ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್: 9ನೇ ಪ್ರಶಸ್ತಿಯ ಕನಸಿನಲ್ಲಿ ಕರ್ನಾಟಕ
ವಾಣಿಜ್ಯ ನಗರಿ ಎಂದೇ ಖ್ಯಾತಿ ಪಡೆದಿದ್ದ ಹುಬ್ಬಳ್ಳಿ, ಈಗ ಕ್ರಿಕೆಟ್ ಪ್ರಿಯರ ಚಿತ್ತ ಕದ್ದಿದೆ. ಮಂಗಳವಾರದಿಂದ ಐದು ದಿನಗಳ ಕಾಲ ದೇಶದ ಕ್ರಿಕೆಟ್ ಅಭಿಮಾನಿಗಳ ಚಿತ್ತ ಹುಬ್ಬಳ್ಳಿಯ ಮೇಲೆ ನೆಟ್ಟಿದೆ. ಹುಬ್ಬಳ್ಳಿಯಲ್ಲಿ ಇದೇ ಎರಡನೇ ಬಾರಿಗೆ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಈ ಬಾರಿ ಫೈನಲ್ ಪಂದ್ಯಕ್ಕೆ ಚೋಟಾ ಮುಂಬೈ ಆತಿಥ್ಯ ನೀಡಲಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಕರ್ನಾಟಕ ಹಾಗೂ ಜಮ್ಮು ಕಾಶ್ಮೀರ ತಂಡಗಳು ಫೈಟ್ ನಡೆಸಲಿವೆ. ಕರ್ನಾಟಕ ರಣಜಿ ಟ್ರೋಫಿಯಲ್ಲಿ 9ನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವತ್ತ ಚಿತ್ತ ನೆಟ್ಟರೆ, ಜಮ್ಮು ಕಾಶ್ಮೀರ್ ಚೊಚ್ಚಲ ಬಾರಿಗೆ ಟ್ರೋಫಿಯನ್ನು ಎತ್ತುಕ ಕನಸು ಕಾಣುತ್ತಿದೆ.
ಸ್ಟಾರ್ ಆಟಗಾರರನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ತುದಿಗಾಲಿನಲ್ಲಿ ನಿಂತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಕರುಣ್ ನಾಯರ್ ಅವರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಕರ್ನಾಟಕ ಈ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಕರ್ನಾಟಕ 11 ವರ್ಷಗಳ ಬಳಿಕ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ಕನಸು ಕಾಣುತ್ತಿದೆ. ಕರ್ನಾಟಕ ತಂಡದಲ್ಲಿರುವ ಸ್ಟಾರ್ ಆಟಗಾರರು ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದು ತಂಡಕ್ಕೆ ಆನೆ ಬಲ ತುಂಬಿದಂತೆ ಆಗಿದೆ.
ಕರ್ನಾಟಕದ ಪರ ರಣಜಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ಸ್
ಆರ್.ಸ್ಮರಣ್, 8 ಪಂದ್ಯ, 950 ರನ್
ಕರುಣ್ ನಾಯರ್, 8 ಪಂದ್ಯ, 699 ರನ್
ಮಾಯಂಕ್ ಅಗರ್‌ವಾಲ್, 8 ಪಂದ್ಯ, 518 ರನ್
ಕರ್ನಾಟಕ ತಂಡದಲ್ಲಿ ಅನುಭವಿ ಬೌಲರ್‌ಗಳ ದಂಡೇ ಇದೆ. ಈ ಬೌಲರ್‌ಗಳು ತಮ್ಮ ಬಿಗುವಿನ ದಾಳಿಯ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿ ಇಲ್ಲಿದೆ.
ರಾಜ್ಯದ ಪರ ಗರಿಷ್ಠ ವಿಕೆಟ್ ಪಡೆದ ಸಾಧಕರು
ಶ್ರೇಯಸ್ ಗೋಪಾಲ್, 9 ಪಂದ್ಯ, 46 ವಿಕೆಟ್
ವಿದ್ವತ್ ಕಾವೇರಪ್ಪ, 6 ಪಂದ್ಯ, 21 ವಿಕೆಟ್
ಶಿಖರ್ ಶೆಟ್ಟಿ, 7 ಪಂದ್ಯ, 21 ವಿಕೆಟ್
ದೊಡ್ಡ ದಾಖಲೆಯ ಕನಸಿನಲ್ಲಿ ಸ್ಮರಣ್
ಆರ್.ಸ್ಮರಣ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಫೈನಲ್ ಪಂದ್ಯದಲ್ಲಿ ಇನ್ನು 50 ರನ್ ಸಿಡಿಸಿದರೆ ಒಂದೇ ಸರಣಿಯಲ್ಲಿ 1000 ರನ್ ಕಲೆ ಹಾಕಿದ ಸಾಧನೆ ಮಾಡಲಿದ್ದಾರೆ. ಈ ಮೊದಲು ಈ ಟೂರ್ನಿಯಲ್ಲಿ ಕರ್ನಾಟಕದ ಕೇವಲ ನಾಲ್ಕು ಆಟಗಾರರು ಮಾತ್ರ ಸಾವಿರ ರನ್ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಈ ಸರಣಿಯಲ್ಲಿ ವಿಜಯ್ ಭಾರದ್ವಾಜ್ (1998-99), ರಾಹುಲ್ ದ್ರಾವಿಡ್ (2013-14), ಮತ್ತು ಮಯಾಂಕ್ ಅಗರ್‌ವಾಲ್ (2017-18) ಮಾತ್ರ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು 2017-18ರ ಸಾಲಿನಲ್ಲಿ ವಾಸೀಮ್ ಜಾಫರ್ ಸಾವಿರ ರನ್ ಸಾಧನೆ ಮಾಡಿದ್ದರು.
ಪಿಚ್ ವರದಿ
ಈ ಋತುವಿನಲ್ಲಿ ಹುಬ್ಬಳ್ಳಿಯಲ್ಲಿ ಇದುವರೆಗೆ ಕೇವಲ ಒಂದು ಪಂದ್ಯ ಮಾತ್ರ ನಡೆದಿದ್ದು, ಅದರಲ್ಲಿ ಕರ್ನಾಟಕ ತಂಡ ಚಂಡೀಗಢ ವಿರುದ್ಧ ಇನ್ನಿಂಗ್ಸ್ ಮತ್ತು 185 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಪಂದ್ಯದ ಐದೂ ದಿನಗಳಲ್ಲಿ ಮಳೆಯ ಮುನ್ಸೂಚನೆ ಇಲ್ಲ.
ಕರ್ನಾಟಕ ಸಂಭಾವ್ಯ ತಂಡ: ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಆರ್ ಸ್ಮರಣ್, ಶ್ರೇಯಸ್ ಗೋಪಾಲ್, ಕೃತಿಕ ಕೃಷ್ಣ, ವಿದ್ಯಾಧರ್ ಪಾಟೀಲ್, ವಿಜಯಕುಮಾರ್ ವೈಶಾಕ್, ಶಿಖರ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ.
ಜಮ್ಮು ಮತ್ತು ಕಾಶ್ಮೀರ ಸಂಭಾವ್ಯ ತಂಡ: ಶುಭಂ ಖಜುರಿಯಾ, ಯಾವರ್ ಹಸನ್, ಶುಭಂ ಪುಂಡಿರ್, ಪರಸ್ ಡೋಗ್ರಾ, ಅಬ್ದುಲ್ ಸಮದ್, ಕನ್ಹಯ್ಯ ವಾಧವನ್, ಆಬಿದ್ ಮುಷ್ತಾಕ್, ವಂಶಜ್ ಶರ್ಮಾ, ಔಕಿಬ್ ನಬಿ, ಯುಧ್ವೀರ್ ಸಿಂಗ್, ಸುನಿಲ್ ಕುಮಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications