ರಣಜಿ: ಗಂಭೀರ್ ಪಡೆ ಮೇಲೆ ಕರ್ನಾಟಕದ ಸವಾರಿ
ಕೋಲ್ಕತ್ತಾ, ಅಕ್ಟೋಬರ್ 21: ಗೌತಮ್ ಗಂಭೀರ್ ನೇತೃತ್ವದ ದೆಹಲಿ ತಂಡದ ವಿರುದ್ಧ ಕರುಣ್ ನಾಯರ್ ನೇತೃತ್ವದ ಕರ್ನಾಟಕ ತಂಡ ದಿಟ್ಟ ಪ್ರದರ್ಶನ ನೀಡುತ್ತಿದೆ. ಕರ್ನಾಟಕ ತನ್ನ ಎರಡನೇ ಪಂದ್ಯದಲ್ಲಿ ದೆಹಲಿಯನ್ನು 90 ರನ್ ಗಳಿಗೆ ಆಲೌಟ್ ಮಾಡಿದ್ದಲ್ಲದೆ, ಇನ್ನಿಂಗ್ಸ್ ಮುನ್ನಡೆಯನ್ನು ಪಡೆದುಕೊಂಡಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ದು ಕೊಂಡ ಕರ್ನಾಟಕ ಮೊದಲ ದಿನದ ಪಿಚ್ ಸಂಪುರ್ಣ ಲಾಭ ಪಡೆದುಕೊಂಡಿತು. ಕರ್ನಾಟಕದ ಪರ ಎಸ್. ಅರವಿಂದ್ (12 ಕ್ಕೆ 4) ಮತ್ತು ಕೆ. ಗೌತಮ್ (26 ಕ್ಕೆ 3) ಅದ್ಭುತ ಬೌಲಿಂಗ್ ನೆರವಿನಿಂದ ದೆಹಲಿ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 90 ರನ್ಗಳಿಗೆ ಅಲೌಟ್ ಮಾಡಿದೆ.

ಮೊದಲ ದಿನದ ಮೊದಲ ಸೆಷನ್ ನಲ್ಲೇ ಗಂಭೀರ್ ತಂಡ ಸರ್ವಪತನ ಕಂಡಿದೆ. 35.5 ಓವರ್ಗಳಲ್ಲಿ ಆಲೌಟ್ ಆದ ದೆಹಲಿ ಪರ ನಾಯಕ ಗಂಭೀರ್ ಕೇವಲ 2 ರನ್ ಗಳಿಸಿದರು. ದೆಹಲಿ ತಂಡದ ಪರ ರಿಷಬ್ ಪಂತ್ (24), ಧೃವ ಶೌರಿ (24) ಮತ್ತು ಮನನ್ ಶರ್ಮಾ (15) ಮಾತ್ರ ಸ್ಪಲ್ಪ ಪ್ರತಿರೋಧ ಒಡ್ಡಿದರು. ಕರ್ನಾಟಕದ ಪರ ಅರವಿಂದ್ 4, ಗೌತಮ್ 3 ಮತ್ತು ಅಭಿಮನ್ಯು ಮಿಥುನ್ 2, ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರು.
ಸಮರ್ಥ್ ಹಾಗೂ ಮಾಯಾಂಕ್ ಅರ್ಧ ಶತಕದ ನೆರವಿನಿಂದ ಮೊದಲ ದಿನವೇ ಇನ್ನಿಂಗ್ಸ್ ಪಡೆದ ಕರ್ನಾಟಕಕ್ಕೆ ನಾಯಕ ಕರುಣ್ ನಾಯರ್ ಮತ್ತೊಮ್ಮೆ ಆಸರೆಯಾಗಿ ವಿಕೆಟ್ ಕಾಯ್ದುಕೊಂಡಿದ್ದಾರೆ. ರಾಬಿನ್ ಉತ್ತಪ್ಪ 5 ರನ್ ಗಳಿಸಿ ನಿರಾಶೆ ಮೂಡಿಸಿದರು.
ಸಂಕ್ಷಿಪ್ತ ಸ್ಕೋರ್
ದೆಹಲಿ ಮೊದಲ ಇನಿಂಗ್ಸ್ 35.5 ಓವರ್ 90 ಕ್ಕೆ ಆಲೌಟ್ (ರಿಷಬ್ ಪಂತ್ 24, ಧೃವ 24, ಅರವಿಂದ್ 12 ಕ್ಕೆ 4, ಗೌತಮ್ 26 ಕ್ಕೆ 3, ಮಿಥುನ್ 29 ಕ್ಕೆ 2, ಗೋಪಾಲ್ 0 ಕ್ಕೆ 1)
ಕರ್ನಾಟಕ ಮೊದಲ ಇನ್ನಿಂಗ್ಸ್ : 66 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 197(ಆರ್ ಸಮರ್ಥ್ 53, ಮಾಯಾಂಕ್ ಅಗರವಾಲ್ 56. ಕರುಣ್ ನಾಯರ್ ಅಜೇಯ 34, ಕೆ ಅಬ್ಬಾಸ್ 29, ವಿ ಟೊಕಾಸ್ 50ಕ್ಕೆ2)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications