Ranji Trophy 2024: ದೆಹಲಿ ಸಂಭಾವ್ಯ ತಂಡದಲ್ಲಿ ಪಂತ್, ಕೊಹ್ಲಿ ಹೆಸರು; ಇಶಾಂತ್ ಶರ್ಮಾ ಔಟ್
ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಹೇಳಿಕೊಳ್ಳುವಂತ ಪ್ರದರ್ಶನ ನೀಡಲ್ಲ. ರನ್ ಮಷಿನ್ ಅಭಿಮಾನಿಗಳು ಕೊಹ್ಲಿ ಶತಕ ಬಾರಿಸುತ್ತಾರೆ ಎಂದು ನಿರೀಕ್ಷಿಸಿದ್ದರು. ಆದರೆ ಅವರು ಅರ್ಧಶತಕವನ್ನೂ ಗಳಿಸದೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದರು.
ಆದರೆ, ಈಗ ಕಾನ್ಪುರದಲ್ಲಿ ನಡೆಯಲಿರುವ ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಅಬ್ಬರಿಸಲು ಸಜ್ಜಾಗುತ್ತಿದ್ದಾರೆ. ಬಾಂಗ್ಲಾದೇಶ ನಂತರ ಅವರು ಈ ವರ್ಷ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಕೊಹ್ಲಿ ತಮ್ಮನ್ನು ತಾವು ಈ ಸರಣಿಗಳಿಗೆ ಸಿದ್ಧವಾಗಿರಿಸಿಕೊಳ್ಳಲು ದೇಶೀಯ ಕ್ರಿಕೆಟ್‌ನಲ್ಲಿಯೂ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇತ್ತೀಚೆಗೆ ಮುಕ್ತಾಯಗೊಂಡ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಕೊಹ್ಲಿ ಆಡಲಿಲ್ಲ. ಆದರೆ ಈಗ ಅವರು ರಣಜಿ ಟ್ರೋಫಿಯಲ್ಲಿ ಭಾಗವಹಿಸಬಹುದು.
ರಣಜಿಯಲ್ಲಿ ಕೊಹ್ಲಿ, ಪಂತ್
2019-20ರ ನಂತರ ಮೊದಲ ಬಾರಿಗೆ ರಣಜಿ ಟ್ರೋಫಿಯ ದೆಹಲಿ ಸಂಭಾವ್ಯ ತಂಡದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಸೇರ್ಪಡೆಗೊಂಡಿದ್ದಾರೆ. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ, ಕೊಹ್ಲಿಗೆ ರಣಜಿ ಟ್ರೋಫಿ ಆಡುವ ಅವಕಾಶ ಕಡಿಮೆ ಇದೆ. ಆದರೂ, ಸಂಭಾವ್ಯ ಪಟ್ಟಿಯಲ್ಲಿ ಅವರ ಹೆಸರು ಅಚ್ಚರಿ ಮೂಡಿಸಿದೆ.
ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಪ್ರಕಟಿಸಿರುವ 84 ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಮಾತ್ರವಲ್ಲ, ಟೀಮ್ ಇಂಡಿಯಾದ ಯುವ ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ರಿಷಬ್ ಪಂತ್ ಕೂಡ ಸೇರಿದ್ದಾರೆ. ಆದರೆ ಅನುಭವಿ ವೇಗಿ ಇಶಾಂತ್ ಶರ್ಮಾ ಅವರ ಹೆಸರನ್ನು ಕೈಬಿಡಲಾಗಿದೆ.
ಅಕ್ಟೋಬರ್ 11 ರಿಂದ ರಣಜಿ ಟ್ರೋಫಿ ಆರಂಭವಾಗಲಿದೆ. ಚಂಡೀಗಡ ವಿರುದ್ದ ದೆಹಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಇದೇ ವೇಳೆ ಅಕ್ಟೋಬರ್ 16ರಿಂದ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಆರಂಭವಾಗಲಿದ್ದು, ರಣಜಿ ಪಂದ್ಯದಲ್ಲಿ ಕೊಹ್ಲಿ ಮತ್ತು ಪಂತ್ ಆಡುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. 2012-13ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತರ ಪ್ರದೇಶ ವಿರುದ್ಧ ದೆಹಲಿ ತಂಡಕ್ಕಾಗಿ ವಿರಾಟ್ ಕೊಹ್ಲಿ ತಮ್ಮ ಕೊನೆಯ ಪಂದ್ಯವನ್ನಾಡಿದ್ದರು.
ದೆಹಲಿ ತಂಡಕ್ಕೆ ಆಯ್ಕೆಯಾದ ಆಟಗಾರರ ಫಿಟ್ನೆಸ್ ಟೆಸ್ಟ್ ಸೆಪ್ಟೆಂಬರ್ 26 ರಂದು ನಡೆಯಲಿದೆ. ರಾಷ್ಟ್ರೀಯ ತಂಡದಲ್ಲಿರುವ ಆಟಗಾರರಿಗೆ ಫಿಟ್ನೆಸ್ ಟೆಸ್ಟ್ ಇರುವುದಿಲ್ಲ ಎಂದು ಎಂದು ಡಿಡಿಸಿಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಯುವ ಸ್ಟಾರ್ ಬೌಲರ್‌ಗಳು
ರಣಜಿ ಟ್ರೋಪಿಯ ದೆಹಲಿ ಸಂಭಾವ್ಯ ತಂಡದಿಂದ ಇಶಾಂತ್ ಶರ್ಮಾ ಹೆಸರು ನಾಪತ್ತೆಯಾಗಿರುವುದು ಎಲ್ಲರಿಗೂ ಅಚ್ಚರಿ ತರಿಸಿದೆ. ಈಗಾಗಲೇ ಅವರು ಟೀಮ್ ಇಂಡಿಯಾದಿಂದ ಕೂಡ ಹೊರಗುಳಿದಿದ್ದಾರೆ. ಕೇವಲ ಐಪಿಎಲ್ ಮಾತ್ರ ಆಡುತ್ತಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದಾರೆ. ಮತ್ತೊಂದೆಡೆ ಐಪಿಎಲ್‌ನಲ್ಲಿ ಮಿಂಚಿದ ಯುವ ಸ್ಟಾರ್ ಬೌಲರ್‌ಗಳ ಹೆಸರು ಸಂಭಾವ್ಯ ತಂಡದ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ವೇಗಿಗಳಾದ ನವದೀಪ್ ಸೈನಿ, ಮಯಾಂಕ್ ಯಾದವ್, ಹರ್ಷಿತ್ ರಾಣಾ, ಹಿಮಾಂಶು ಚೌಹಾಣ್ ಮತ್ತು ದಿವಾಜ್ ಮೆಹ್ರಾ ಸ್ಥಾನ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications