Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ranji Trophy: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದ ತನ್ಮಯ್ ಅಗರ್ವಾಲ್

ಹೈದರಾಬಾದ್ ಬ್ಯಾಟರ್ ತನ್ಮಯ್ ಅಗರ್ವಾಲ್ ಅವರು ಅರುಣಾಚಲ ಪ್ರದೇಶ ವಿರುದ್ಧದ 2024ರ ರಣಜಿ ಟ್ರೋಫಿ ಪಂದ್ಯಾವಳಿಯ ಗ್ರೂಪ್ ಪಂದ್ಯದ 2ನೇ ದಿನದಂದು ಪ್ರಥಮ ದರ್ಜೆ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಮತ್ತೊಂದು ವಿಶ್ವದಾಖಲೆ ನಿರ್ಮಿಸಿದರು.

28 ವರ್ಷದ ತನ್ಮಯ್ ಅಗರ್ವಾಲ್ ಈ ಹಿಂದೆ ಮೊದಲನೇ ದಿನದಂದು ಕೇವಲ 147 ಎಸೆತಗಳಲ್ಲಿ ತ್ರಿಶತಕ ದಾಖಲಿಸುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿವೇಗದ ತ್ರಿಶತಕದ ಹೆಗ್ಗುರುತನ್ನು ತಲುಪಿದ್ದರು.

Ranji Trophy 2024: Tanmay Agarwal Sets World Record for Most Sixes in First-class Cricket

ಹಿಂದಿನ ದಿನದ ಅಜೇಯ 323 (160) ರನ್‌ಗಳಿಂದ ತನ್ನ ಇನ್ನಿಂಗ್ಸ್ ಮುಂದುವರಿಸಿದ ತನ್ಮಯ್ ಅಗರ್ವಾಲ್ ನ್ಯೂಜಿಲೆಂಡ್‌ನ ಕಾಲಿನ್ ಮುನ್ರೊ ಅವರನ್ನು ಹಿಂದಿಕ್ಕಿ ತನ್ನ ಒಟ್ಟಾರೆ 26 ಸಿಕ್ಸರ್‌ಗಳಿಗೆ ಕೊಂಡೊಯ್ಯಲು ಇನ್ನೂ ಮೂರು ಸಿಕ್ಸರ್‌ಗಳನ್ನು ಬಾರಿಸಿದರು.

ಗಮನಾರ್ಹವಾಗಿ, ಕಿವೀಸ್‌ನ ಕಾಲಿನ್ ಮುನ್ರೊ 2015ರಲ್ಲಿ ಸೆಂಟ್ರಲ್ ಡಿಸ್ಟ್ರಿಕ್ಟ್ಸ ವಿರುದ್ಧ ಆಕ್ಲೆಂಡ್ ತಂಡದ ಪರ 23 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇದೀಗ ತನ್ಮಯ್ ಅಗರ್ವಾಲ್ ಆ ದಾಖಲೆಯನ್ನು ಮುರಿದು ಮೊದಲ ಸ್ಥಾನಕ್ಕೇರಿದರು.

ಅಫ್ಘಾನಿಸ್ತಾನದ ಶಫಿಕುಲ್ಲಾ ಶಿನ್ವಾರಿ ಅವರು ಬೂಸ್ಟ್ ವಿರುದ್ಧ ಕಾಬೂಲ್ ಪ್ರದೇಶ ತಂಡಕ್ಕಾಗಿ 22 ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

ಮತ್ತೊಂದೆಡೆ, ಪ್ರಥಮ ದರ್ಜೆ ಇನ್ನಿಂಗ್ಸ್‌ನಲ್ಲಿ ಭಾರತೀಯರು ದಾಖಲಿಸಿದ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆಯಲ್ಲಿ ಇಶಾನ್ ಕಿಶನ್ ಮತ್ತು ಶಕ್ತಿ ಸಿಂಗ್ ತಮ್ಮ ಹೆಸರಿಗೆ 14 ಸಿಕ್ಸರ್‌ಗಳನ್ನು ಹೊಂದಿದ್ದಾರೆ.

