ರಣಜಿ ಪಂದ್ಯದ ವೇಳೆ ಗಾಯಗೊಂಡ ಅಂಪೈರ್ ಜಾನ್
ದಿಂಡಿಗಲ್, ಡಿ.02: ತಮಿಳುನಾಡು ಹಾಗೂ ಪಂಜಾಬ್‌ನ ನಡುವೆ ನಡೆದಿರುವ ರಣಜಿ ಟ್ರೋಫಿ ಪಂದ್ಯದ ವೇಳೆ ಆಸ್ಟ್ರೇಲಿಯಾ ಅಂಪೈರ್ ರೊಬ್ಬರಿಗೆ ತಲೆಗೆ ಪೆಟ್ಟು ಬಿದ್ದ ಘಟನೆ ನಡೆದಿದೆ.
ಮಂಗಳವಾರ ಆರಂಭವಾದ ರಣಜಿ ಪಂದ್ಯದ ವೇಳೆ ಆಸ್ಟ್ರೇಲಿಯಾದ ಅಂಪೈರ್ ಜಾನ್ ವಾರ್ಡ್ ತಲೆಗೆ ಚೆಂಡು ತಾಗಿದೆ. ತೀವ್ರವಾಗಿ ಗಾಯಗೊಂಡ ಅಂಪೈರ್ ಜಾನ್ ರನ್ನು ತಕ್ಷಣವೇ ಸಮೀಪ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. [ದುರಂತ ಅಂತ್ಯ ಕಂಡ ಕ್ರಿಕೆಟರ್ಸ್ ಪಟ್ಟಿ]
ಪಂಜಾಬ್ ತಂಡದ ಬ್ಯಾಟ್ಸ್ ಮನ್ ರಾಜ್ವಿಂದರ್ ಸಿಂಗ್ ಅವರು ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ರಾಜ್ವಿಂದರ್ ಹೊಡೆದ ಚೆಂಡು ನೇರವಾಗಿ ಅಂಪೈರ್ ವಾರ್ಡ್ ಅವರ ತಲೆಗೆ ಅಪ್ಪಳಿಸಿದೆ. ವಾರ್ಡ್‌ರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ದಿಂಡಿಗಲ್ ಪೊಲೀಸರು ತಿಳಿಸಿದ್ದಾರೆ. [ದುರಂತ ಅಂತ್ಯ ಕಂಡ ಕೊಡಗಿನ ಕ್ರಿಕೆಟರ್]

ತಮಿಳುನಾಡಿನ ಬೌಲರ್ ಚಂದ್ರಶೇಖರ್ ಎಸೆದ ಚೆಂಡನ್ನು ರಾಜ್ವಿಂದರ್ ನೇರವಾಗಿ ಡ್ರೈವ್ ಮಾಡಲು ಯತ್ನಿಸಿದರು ಅದರೆ, ಚೆಂಡು ಗಾಳಿಯಲ್ಲಿ ತೇಲುತ್ತಾ ಮುಖ್ಯ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವಾರ್ಡ್ ತಲೆಗೆ ಚೆಂಡು ಅಪ್ಪಳಿಸಿತು ಎಂದು ಮೈದಾನದಲ್ಲಿದ್ದ ಇತರೆ ಆಟಗಾರರು ಹೇಳಿದ್ದಾರೆ. ಪಳನಿಯ ಆಸ್ಪತ್ರೆಯೊಂದರಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನೂ ಚೇತರಿಕೆ ಕಂಡು ಬಂದಿಲ್ಲ ಎಂದು ತಿಳಿದು ಬಂದಿದೆ. [ಎದೆಗೆ ಚೆಂಡು ಬಡಿದು ಯುವ ಕ್ರಿಕೆಟರ್ 'ದುರಂತ' ಸಾವು]
ಮೈದಾನದಲ್ಲಿ ಪೆಟ್ಟು ದುರಂತ ಸಾವನ್ನಪ್ಪಿದ ಆಸ್ಟ್ರೇಲಿಯಾದ ಕ್ರಿಕೆಟರ್ ಫಿಲ್ ಹ್ಯೂಸ್ ಪ್ರಕರಣದ ನಂತರ ಇನ್ನೂ ಕೆಲವು ಕ್ರಿಕೆಟರ್ಸ್ ಕೂಡಾ ಮೈದಾನದಲ್ಲಿ ಆದ ದುರಂತಕ್ಕೆ ಬಲಿಯಾಗಿದ್ದರು. ಫಿಲ್ ಹ್ಯೂಸ್ ಸಾವಿನ ನಂತರ ಎದ್ದಿದ್ದ ಪ್ರಶ್ನೆ ಮತ್ತೊಮ್ಮೆ ಕೇಳಿ ಬರುತ್ತಿದೆ. ಕ್ರಿಕೆಟ್ ನಲ್ಲಿ ಸುರಕ್ಷಿತ ನಿಯಮಗಳು ಎಷ್ಟರಮಟ್ಟಿಗೆ ಪಾಲಿಸಲಾಗುತ್ತಿದೆ. ಜೀವಕ್ಕೆ ಕುತ್ತುಂಟಾಗುವ ಮಾದರಿ ಆಟಕ್ಕೆ ನಿಯಂತ್ರಣ ಸಾಧ್ಯವಿಲ್ಲವೇ? (ಪಿಟಿಐ)
Story first published: Wednesday, January 3, 2018, 10:03 [IST]
Other articles published on Jan 3, 2018
Read in English: Umpire suffers head injury during match
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications