For Quick Alerts
ALLOW NOTIFICATIONS  
For Daily Alerts
 

Ranji Trophy: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ವೇಗದ ತ್ರಿಶತಕ ಬಾರಿಸಿ ವಿಶ್ವದಾಖಲೆ ಬರೆದ ತನ್ಮಯ್ ಅಗರ್ವಾಲ್

ಶುಕ್ರವಾರ, ಜನವರಿ 26ರಂದು ಹೈದರಾಬಾದ್‌ನ ನೆಕ್ಸ್‌ಜೆನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ 2024ರ ರಣಜಿ ಟ್ರೋಫಿ ಪಂದ್ಯಾವಳಿಯ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಹೈದರಾಬಾದ್‌ನ ಆರಂಭಿಕ ಬ್ಯಾಟರ್ ತನ್ಮಯ್ ಅಗರ್ವಾಲ್ ವಿಶ್ವದಾಖಲೆಯ ಅತಿ ವೇಗದ ತ್ರಿಶತಕ ಬಾರಿಸಿದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತನ್ಮಯ್ ಅಗರ್ವಾಲ್ ಕೇವಲ 147 ಎಸೆತಗಳಲ್ಲಿ ಅತಿ ವೇಗದ ಟ್ರಿಪಲ್ ಶತಕವನ್ನು ಸಿಡಿಸಿ ದಿಗ್ಗಜ ಕ್ರಿಕೆಟಿಗರ ದಾಖಲೆಗಳನ್ನು ಅಳಿಸಿ ಹಾಕುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಅವರ ಬ್ಯಾಟಿಂಗ್ ಪ್ರದರ್ಶನವು ನೆರೆದಿದ್ದ ಹೈದರಾಬಾದ್ ಪ್ರೇಕ್ಷಕರನ್ನು ಬೆರಗುಗೊಳಿಸಿದವು.

Ranji Trophy 2024:Tanmay Agarwal Sets World Record for Fastest Triple Century in First-Class Cricket

ಮೊದಲ ದಿನದಾಟದ ಅಂತ್ಯದ ವೇಳೆಗೆ ತನ್ಮಯ್ ಅಗರ್ವಾಲ್ 160 ಎಸೆತಗಳನ್ನು ಎದುರಿಸಿ 33 ಬೌಂಡರಿ ಹಾಗೂ 21 ಸಿಕ್ಸರ್‌ಗಳ ಸಮೇತ ಅಜೇಯ 323 ರನ್ ಬಾರಿಸಿ, ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಅರುಣಾಚಲ ಪ್ರದೇಶ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 39.4 ಓವರ್‌ಗಳಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು. ಪ್ರತ್ಯುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಹೈದರಾಬಾದ್ ತಂಡ 48 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 529 ರನ್ ಕಲೆಹಾಕಿದ್ದು, 357 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.

ಇನ್ನು 2017ರಲ್ಲಿ ಪೂರ್ವ ಪ್ರಾಂತ್ಯದ ವಿರುದ್ಧ ಬಾರ್ಡರ್ ತಂಡದ ಪರ 191 ಎಸೆತಗಳಲ್ಲಿ 300 ರನ್ ಬಾರಿಸಿದ್ದ ದಕ್ಷಿಣ ಆಫ್ರಿಕಾದ ಮಾರ್ಕೊ ಮರೈಸ್ ದಾಖಲೆಯನ್ನು ತನ್ಮಯ್ ಅಗರ್ವಾಲ್ ಮುರಿದರು.

ಇದೇ ವೇಳೆ 119 ಎಸೆತಗಳಲ್ಲಿ 200 ರನ್ ಗಳಿಸಿದ ಬಳಿಕ, ಭಾರತ ತಂಡದ ಮಾಜಿ ನಾಯಕ ರವಿಶಾಸ್ತ್ರಿ ಅವರ 39 ವರ್ಷಗಳಷ್ಟು ಹಳೆಯ ಪ್ರಥಮ ದರ್ಜೆಯ ವೇಗದ ದ್ವಿಶತಕ ದಾಖಲೆಯನ್ನು ಹೈದರಾಬಾದ್ ಬ್ಯಾಟರ್ ತನ್ಮಯ್ ಅಗರ್ವಾಲ್ ಮುರಿದರು. ಇದು ಪ್ರಥಮ ದರ್ಜೆಯ ಎರಡನೇ ಅತಿ ವೇಗದ ದ್ವಿಶತಕವೆನಿಸಿತು.

ವಿಶ್ವದಾಖಲೆ ಬರೆಯುವ ಸಮಯದಲ್ಲಿ ತನ್ಮಯ್ ಅಗರ್ವಾಲ್ 21 ಸಿಕ್ಸರ್‌ಗಳನ್ನು ಸಿಡಿದಿದ್ದಾರೆ. ಇದು ರಣಜಿ ಟ್ರೋಫಿ ಇತಿಹಾಸದಲ್ಲೇ ದಾಖಲೆಯಾಗಿದೆ. ಈ ಹಿಂದೆ ಇಶಾನ್ ಕಿಶನ್ (14) ಭಾರತದ ಪ್ರಮುಖ ದೇಶೀಯ ಪಂದ್ಯಾವಳಿಯ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳ ಹಿಂದಿನ ದಾಖಲೆಯನ್ನು ಹೊಂದಿದ್ದರು.

ತನ್ಮಯ್ ಅಗರ್ವಾಲ್ ಮತ್ತು ನಾಯಕ ರಾಹುಲ್ ಸಿಂಗ್ ಗೆಹ್ಲೌಟ್ ಜೋಡಿಯು ಮೊದಲ ವಿಕೆಟ್‌ಗೆ ಕೇವಲ 40.2 ಓವರ್‌ಗಳಲ್ಲಿ 440 ರನ್‌ಗಳ ಜೊತೆಯಾಟ ನಿರ್ಮಿಸಿದರು.

ಟೆಕಿ ಡೋರಿಯಾ ಅವರ ಬೌಲಿಂಗ್‌ನಲ್ಲಿ ಔಟಾಗುವ ಮುನ್ನ ರಾಹುಲ್ ಸಿಂಗ್ 105 ಎಸೆತಗಳಲ್ಲಿ 26 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 185 ರನ್ ಗಳಿಸಿದರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವೇಗದ ತ್ರಿಶತಕ

ತನ್ಮಯ್ ಅಗರ್ವಾಲ್ - 147 ಎಸೆತಗಳು - 2024ರಲ್ಲಿ ಹೈದರಾಬಾದ್‌ನ ನೆಕ್ಸ್‌ಜೆನ್ ಕ್ರಿಕೆಟ್ ಮೈದಾನದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಹೈದರಾಬಾದ್ ತಂಡದ ಪರ.

ಮಾರ್ಕೊ ಮರೈಸ್ - 191 ಎಸೆತಗಳು - 2017/18ರಲ್ಲಿ ಪೂರ್ವ ಲಂಡನ್‌ನ ಬಫಲೋ ಪಾರ್ಕ್‌ನಲ್ಲಿ ಪೂರ್ವ ಪ್ರಾಂತ್ಯ ವಿರುದ್ಧ ಬಾರ್ಡರ್ ತಂಡದ ಪರ.

ಕೆನ್ ರುದರ್‌ಫೋರ್ಡ್ - 234 ಎಸೆತಗಳು - 1986ರಲ್ಲಿ ಸ್ಕಾರ್ಬರೋದ ನಾರ್ತ್ ಮೆರೈನ್ ರೋಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ DB ಕ್ಲೋಸ್ XI ತಂಡದ ಪರ.

ವಿವಿಯನ್ ರಿಚರ್ಡ್ಸ್ - 244 ಎಸೆತಗಳು - 1985ರಲ್ಲಿ ಟೌಂಟನ್‌ನ ಕೌಂಟಿ ಗ್ರೌಂಡ್‌ನಲ್ಲಿ ವಾರ್ವಿಕ್‌ಷೈರ್ ವಿರುದ್ಧ ಸೋಮರ್‌ಸೆಟ್ ತಂಡದ ಪರ.

ಕುಸಲ್ ಪೆರೆರಾ - 244 ಎಸೆತಗಳು - 2012/13ರಲ್ಲಿ ಕೋಲ್ಟ್ಸ್ ಕ್ರಿಕೆಟ್ ಕ್ಲಬ್‌ನಲ್ಲಿ ಸಾರಾಸೆನ್ಸ್ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ಕೊಲಂಬೊದ ಕೋಲ್ಟ್ಸ್ ಕ್ರಿಕೆಟ್ ಕ್ಲಬ್ ತಂಡದ ಪರ.

Story first published: Friday, January 26, 2024, 19:40 [IST]
Other articles published on Jan 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+