ಮೊದಲ ದಿನದಲ್ಲಿ ಈಗಾಗಲೇ ಹಲವು ವಿಶ್ವದಾಖಲೆಗಳನ್ನು ಮುರಿದ ತನ್ಮಯ್ ಅಗರ್ವಾಲ್‌ಗೆ ಹೆಚ್ಚಿನ ದಾಖಲೆ ಮುರಿಯುವ ಅವಕಾಶವಿತ್ತು. ಏಕೆಂದರೆ, 1948ರಲ್ಲಿ ಮಹಾರಾಷ್ಟ್ರದ ಪರವಾಗಿ ಅಜೇಯ 443 ರನ್ ಗಳಿಸಿದ ಭೌಸಾಹೇಬ್ ನಿಂಬಾಳ್ಕರ್ ಅವರ ಹೆಸರಿನಲ್ಲಿದ್ದ ಭಾರತೀಯರ ಅತ್ಯಧಿಕ ಪ್ರಥಮ ದರ್ಜೆ ಸ್ಕೋರ್‌ನ ದಾಖಲೆಯನ್ನು ಮುರಿಯುವ ಅವಕಾಶವನ್ನು ಅವರು ಹೊಂದಿದ್ದರು.

ಇನಿಂಗ್ಸ್ ಹಾಗೂ 187 ರನ್‌ಗಳ ಜಯ ಸಾಧಿಸಿದ ಹೈದರಾಬಾದ್

ಆದರೆ, ದುರದೃಷ್ಟವಶಾತ್ ತನ್ಮಯ್ ಅಗರ್ವಾಲ್ ತಮ್ಮ ಇನ್ನಿಂಗ್ಸ್‌ನಲ್ಲಿ ಒಟ್ಟು 34 ಬೌಂಡರಿಗಳು ಮತ್ತು 26 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ 181 ಎಸೆತಗಳಲ್ಲಿ 366 ರನ್ ಗಳಿಸಿ ಔಟಾದರು.

ಇದರ ಪರಿಣಾಮವಾಗಿ, ತನ್ಮಯ್ ಅಗರ್ವಾಲ್ ಅವರು ಎಂವಿ ಶ್ರೀಧರ್ ಜೊತೆಗೆ ಭಾರತೀಯರ ಜಂಟಿ ನಾಲ್ಕನೇ ಅತ್ಯಧಿಕ ಪ್ರಥಮ ದರ್ಜೆ ಸ್ಕೋರ್ ಅನ್ನು ದಾಖಲಿಸಿದರು. ತನ್ಮಯ್ ಅಗರ್ವಾಲ್ ಔಟಾದ ನಂತರ ಹೈದರಾಬಾದ್ ತಂಡದ 4 ವಿಕೆಟ್‌ಗೆ 615 ರನ್ ಕಲೆಹಾಕಿ 443 ರನ್‌ಗಳಿಂದ ಮುನ್ನಡೆ ಸಾಧಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಅರುಣಾಚಲ ಪ್ರದೇಶವು 256 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ದಿವ್ಯಾಾಂಶು ಯಾದವ್ 92 ಎಸೆತಗಳಲ್ಲಿ 91 ರನ್‌ಗಳೊಂದಿಗೆ ಗರಿಷ್ಠ ಸ್ಕೋರ್ ಎನಿಸಿದರು.

ಹೈದರಾಬಾದ್ ಪರ ತನಯ್ ತ್ಯಾಗರಾಜನ್ 64 ರನ್ ನೀಡಿ 3 ವಿಕೆಟ್ ಮತ್ತು ಪಾಲಕೊಡೆಟಿ ಸಾಯಿರಾಮ್ 24 ರನ್ ನೀಡಿ 3 ವಿಕೆಟ್ ಪಡೆಯುವ ಮೂಲಕ ಹೈದರಾಬಾದ್‌ಗೆ ಇನಿಂಗ್ಸ್ ಮತ್ತು 187 ರನ್‌ಗಳ ಗೆಲುವಿಗೆ ಕಾರಣರಾದರು.

Story first published: Sunday, January 28, 2024, 12:12 [IST]
Other articles published on Jan 28, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+