Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಣಜಿ ಟ್ರೋಫಿ: ಕರ್ನಾಟಕ ತಂಡದಲ್ಲಿ ಯಾರ್ಯಾರಿದ್ದಾರೆ?

ಬೆಂಗಳೂರು, ಸೆಪ್ಟೆಂಬರ್. 26: ಕರ್ನಾಟಕ ರಣಜಿ ತಂಡಕ್ಕೆ ಪರಿಶ್ರಮವನ್ನೇ ಬಂಡವಾಳವಾಗಿರಿಸಿಕೊಂಡ ಹುಡುಗನೊಬ್ಬನ ಪ್ರವೇಶವಾಗಿದೆ. 19 ವರ್ಷದ ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಮುಂಬರುವ ರಣಜಿ ಟ್ರೋಫಿಗೆ ಕರ್ನಾಟಕ ಆಯ್ಕೆ ಮಾಡಿಕೊಂಡಿದೆ.

16 ವರ್ಷ ಒಳಗಿನವರ ತಂಡ ಮತ್ತು 19 ವರ್ಷ ಒಳಗಿನವರ ತಂಡದಲ್ಲಿ ತೋರಿದ ನಿರ್ವಹಣೆ ಪ್ರಸಿದ್ಧ ಅವರ ರಣಜಿ ಪ್ರವೇಶಕ್ಕೆ ವೇದಿಕೆಯಾಗಿಸಿತು. ಪ್ರಸಿದ್ಧ್ ಬಾಂಗ್ಲಾದೇಶ ಎ ತಂಡದ ವಿರುದ್ಧ 6 ವಿಕೆಟ್ ಗಳಿಸಿ ಮಿಂಚಿದ್ದರು.[ಮೈಸೂರಲ್ಲಿ ಬಾಂಗ್ಲಾದೇಶ 'ಎ' ಬಗ್ಗು ಬಡಿದ ಕರ್ನಾಟಕ]

karnataka

ಹೊಸ ತಂಡದ ಆಯ್ಕೆ ಬಗ್ಗೆ ಬೆಂಗಳೂರಿನಲ್ಲಿ ಶನಿವಾರ ಮಾಹಿತಿ ನೀಡಿದ ರಾಜ್ಯದ ಆಯ್ಕೆ ಮಂಡಳಿ ಅಧ್ಯಕ್ಷ ಸುಧಾಕರ್ ರಾವ್ 15 ಜನರ ತಂಡ ಆಯ್ಕೆ ಮಾಡಲಾಗಿದ್ದು, ಬ್ಯಾಟ್ಸಮನ್ ಕೆ ಎಲ್ ರಾಹುಲ್ ಇನ್ನು ಫಿಟ್ ಆಗಿಲ್ಲ ಎಂದು ತಿಳಿಸಿದರು.

ರಣಜಿ ಟ್ರೋಫಿ ಮೊದಲ ಪಂದ್ಯಕ್ಕೆ ತಂಡ
ಆರ್.ವಿನಯ್ ಕುಮಾರ್(ನಾಯಕ), ಸಿಎಂ ಗೌತಮ್(ಉಪ ನಾಯಕ, ವಿಕೆಟ್ ಕೀಪರ್), ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ, ಕರುಣ್ ನಾಯರ್, ಆರ್ ಸಮರ್ಥ, ಅಭಿಷೇಕ್ ರೆಡ್ಡಿ, ಶ್ರೇಯಸ್ ಗೋಪಾಲ್, ಉದಿತ್ ಪಾಟೀಲ್, ಅಭಿಮನ್ಯು ಮಿಥುನ್, ಎಚ್.ಎಸ್. ಶರತ್, ಜೆ. ಸುಚೀತ್, ಶೀಶಿರ ಭವಾನೆ, ಮಾಯಾಂಕ್ ಅಗರ್ವಾಲ್, ಪ್ರಸಿದ್ಧ್ ಎಂ ಕೃಷ್ಣ

ರಣಜಿ ಟ್ರೋಫಿ ಪಂದದ್ಯಾಚಳಿಯಲ್ಲಿ ರಾಜ್ಯದ ಪಂದ್ಯಗಳು
ಅಕ್ಟೋಬರ್ 1 ರಿಂದ 4 : ಅಸ್ಸಾಂ ವಿರುದ್ಧ, ಗೌಹಹಾತಿ
ಅಕ್ಟೋಬರ್ 8 ರಿಂದ 11: ಬಂಗಾಳ ವಿರುದ್ಧ, ಬೆಂಗಳೂರು
ಅಕ್ಟೋಬರ್ 15 ರಿಂದ 18: ವಿದರ್ಭ, ಬೆಂಗಳೂರು
ಅಕ್ಟೋಬರ್ 22 ರಿಂದ 25: ಹರಿಯಾಣ, ಮೈಸೂರು
ಅಕ್ಟೋಬರ್ 30 ರಿಂದ ನವೆಂಬರ್ 2: ರಾಜಸ್ಥಾನ, ಜೈಪುರ
ನವೆಂಬರ್ 7 ರಿಂದ 10: ಒಡಿಸ್ಸಾ, ಮೈಸೂರು
ನವೆಂಬರ್ 23 ರಿಂದ 26: ದೆಲ್ಲಿ, ಹುಬ್ಬಳ್ಳಿ
ಡಿಸೆಂಬರ್ 1 ರಿಂದ 4: ಮಹಾರಾಷ್ಟ್ರ, ಪುಣೆ(ಒನ್ ಇಂಡಿಯಾ ನ್ಯೂಸ್)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+