ರಣಜಿ ಟ್ರೋಫಿ: ರಾಜಸ್ಥಾನ ಎದುರು ಕರ್ನಾಟಕ ಗೆಲ್ಲಲು 139 ರನ್ ಅಗತ್ಯ

ಬೆಂಗಳೂರು, ಜನವರಿ 17: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಮತ್ತು ರಾಜಸ್ತಾನ ತಂಡಗಳು ಮುಖಾಮುಖಿಯಾಗಿವೆ. ಕರ್ನಾಟಕ್ಕೆ ಗೆಲ್ಲಲು ಇನ್ನು 139 ರನ್ ಗಳ ಅಗತ್ಯವಿದೆ.
ದ್ವಿತೀಯ ಇನ್ನಿಂಗ್ಸ್ ಗೆ ಇಳಿದಿರುವ ಕರ್ನಾಟಕ ಗುರುವಾರ (ಜನವರಿ 17) ದಿನದಾಂತ್ಯಕ್ಕೆ 18 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದು 45 ರನ್ ಪೇರಿಸಿತ್ತು. ರವಿ ಕುಮಾರ್ ಸಮರ್ಥ್ 16, ದೇಗಾ ನಿಶ್ಚಲ್ 1, ಕೃಷ್ಣಮೂರ್ತಿ ಸಿದ್ಧಾರ್ಥ್ 5 ರನ್ ನೊಂದಿಗೆ ನಿರ್ಗಮಿಸಿದ್ದಾರೆ. ಕರುಣ್ ನಾಯರ್ (18 ರನ್) ಮತ್ತು ರೋನಿತ್ ಮೋರೆ (5) ಕ್ರೀಸ್‌ನಲ್ಲಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟಿದ್ದ ರಾಜಸ್ಥಾನ ಮೊದಲ ಇನ್ನಿಂಗ್ಸ್‌ನಲ್ಲಿ 224 ಮತ್ತು ದ್ವಿತೀಯ ಇನ್ನಿಂಗ್ಸ್‌ನಲ್ಲಿ 222 ರನ್ ಪೇರಿಸಿತ್ತು. ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 263 ರನ್ ಪೇರಿಸುವುದರೊಂದಿಗೆ 39 ರನ್ ಮುನ್ನಡೆಯಲ್ಲಿತ್ತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಅಮೂಲ್ಯ 3 ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿರುವುದು ಹಿನ್ನಡೆಯಾಗಿ ಕಾಣಿಸಿದೆ. ಆದರೆ ಎಚ್ಚರಿಕೆ ಆಟ ತಂಡಕ್ಕೆ ಗೆಲುವು ತಂದುಕೊಡಬಲ್ಲದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications