ್ತು ಎಲ್ಲರ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತದೆ. ಕಳೆದ ವರ್ಷ ಹಿರಿಯ ಆಟಗಾರರಾದ ನಿತೀಶ್ ರಾಣಾ ಮತ್ತು ಧ್ರುವ್ ಶೋರೆ ಅವರು ದೆಹಲಿ ತಂಡವನ್ನು ತೊರೆದು ಕ್ರಮವಾಗಿ ಉತ್ತರಪ್ರದೇಶ ಮತ್ತು ವಿದರ್ಭಕ್ಕೆ ತೆರಳಿದ್ದರು.

ಇಂಗ್ಲೆಂಡ್ ಲಯನ್ಸ್ ತಂಡವನ್ನು ಎದುರಿಸಲು ಭಾರತ ಎ ತಂಡದಲ್ಲಿ ಸ್ಥಾನ ಪಡೆದಿರುವ ಹಿರಿಯ ವೇಗಿ ನವದೀಪ್ ಸೈನಿ ಮತ್ತು ಇಶಾಂತ್ ಶರ್ಮಾ ದೆಹಲಿ ತಂಡದೊಂದಿಗೆ ಜಮ್ಮುವಿಗೆ ಪ್ರಯಾಣಿಸುವುದಿಲ್ಲ.

ಭಾರತ ತಂಡದ ಅನುಭವಿ ವೇಗಿ ಇಶಾಂತ್ ಶರ್ಮಾ ದೆಹಲಿಯ ತವರಿನ ಪಂದ್ಯಗಳಿಗೆ ಮಾತ್ರ ಲಭ್ಯವಿರುತ್ತಾರೆ ಎಂದು ತಿಳಿದು ಬಂದಿದೆ. ಏಳು ಬಾರಿ ರಣಜಿ ಟ್ರೋಫಿ ಗೆದ್ದಿರುವ ದೆಹಲಿ, 2007-08ರಲ್ಲಿ ಕೊನೆಯ ಬಾರಿಗೆ ಪ್ರತಿಷ್ಠಿತ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.

Story first published: Tuesday, January 9, 2024, 7:52 [IST]
Other articles published on Jan 9, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+