Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಣಜಿ ಟ್ರೋಫಿಗೆ ಬಲಿಷ್ಠ ಮುಂಬೈ ತಂಡ ಪ್ರಕಟ, ಸೂರ್ಯಕುಮಾರ್ ನಾಯಕ

Ranji Trophy: Ajinkya Rahane, Prithvi Shaw in Mumbai squad

ಮುಂಬೈ, ಡಿಸೆಂಬರ್ 3: ರಣಜಿ ಟ್ರೋಫಿ ಟೂರ್ನಿಗಾಗಿ ಮುಂಬೈ, 15 ಜನರನ್ನೊಳಗೊಂಡ ಬಲಿಷ್ಠ ತಂಡವನ್ನು ಪ್ರಟಿಸಿದೆ. ಟೆಸ್ಟ್‌ ಸ್ಪೆಷಾಲಿಸ್ಟ್ ಅಜಿಂಕ್ಯ ರಹಾನೆ ಮತ್ತು ಯುವ ಸ್ಫೋಟಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ರಣಜಿ ಟ್ರೋಫಿ ಟೂರ್ನಿ ಡಿಸೆಂಬರ್ 9ರಿಂದ ಆರಂಭಗೊಳ್ಳಲಿದೆ.

ದೇಸಿ ಕ್ರಿಕೆಟ್‌ನಲ್ಲಿ ಒಟ್ಟು 41 ಬಾರಿ ಚಾಂಪಿಯನ್ ಪಟ್ಟ ಗೆದ್ದಿರುವ ಮುಂಬೈ ತಂಡ, ಡಿಸೆಂಬರ್ 9ರಿಂದ ಗುಜರಾತ್‌ನ ವಡೋದರಾದಲ್ಲಿ ಆರಂಭಗೊಳ್ಳಲಿರುವ 2019-20ರ ರಣಜಿ ಟ್ರೋಫಿಯಲ್ಲಿ ಮೊದಲ ಪಂದ್ಯವಾಗಿ ಬರೋಡಾ ಸವಾಲು ಸ್ವೀಕರಿಸಲಿದೆ.

ಮುಂಬೈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಅನುಭವಿ ವಿಕೆಟ್ ಕೀಪರ್ ಆದಿತ್ಯ ತಾರೆ ಉಪನಾಯಕರಾಗಿರಲಿದ್ದಾರೆ. ಶ್ರೇಯಸ್ ಐಯ್ಯರ್ ಮತ್ತು ಆಲ್ ರೌಂಡರ್ ಶಿವಂ ದೂಬೆ ಅವರನ್ನು ತಂಡದಲ್ಲಿ ಪರಿಗಣಿಸಲಾಗಿಲ್ಲ. ಇಬ್ಬರೂ ರಾಷ್ಟ್ರೀಯ ತಂಡದಲ್ಲಿರುವುದು ಇದಕ್ಕೆ ಕಾರಣ.

ಮುಂಬೈ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಆದಿತ್ಯ ತಾರೆ (ಉಪ ನಾಯಕ), ಅಜಿಂಕ್ಯ ರಹಾನೆ, ಪೃಥ್ವಿ ಶಾ, ಜೈ ಬಿಸ್ತಾ, ಶುಭಮ್ ರಂಜನೆ, ಆಕಾಶ್ ಪಾರ್ಕರ್, ಸರ್ಫರಾಜ್ ಖಾನ್, ಶಮ್ಸ್ ಮುಲಾನಿ, ವಿನಾಯಕ್ ಭೋಯಿರ್, ಶಶಾಂಕ್ ಅತ್ತಾರ್ಡೆ, ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಧವಲ್ ಕುಲಕರ್ಣಿ, ಏಕನಾತ್ ಕೆರ್ಕಾರ್.

Story first published: Tuesday, December 3, 2019, 16:18 [IST]
Other articles published on Dec 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+