Ranji Trophy: ಅನಿಲ್ ಕುಂಬ್ಳೆ ರೆಕಾರ್ಡ್ ಬ್ರೇಕ್ ಮಾಡಿದ ಹರಿಯಾಣ ವೇಗಿ
ರಣಜಿ ಟ್ರೋಫಿ 2024ರ ಆವೃತ್ತಿಯಲ್ಲಿ ಹರಿಯಾಣದ ವೇಗದ ಬೌಲರ್ ಇತಿಹಾಸ ಸೃಷ್ಟಿಸಿದ್ದಾರೆ. ಕೇರಳ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಹರಿಯಾಣದ ವೇಗದ ಬೌಲರ್ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಹರಿಯಾಣದ ವೇಗದ ಬೌಲರ್ ಅನ್ಶುಲ್ ಕಾಂಬೋಜ್ ಅವರು ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿದಿದ್ದಾರೆ. ಕೇರಳ ವಿರುದ್ಧದ ಪಂದ್ಯದಲ್ಲಿ ಅನ್ಶುಲ್ ಕಾಂಬೋಜ್ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಅನ್ಶುಲ್ ಕಾಂಬೋಜ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ಆರನೇ ಮತ್ತು ರಣಜಿ ಟ್ರೋಫಿಯಲ್ಲಿ ಈ ಸಾಧನೆ ಮಾಡಿದ ಮೂರನೇ ಭಾರತದ ಬೌಲರ್ ಎನಿಸಿಕೊಂಡಿದ್ದಾರೆ. ಇದಲ್ಲದೆ, ಒಂದೇ ಇನಿಂಗ್ಸ್‌ನಲ್ಲಿ 10 ವಿಕೆಟ್ ಕಬಳಿಸಿರುವ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಲಾಹ್ಲಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೇರಳ ತಂಡದ ಶಾನ್ ರೋಜರ್ ಅವರನ್ನು ಔಟ್ ಮಾಡುವ ಮೂಲಕ ಅನ್ಶುಲ್ ಕಾಂಬೋಜ್ ಈ ಸಾಧನೆ ಮಾಡಿದ್ದಾರೆ.

ರಣಜಿ ಟ್ರೋಫಿಯಲ್ಲಿ ಈ ಹಿಂದೆ ಬಂಗಾಳದ ಪ್ರೇಮಾಂಗುಸು ಚಟರ್ಜಿ (1956-57) ಮತ್ತು ರಾಜಸ್ಥಾನದ ಪ್ರದೀಪ್ ಸುಂದರ್ಮಿನ್ (1985-86) ಒಂದೇ ಇನಿಂಗ್ಸ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸುಭಾಷ್ ಗುಪ್ತೆ (1954-55), ಅನಿಲ್ ಕುಂಬ್ಳೆ (1998-99) ಮತ್ತು ದೇಬಾಶಿಶ್ ಮೊಹಾಂತಿ (2000-01) ಈ ದಾಖಲೆ ಮಾಡಿದ್ದರು. ಇದೀಗ ಅನ್ಶುಲ್ ಕಾಂಬೋಜ್ ದಿಗ್ಗಜ ಕ್ಲಬ್‌ಗೆ ಸೇರಿರುವ ಮೂಲಕ ರಣಜಿ ಟ್ರೋಫಿ ಇತಿಹಾಸದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಅನ್ಶುಲ್ ಕಾಂಬೋಜ್ ಯಾರು?
ಇತ್ತೀಚೆಗಷ್ಟೇ ಓಮನ್‌ನಲ್ಲಿ ನಡೆದ ಎಸಿಸಿ ಎಮರ್ಜಿಂಗ್ ಏಷ್ಯಾ ಕಪ್ ಟೂರ್ನಿಯಲ್ಲಿ ಅನ್ಶುಲ್ ಕಾಂಬೋಜ್ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದರು. ಕಳೆದ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಕಾಂಬೋಜ್ ಆಡಿದ್ದರು. ಅಲ್ಲದೆ, ಅವರು 2023-24 ರಲ್ಲಿ ವಿಜಯ್ ಹಜಾರೆ ಟ್ರೋಫಿ ಗೆಲ್ಲುವಲ್ಲಿ ಹರಿಯಾಣ ಪರ ಪ್ರಮುಖ ಪಾತ್ರ ವಹಿಸಿದ್ದರು. ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಅವರು ಆಡಿದ 10 ಪಂದ್ಯಗಳಲ್ಲಿ 17 ವಿಕೆಟ್ ಪಡೆದು ಮಿಂಚಿದ್ದರು. ಕಾಂಬೋಜ್ ಇದುವರೆಗೆ 47 ಪ್ರಥಮ ದರ್ಜೆ ವಿಕೆಟ್‌ಗಳು, 23 ಲಿಸ್ಟ್-ಎ ವಿಕೆಟ್‌ಗಳು ಮತ್ತು 17 ಟಿ20 ವಿಕೆಟ್‌ಗಳನ್ನು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications