Ranji: ಕರ್ನಾಟಕ, ಹರಿಯಾಣ ಫೈಟ್, ನಾಕೌಟ್ ಪ್ರವೇಶಕ್ಕೆ ಬರೀ ಗೆಲುವು ಸಾಲದು: ಇಲ್ಲಿದೆ ಲೆಕ್ಕಾಚಾರ
ಕರ್ನಾಟಕ ರಣಜಿ ಟ್ರೋಫಿಯ ಎರಡನೇ ಚರಣದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿತು. ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಇನಿಂಗ್ಸ್ ಗೆಲುವು ದಾಖಲಿಸಿ ಅಬ್ಬರಿಸಿತ್ತು. ಆದರೆ ಮಯಾಂಕ್ ಅಗರ್‌ವಾಲ್ ನಾಕೌಟ್ ಲೆಕ್ಕಾಚಾರ ಕೊಂಚ ಕಠಿಣವಾಗಿದೆ. ಹರಿಯಾಣ ವಿರುದ್ಧದ "ಸಿ" ಗುಂಪಿನ ಮಹತ್ವದ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಪಂದ್ಯದಲ್ಲಿ ಮಯಾಂಕ್ ಅಗರ್‌ವಾಲ್ ಪಡೆ ಬರೀ ಗೆಲುವು ಸಾಧಿಸಿದರೆ ಸಾಧ್ಯವಿಲ್ಲ. ಹಾಗಿದ್ದರೆ ಕರ್ನಾಟಕ ನಾಕೌಟ್ ಪ್ರವೇಶಿಸಲು ಏನು ಮಾಡಬೇಕು ಎಂಬ ಬಗ್ಗೆ ವರದಿ ಇಲ್ಲಿದೆ.
ವಿಜಯ್ ಹಜಾರೆ ಟ್ರೋಫಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ ಬಳಿಕ ಕರ್ನಾಟಕ ರಣಜಿಯಲ್ಲೂ ಅಮೋಘ ಪ್ರದರ್ಶನ ನೀಡುತ್ತಿದೆ. ಸದ್ಯ ಆಡಿರುವ ಆರು ಪಂದ್ಯಗಳಲ್ಲಿ 2 ಜಯ ಸಾಧಿಸಿದ್ದು 19 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಒಂದು ವೇಳೆ ಕರ್ನಾಟಕ, ಹರಿಯಾಣ ವಿರುದ್ಧದ ಪಂದ್ಯದಲ್ಲಿ ಇನಿಂಗ್ಸ್ ಅಥವಾ 10 ವಿಕೆಟ್ ಜಯ ದಾಖಲಿಸುವುದು ಅವಶ್ಯಕ. ಅಂದಾಗ ಮಾತ್ರ ನಾಕೌಟ್ ಪ್ರವೇಶಿಸುವ ಆಸೆಗೆ ಪುಷ್ಠಿ ಸಿಗಲಿದೆ.

ಕೆಎಲ್ ರಾಹುಲ್ ಬಲ
ಕರ್ನಾಟಕ ಹಾಗೂ ಹರಿಯಾಣ ನಡುವಿನ ಮಹತ್ವದ ಪಂದ್ಯದಲ್ಲಿ ಕೆಎಲ್ ರಾಹುಲ್ ಆಡುವುದನ್ನು ಕಾಣಬಹುದಾಗಿದೆ. ಇವರು ಬಹು ವರ್ಷಗಳ ಬಳಿಕ ರಣಜಿಯಲ್ಲಿ ಆಡಲಿದ್ದಾರೆ. ಕರ್ನಾಟಕದ ಪರ ಅನುಭವಿ ಆಟಗಾರರು ಸ್ಥಿರ ಪ್ರದರ್ಶನ ನೀಡಿದ್ದಾರೆ. ಯುವ ಆಟಗಾರರು ಬ್ಯಾಟಿಂಗ್‌ನಿಂದ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದ್ದರು. ಪಂಜಾಬ್ ವಿರುದ್ಧ ರಣಜಿ ಪಂದ್ಯದಲ್ಲಿ ಆರ್ ಸ್ಮರಣ್ ದ್ವಿಶತಕ ಬಾರಿಸಿ ಭರವಸೆ ಮೂಡಿಸಿದ್ದಾರೆ. ಈ ಸ್ಟಾರ್ ಆಟಗಾರನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಕರ್ನಾಟಕದ ಪರ ರಣಜಿ ಪ್ರಸಕ್ತ ಟೂರ್ನಿಯಲ್ಲಿ ಹೆಚ್ಚು ರನ್
ಆರ್.ಸ್ಮರಣ್, 6 ಪಂದ್ಯ, 348 ರನ್
ನಿಕ್ಕಿನ್ ಜೋಸ್, 5 ಪಂದ್ಯ, 191 ರನ್
ಅಭಿನವ್ ಮನೋಹರ್, 4 ಪಂದ್ಯ, 180 ರನ್

ಯುವಕರೇ ಶಕ್ತಿ
ರಣಜಿ ಟ್ರೋಫಿಯಲ್ಲಿ ಸ್ಥಿರ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಕರ್ನಾಟಕದ ಸ್ಟಾರ್ ಬೌಲರ್‌ಗಳು ಗೆಲುವಿನಲ್ಲಿ ಮಿಂಚಿದ್ದಾರೆ. ಇನ್ನು ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಅಭಿಲಾಶ್ ಶೆಟ್ಟಿ ಸಹ ಬಿಗುವಿನ ದಾಳಿ ನಡೆಸಬಲ್ಲರು. ವಾಸುಕಿ ಕೌಶಿಕ್, ಶ್ರೇಯಸ್ ಗೋಪಾಲ್, ಪ್ರಸಿದ್ಧ ಕೃಷ್ಣಾ ಹರಿಯಾಣಾ ಬ್ಯಾಟರ್‌ಗಳಿಗೆ ಕಾಡಬಲ್ಲರು.
ರಣಜಿ ಟೂರ್ನಿಯಲ್ಲಿ ರಾಜ್ಯದ ಪರ ಗರಿಷ್ಠ ವಿಕೆಟ್ ಸಾಧಕರು
ವಾಸುಕಿ ಕೌಶಿಕ್, 6 ಪಂದ್ಯ, 22 ವಿಕೆಟ್
ಶ್ರೇಯಸ್ ಗೋಪಾಲ್, 6 ಪಂದ್ಯ, 20 ವಿಕೆಟ್
ವಿಧ್ಯಾಧರ್ ಪಾಟೀಲ್, 4 ಪಂದ್ಯ, 10 ವಿಕೆಟ್
ಸಂಘಟಿತ ಆಟವೇ ಬಲ
ಈ ಬಾರಿಯ ರಣಜಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಹರಿಯಾಣ, ಆಡಿರುವ 6 ಪಂದ್ಯಗಳಲ್ಲಿ 3 ಜಯ ಸಾಧಿಸಿದ್ದು, 26 ಅಂಕಗಳೊಂದಿಗೆ ಸಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆದಿದೆ. ಹರಿಯಾಣ ತಂಡ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವ ವಿಶ್ವಾಸವನ್ನು ಹೊಂದಿದೆ. ಸ್ಟಾರ್ ಆಟಗಾರರು ತಂಡದ ಪರ ಸ್ಥಿರ ಪ್ರದರ್ಶನ ನೀಡುವಲ್ಲಿ ಸಫಲರಾಗಿದ್ದಾರೆ. ಹೀಗಾಗಿ ಈ ಆಟಗಾರರು ಮತ್ತೊಮ್ಮೆ ಅಬ್ಬರಿಸುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಹರಿಯಾಣ ಪರ ರನ್ ಸಾಧಕರು
ಹಿಮಾಂಶು ರಾಣಾ, 6 ಪಂದ್ಯ, 419 ರನ್
ಅಂಕಿತ್ ಕುಮಾರ್, 6 ಪಂದ್ಯ, 309 ರನ್
ಧೀರು ಸಿಂಗ್, 6 ಪಂದ್ಯಮ 291 ರನ್
ಹರಿಯಾಣ ಪರ ಹೆಚ್ಚು ವಿಕೆಟ್ ಪಡೆದ ಬೌಲರ್ಸ್
ಜಯಾಂತ್ ಯಾದವ್, 6 ಪಂದ್ಯ, 23 ವಿಕೆಟ್
ಅನ್ಶುಲ್ ಕಾಂಬೋಜ್, 4 ಪಂದ್ಯ, 22 ವಿಕೆಟ್
ನಿಶಾಂತ್ ಸಿಂಧು, 4 ಪಂದ್ಯ, 15 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications