For Quick Alerts
ALLOW NOTIFICATIONS  
For Daily Alerts
 

Ranji Trophy: ಹೃದಯ ಶಸ್ತ್ರಚಿಕಿತ್ಸೆ ನಂತರ ಯಶ್ ಧುಲ್ ಮಿಂಚಿನ ಶತಕ; ಯುವಿ ಸ್ಟೋರಿ ನೆನಪಿಸಿದ ಯುವ ಬ್ಯಾಟರ್

ಟೀಮ್ ಇಂಡಿಯಾಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟ ಆಟಗಾರ ಎಂದಾಗ ಮೊದಲು ನೆನಪಾಗುವ ಹೆಸರು ಯುವರಾಜ್ ಸಿಂಗ್. 2011ರ ಏಕದಿನ ವಿಶ್ವಕಪ್‌ನಲ್ಲಿ ಸ್ಟಾರ್ ಆಲ್‌ರೌಂಡರ್ ತಮದಮ ವೃತ್ತಿಜೀವನ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದರು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅಬ್ಬರಿಸಿದ ಯುವರಾಜ್ ಸಿಂಗ್ ಭಾರತವನ್ನು ವಿಶ್ವಕಪ್ ಗೆಲ್ಲುವ ಸನಿಹ ಕರೆದುಕೊಂಡು ಹೋಗಿದ್ದರು.

ಇಂದು ಯುವರಾಜ್‌ ಸಿಂಗ್ ಅವರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಕ್ಯಾನ್ಸರ್‌ನಂತಹ ಮಹಾಮಾರಿ ಕಾಯಿಲೆ ವಿರುದ್ಧ ಹೋರಾಡುತ್ತಲ್ಲೇ ಭಾರತ ವಿಶ್ವ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಿಶ್ವಕಪ್ ಬಳಿಕ ಕ್ಯಾನ್ಸರ್‌ ಅನ್ನು ಸೋಲಿಸಿ ಪುನರಾಗಮನ ಮಾಡಿದ ಯುವರಾಜ್ ಅನೇಕ ಯುವ ಆಟಗಾರರಿಗೆ ಪ್ರೇರಣೆಯಾಗಿದ್ದರು. ಇದೀಗ 21ರ ಹರೆಯದ ಯಶ್ ಧುಲ್ ಜೀವನದಲ್ಲೂ ಅಂತಹದ್ದೇ ಕೆಲವು ತಿರುವುಗಳು ಕಂಡುಬಂದಿವೆ. ಅವರ ಹಾದಿಯಲ್ಲೇ ಸಾಗಿರುವ ಯಶ್ ಧುಲ್ ರಣಜಿ ಟ್ರೋಫಿಯಲ್ಲಿ ತಮಿಳುನಾಡು ವಿರುದ್ಧ ಭರ್ಜರಿ ಶತಕ ಸಿಡಿಸಿದ್ದಾರೆ. ಯಶ್ ಧುಲ್ ದೆಹಲಿ ತಂಡದ ಪರ ಆಡುತ್ತಿದ್ದಾರೆ.

Ranji Trophy 2024 Yash Dhul hits century for Delhi after heart surgery

ಅಂಡರ್ 19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಚಾಂಪಿಯನ್ ಮಾಡಿದ ಆಟಗಾರರಲ್ಲಿ ಯಶ್ ಧುಲ್ ಒಬ್ಬರು. 2022ರಲ್ಲಿ ಯಶ್ ಧುಲ್ ನಾಯಕತ್ವದಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದಿತ್ತು. ಆದರೆ ಧುಲ್ ಟೀಮ್ ಇಂಡಿಯಾ ಪರ ಪಾದರ್ಪಾಣೆ ಪಂದ್ಯವಾಡಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಯಶ್ ಧುಲ್ ಅವರ ಹೃದಯದಲ್ಲಿ ರಂಧ್ರವಿದೆ ಎಂದು ತಿಳಿದು ಬಂದಿತ್ತು. ಅದಕ್ಕಾಗಿ ಅವರು ಜುಲೈ ತಿಂಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಅವರು ರಣಜಿ ಟ್ರೋಫಿಯಲ್ಲಿ ದೆಹಲಿ ತಂಡಕ್ಕೆ ಕೊಡುಗೆ ನೀಡುತ್ತಿದ್ದಾರೆ.

ದಿಟ್ಟ ಹೋರಾಟ

ಯಶ್ ಧುಲ್ ಶಸ್ತ್ರಚಿಕಿತ್ಸೆ ತನ್ನ ಆಟದ ಮೇಲೆ ಪರಿಣಾಮ ಬೀರಲು ಬಿಡಲಿಲ್ಲ. ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಮಿಂಚಿನ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಅದ್ಭುತವಾಗಿ ಬ್ಯಾಟ್ ಬೀಸಿದ ಯಶ್ ಧುಲ್ 191 ಎಸೆತಗಳಲ್ಲಿ 11 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 105 ರನ್ ಬಾರಿಸಿ ದೆಹಲಿ ತಂಡಕ್ಕೆ ನೆರವಾದರು. ಆದರೆ, ಎರಡನೇ ಇನ್ನಿಂಗ್ಸ್‌ನಲ್ಲೂ ಯಶ್ ಧುಲ್ ಉತ್ತಮ ಟಚ್‌ನಲ್ಲಿ ಕಾಣಿಸಿಕೊಂಡರು. ಆದರೆ ದುರದೃಷ್ಟವಶಾತ್ ಅವರು 8 ರನ್‌ಗಳಿಗೆ ವಿಕೆಟ್ ಕಳೆದುಕೊಳ್ಳಬೇಕಾಯಿತು.

ಪಂದ್ಯ ಡ್ರಾ

ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ವಿರುದ್ಧ ತಮಿಳುನಾಡು ತಂಡ ಭರ್ಜರಿ ಆಲ್‌ರೌಂಡರ್ ಪ್ರದರ್ಶನ ನೀಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ತಮಿಳುನಾಡು ತಂಡ ಸಾಯಿ ಸುದರ್ಶನ್ (213), ವಾಷಿಂಗ್ಟನ್ ಸುಂದರ್ (152) ಮತ್ತು ಪ್ರದೋಶ್ ರಂಜನ್ ಪಾಲ್ (117) ಬ್ಯಾಟಿಂಗ್ ಬಲದಿಂದ 6 ವಿಕೆಟ್‌ ನಷ್ಟಕ್ಕೆ 674 ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ದೆಹಲಿ ಪರ ಯಶ್ ಧುಲ್ 105 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಆದರೆ ತಂಡದ ಇನ್ನುಳಿದ ಯಾವುದೇ ಬ್ಯಾಟರ್ ರನ್ ಗಳಿಸಲಿಲ್ಲ. ಪರಿಣಾಮ 266 ರನ್‌ಗಳಿಗೆ ದೆಹಲಿ ಆಲೌಟ್ ಆಯಿತು.

ಇದಾದ ಬಳಿಕ ಬ್ಯಾಟಿಂಗ್ ಮಾಡದ ತಮಿಳುನಾಡು ಎರಡನೇ ಇನ್ನಿಂಗ್ಸ್‌ ಅನ್ನು ಡಿಕ್ಲೇರ್ ಎಂದು ಘೋಷಿಸಿತ್ತು. ಈ ಸಂದರ್ಭದಲ್ಲಿ ದೆಹಲಿ ಕೊನೆಯ ದಿನದಾಟದಂದು 8 ವಿಕೆಟ್‌ ಕಳೆದುಕೊಂಡು 193 ರನ್ ಕಲೆ ಹಾಕಿತ್ತು. ಹೀಗಾಗಿ ತಮಿಳುನಾಡು ಮತ್ತು ದೆಹಲಿ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.

Story first published: Monday, October 21, 2024, 20:15 [IST]
Other articles published on Oct 21, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+