Ranji Trophy: ಕೇರಳಕ್ಕೆ ಫಾಲೋ ಆನ್ ನೀಡಿದ ಕರ್ನಾಟಕ: ದೀಪಕ್ ಹೂಡಾ ದ್ವಿಶತಕ
ಮಂಗಲಾಪುರದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ "ಬಿ" ಗುಂಪಿನ ಪಂದ್ಯದಲ್ಲಿ ಕರ್ನಾಟಕ ಬಿಗಿ ಹಿಡಿತ ಸಾಧಿಸಿದೆ. ಸೋಮವಾರ ಕರ್ನಾಟಕ ಆತಿಥೇಯ ಕೇರಳ ತಂಡಕ್ಕೆ ಫಾಲೋ ಆನ್ ನೀಡಿದ್ದು, ಎರಡನೇ ಇನಿಂಗ್ಸ್‌ನಲ್ಲಿ ಕೇರಳ 338 ರನ್ ಹಿನ್ನಡೆ ಅನುಭವಿಸುತ್ತಿದೆ.
ಮೂರನೇ ದಿನದಾಟವನ್ನು ಕೇರಳ 3 ವಿಕೆಟ್‌ಗೆ 21 ರನ್‌ಗಳಿಂದ ಆಟ ಮುಂದುವರಿಸಿ, ದಿನದಾಟದಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 10 ರನ್ ಕಲೆ ಹಾಕಿದೆ. ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕ ತಂಡದ ಬಿಗುವಿನ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದ ಕೇರಲ ಫಾಲೋ ಆನ್‌ಗೆ ಒಳಗಾಯಿತು. ಈ ವೇಳೆ ತಂಡಕ್ಕೆ ಬಾಬಾ ಅಪರ್ಜಿತ್ ಅವರನ್ನು ಹೊರತು ಪಡಿಸಿ ಬೇರೆ ಯಾವ ಬ್ಯಾಟರ್ ಆಧಾರವಾಗಲಿಲ್ಲ. ಬಾಬಾ 159 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಸಹಾಯದಿಂದ 88 ರನ್ ಸಿಡಿಸಿ ತಂಡದ ಪರ ಮೊತ್ತವನ್ನು ಹಿಗ್ಗಿಸಿದರು.

ಮಧ್ಯಮ ಕ್ರಮಾಂಕದಲ್ಲಿ ಅಹ್ಮದ್ ಇಮ್ರಾನ್ 31, ಶಾನ್ ರೋಜರ್ 29 ರನ್ ಬಾರಿಸಿ ತಡಕ್ಕೆ ಆಧಾರವಾದರು. ಪರಿಣಾಮ ಕೇಳರ ಮೊದಲ ಇನಿಂಗ್ಸ್‌ನಲ್ಲಿ 238 ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕ ಕೇರಳಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಮತ್ತೆ ಬ್ಯಾಟಿಂಗ್ ಮಾಡಲು ಆಹ್ವಾನ್ ನೀಡಿತು. ಮೊದಲ ಇನಿಂಗ್ಸ್‌ನಲ್ಲಿ ವಿದ್ವತ್ ಕಾವೇರಪ್ಪ 42 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇನ್ನು ಇನ್ನೋರ್ವ ವೇಗಿ ವಿಜಯಕುಮಾರ್ ವೈಶಾಖ್ 3 ವಿಕೆಟ್ ಪಡೆದರು. ಎರಡನೇ ಇನಿಂಗ್ಸ್‌ನಲ್ಲಿ ಕೇರಳ ಪರ ಕೃಷ್ಣ ಪ್ರಸಾದ್, ಎಂಡಿ ನಿದೇಶ್ ಅಜೇಯರಾಗಿ ಉಳಿದಿದ್ದು, ಕೇರಳ ಸೋಲಿನ ಭೀತಿ ಎದುರಿಸುತ್ತಿದೆ. ಎರಡನೇ ಇನಿಂಗ್ಸ್‌ನಲ್ಲಿ ಕರ್ನಾಟಕ ಬಿಗುವಿನ ದಾಳಿ ನಡೆಸುವ ಅನಿವಾರ್ಯತೆ ಇದೆ.
ದೀಪಕ್ ಹೂಡಾ ದ್ವಿಶತಕ
ಇನ್ನು ಜೈಪುರದಲ್ಲಿ ನಡೆಯುತ್ತಿರುವ "ಡಿ" ಗುಂಪಿನ ಪಂದ್ಯದಲ್ಲಿ ಮುಂಬೈ ಹಾಗೂ ರಾಜಸ್ಥಾನ ತಂಡಗಳು ಕಾದಾಟ ನಡೆಸುತ್ತಿವೆ. ಈ ವೇಳೆ ಮೊದಲ ಇನಿಂಗ್ಸ್‌ನಲ್ಲಿ ಮುಂಬೈ 254 ರನ್ ಸೇರಿಸಿ ಆಲೌಟ್ ಆಯಿತು. ಸೋಮವಾರ ಮೂರನೇ ದಿನದಾಟವನ್ನು 4 ವಿಕೆಟ್ ನಷ್ಟಕ್ಕೆ 337 ರನ್‌ಗಳಿಂದ ಆಟ ಮುಂದುವರಿಸಿತು. ಈ ವೇಳೆ ಶತಕ ಬಾರಿ ಅಜೇಯರಾಗಿ ಉಳಿದಿದ್ದ ದೀಪಕ್ ಹೂಡಾ, ಮೂರನೇ ದಿನದಾಟದಲ್ಲಿ ಅಬ್ಬರ ಮುಂದುವರೆಸಿದರು. ಇವರು 335 ಎಸೆತಗಳಲ್ಲಿ 22 ಬೌಂಡರಿ, 2 ಸಿಕ್ಸರ್ ಸಹಾಯದಿಂದ 248 ರನ್ ಬಾರಿಸಿ ಯಶಸ್ವಿ ಜೈಸ್ವಾಲ್ ತೋಡಿದ ಖೆಡ್ಡಾಗೆ ಬಲಿಯಾದರು. ಇನ್ನು ಕಾರ್ತಿಕ್ ಶರ್ಮಾ 13 ಬೌಂಡರಿ, 3 ಸಿಕ್ಸರ್ ನೆರವಿನಿಂದ 139 ರನ್ ಸಿಡಿಸಿ ಔಟ್ ಆದರು. ಜೈಪುರ್ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 617 ರನ್‌ಗೆ ಡಿಕ್ಲೇರ್ ಮಾಡಿಕೊಂಡಿತು. ಎರಡನೇ ಇನಿಂಗ್ಸ್ ಆರಂಭಿಸಿದ ಮುಂಬೈ ವಿಕೆಟ್ ನಷ್ಟವಿಲ್ಲದೆ 89 ರನ್‌ಗಳಿಸಿದೆ. ಇನ್ನು ಮುಂಬೈ ಇನಿಂಗ್ಸ್ ಮುನ್ನಡೆ ಸಾಧಿಸಲು ಮುಂಬೈ 274 ರನ್ ಕಲೆ ಹಾಕಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications