For Quick Alerts
ALLOW NOTIFICATIONS  
For Daily Alerts
 

Ranji Trophy: ಜಮ್ಮು ಮತ್ತು ಕಾಶ್ಮೀರದ ಸೆಮಿಫೈನಲ್ ಕನಸು ಒಂದು ರನ್‌ನಿಂದ ನುಚ್ಚುನೂರು

ರಣಜಿ ಟ್ರೋಫಿ ಇತಿಹಾಸದಲ್ಲಿ ಕೇವಲ ಒಂದು ರನ್ ಮುನ್ನಡೆಯಿಂದಾಗಿ ತಂಡವೊಂದು ಸೆಮಿಫೈನಲ್ ತಲುಪಿದ್ದು ಇದೇ ಮೊದಲು. ಈ ಪವಾಡ 2024-25ರ ರಣಜಿ ಟ್ರೋಫಿಯ ಕೇರಳ ಮತ್ತು ಜಮ್ಮು ಮತ್ತು ಕಾಶ್ಮೀರ ನಡುವೆ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಂಭವಿಸಿದೆ. ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಡ್ರಾ ಆಗಿತ್ತು. ಆದರೆ ಕೇರಳ ಮೊದಲ ಇನ್ನಿಂಗ್ಸ್‌ನಲ್ಲಿ ಒಂದು ರನ್ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಗಿತ್ತು. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್ ತಲುಪುವ ಕನಸು ಭಗ್ನವಾಯಿತು. ಇತ್ತ ಕೇರಳ ಸೆಮಿಫೈನಲ್ ಪ್ರವೇಶಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು 280 ರನ್‌ಗಳಿಗೆ ಆಲೌಟ್ ಮಾಡಿದ ನಂತರ, ಕೇರಳ ಮೊದಲ ಇನ್ನಿಂಗ್ಸ್‌ನಲ್ಲಿ 281 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಇದರಲ್ಲಿ ಕೊನೆಯ ವಿಕೆಟ್‌ಗೆ ನಿರ್ಣಾಯಕ 81 ರನ್‌ಗಳ ಜೊತೆಯಾಟ ಸೇರಿತ್ತು. ಜಮ್ಮು ಮತ್ತು ಕಾಶ್ಮೀರ ತಂಡವು ತನ್ನ ಎರಡನೇ ಇನ್ನಿಂಗ್ಸ್ ಅನ್ನು 9 ವಿಕೆಟ್ ನಷ್ಟಕ್ಕೆ 399 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. 1 ರನ್ ಮುನ್ನಡೆಯೊಂದಿಗೆ ಕೇರಳ ತಂಡವು 399 ರನ್‌ಗಳ ಗುರಿಯನ್ನು ತಲುಪಿತು.

Ranji Trophy Jammu and Kashmir semi-final dream against Kerala shattered by one run

ಎರಡನೇ ಇನ್ನಿಂಗ್ಸ್‌ನಲ್ಲಿ ಕೇರಳ ತಂಡ 6 ವಿಕೆಟ್ ಕಳೆದುಕೊಂಡು ಕೇವಲ 295 ರನ್ ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದರಿಂದಾಗಿ, ರಣಜಿ ಟ್ರೋಫಿಯಲ್ಲಿ ಕೇರಳ ತಂಡವು ಒಂದು ರನ್ ಮುನ್ನಡೆಯೊಂದಿಗೆ ಸೆಮಿಫೈನಲ್ ತಲುಪಿದ ಅಪರೂಪದ ದಾಖಲೆ ಮಾಡಿತು.

ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಜಮ್ಮು ಮತ್ತು ಕಾಶ್ಮೀರ ಪುರುಷರ ಸೀನಿಯರ್ ತಂಡವನ್ನು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ ಶುಕ್ರವಾರ ಸನ್ಮಾನಿಸಲಿದೆ. ಅಭಿನಂದನಾ ಸಮಾರಂಭವು ಬೆಳಿಗ್ಗೆ 11 ಗಂಟೆಗೆ ಜೆಕೆಸಿಎ ಮೈದಾನದಲ್ಲಿ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರ ತಂಡವು ಟೀಮ್ ಇಂಡಿಯಾದ ಏಳು ಸ್ಟಾರ್ ಆಟಗಾರರು ಆಡುತ್ತಿದ್ದ ಮುಂಬೈನಂತಹ ಬಲಿಷ್ಠ ತಂಡವನ್ನು ಸೋಲಿಸಿದೆ.

ರಣಜಿ ಸೆಮಿಫೈನಲಿಸ್ಟ್‌ಗಳು

ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ವಿದರ್ಭ ತಂಡವು ತಮಿಳುನಾಡನ್ನು, ಮುಂಬೈ ತಂಡವು ಹರಿಯಾಣವನ್ನು, ಗುಜರಾತ್ ತಂಡವು ಸೌರಾಷ್ಟ್ರವನ್ನು ಮತ್ತು ಕೇರಳ ತಂಡವು ಜಮ್ಮು ಮತ್ತು ಕಾಶ್ಮೀರವನ್ನು ಸೋಲಿಸಿ ಸೆಮಿಫೈನಲ್‌ಗೆ ಪ್ರವೇಶಿಸಿವೆ. ಫೆಬ್ರವರಿ 17 ರಿಂದ ಆರಂಭವಾಗುವ ಸೆಮಿಫೈನಲ್‌ನಲ್ಲಿ ಮುಂಬೈ ತಂಡವನ್ನು ವಿದರ್ಭ ಎದುರಿಸಲಿದೆ. ಮತ್ತೊಂದೆಡೆ ಗುಜರಾತ್ ಮತ್ತು ಕೇರಳ ತಂಡಗಳು ಮುಖಾಮುಖಿಯಾಗಲಿವೆ.

Story first published: Thursday, February 13, 2025, 22:40 [IST]
Other articles published on Feb 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+