Ranji Trophy: ಜಾರ್ಖಂಡ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಕರ್ನಾಟಕ

ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಅಜೇಯ ಓಟವನ್ನು ಮುಂದುವರೆಸಿರುವ ಕರ್ನಾಟಕ ತಂಡ, ಗುಂಪುಹಂತದ ಕೊನೆಯ ಪಂದ್ಯದಲ್ಲಿ ಜಾರ್ಖಂಡ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಜಾರ್ಖಂಡ್ ತಂಡವನ್ನು 164 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 300 ರನ್‌ಗಳಿಗೆ ಆಲೌಟ್ ಆಗುವ ಮೂಲಕ 136 ರನ್‌ಗಳ ಮುನ್ನಡೆ ಸಾಧಿಸಿತು. ದೇವದತ್ ಪಡಿಕ್ಕಲ್ ಶತಕ ಗಳಿಸುವ ಮೂಲಕ ಕರ್ನಾಟಕ ತಂಡಕ್ಕೆ ಆಸರೆಯಾದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಕರ್ನಾಟಕದ ಬೌಲಿಂಗ್ ಎದುರು ಜಾರ್ಖಂಡ್ ರನ್ ಗಳಿಸಲು ಪರದಾಡಿತು. ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ವಿಜಯ್ ಕುಮಾರ್ ಕೌಶಿಕ್ ವಿಕೆಟ್‌ಗಳನ್ನು ಪಡೆಯುವ ಮೂಲಕ ಮಿಂಚಿದರು.
ಅದರಲ್ಲೂ ಕೃಷ್ಣಪ್ಪ ಗೌತಮ್ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. 5 ವಿಕೆಟ್‌ಗಳನ್ನು ಪಡೆಯುವ ಮೂಲಕ ಜಾರ್ಖಂಡ್ ತಂಡಕ್ಕೆ ಆಘಾತ ನೀಡಿದರು. ಕೃಷ್ಣಪ್ಪ ಗೌತಮ್‌ಗೆ ಉತ್ತಮವಾಗಿ ಜೊತೆಯಾದ ವಿಜಯ್ ಕುಮಾರ್ ಕೌಶಿಕ್ 3 ವಿಕೆಟ್ ಪಡೆದರೆ, ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದರು. ಕರ್ನಾಟಕ ಬೌಲಿಂಗ್‌ಗೆ ತತ್ತರಿಸಿದ ಜಾರ್ಖಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 201 ರನ್‌ಗಳಿಗೆ ಆಲೌಟ್ ಆಯಿತು.

ವಿಫಲವಾದ ಜಾರ್ಖಂಡ್ ಬ್ಯಾಟರ್ ಗಳು
ಮೊದಲನೇ ಇನ್ನಿಂಗ್ಸ್‌ನಲ್ಲೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಜಾರ್ಖಂಡ್, ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಬ್ಯಾಟರ್ ಗಳು ವಿಫಲವಾದರು. ಕುಮಾರ್ ಸೂರಜ್ 34 ರನ್, ಕುಮಾರ್ ಕುಶಾಗರ 36 ರನ್ ಗಳಿಸಿದರು. ಅಂಕುಲ್ ರಾಯ್ 36 ರನ್, ಸುಪ್ರಿಯೋ ಚಕ್ರವರ್ತಿ 48 ರನ್ ಗಳಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ.
ಕುಮಾರ್ ದಿಯೋಬ್ರತ್ 20 ರನ್ ಗಳಿಸಿದರೆ, ಆರ್ಯಮಾನ್ ಸೇನ್ ಶೂನ್ಯಕ್ಕೆ ಔಟಾದರು. ನಾಯಕ ವಿರಾಟ್ ಸಿಂಗ್ 1 ರನ್, ಸೌರಭ್ ತಿವಾರಿ 4 ರನ್, ಶಹಬಾಜ್ ನದೀಮ್ 5, ಆಶಿಶ್ ಕುಮಾರ್ 2 ರನ್ ಗಳಿಸಿ ನಿರಾಸೆ ಮೂಡಿಸಿದರು.
ಜಾರ್ಖಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 201 ರನ್‌ಗಳಿಗೆ ಆಲೌಟ್ ಆಗುವ ಮೂಲಕ 65 ರನ್‌ಗಳ ಸಾಧಾರಣ ಮುನ್ನಡೆ ಸಾಧಿಸಿತು. ಗೆಲುವಿಗೆ 66 ರನ್‌ಗಳನ್ನು ಬೆನ್ನತ್ತಿದ ಕರ್ನಾಟಕ ಕೇವಲ 1 ವಿಕೆಟ್ ಕಳೆದುಕೊಂಡು 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ನಿಕಿನ್ ಜೋಸ್ ಉತ್ತಮ ಬ್ಯಾಟಿಂಗ್
66 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ಆರಂಭದಲ್ಲೇ ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ರವಿಕುಮಾರ್ ಸಮರ್ಥ್ ಮತ್ತು ನಿಕಿನ್ ಜೋಸ್ ಎಚ್ಚರಿಕೆಯ ಆಟವಾಡುವ ಮೂಲಕ ಕರ್ನಾಟಕಕ್ಕೆ ಸುಲಭ ಜಯ ತಂದುಕೊಟ್ಟರು.
ರವಿಕುಮಾರ್ ಸಮರ್ಥ್ 62 ಎಸೆತಗಳಲ್ಲಿ ತಾಳ್ಮೆಯ 24 ರನ್ ಗಳಿಸಿದರೆ, ನಿಕಿನ್ ಜೋಸ್ ಬಿರುಸಿನ ಇನ್ನಿಂಗ್ಸ್ ಆಡಿದರು. 45 ಎಸೆತಗಳಲ್ಲಿ 9 ಬೌಂಡರಿ ಸಹಿತ 42 ರನ್ ಗಳಿಸಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ದೇವದತ್ ಪಡಿಕ್ಕಲ್ ಪಂದ್ಯದ ಆಟಗಾರ ಪ್ರಶಸ್ತಿ ಪಡೆದರು. ಕರ್ನಾಟಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಈಗಾಗಲೇ ಎಂಟರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿದೆ.

ಕರ್ನಾಟಕ, ಜಾರ್ಖಂಡ್ ಪ್ಲೇಯಿಂಗ್ XI
ಕರ್ನಾಟಕ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್(ನಾಯಕ), ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ನಿಕಿನ್ ಜೋಸ್, ಶರತ್ ಬಿಆರ್(ವಿಕೆಟ್ ಕೀಪರ್), ಶುಭಾಂಗ್ ಹೆಗ್ಡೆ, ಕೃಷ್ಣಪ್ಪ ಗೌತಮ್, ವಾಸುಕಿ ಕೌಶಿಕ್, ಶ್ರೇಯಸ್ ಗೋಪಾಲ್, ವಿಧ್ವತ್ ಕಾವೇರಪ್ಪ.
ಜಾರ್ಖಂಡ್: ಕುಮಾರ್ ದಿಯೋಬ್ರತ್, ಆರ್ಯಮನ್ ಸೇನ್, ಕುಮಾರ್ ಸೂರಜ್, ವಿರಾಟ್ ಸಿಂಗ್ (ನಾಯಕ), ಸೌರಭ್ ತಿವಾರಿ, ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ಅನುಕುಲ್ ರಾಯ್, ಶಹಬಾಜ್ ನದೀಮ್, ಸುಪ್ರಿಯೋ ಚಕ್ರವರ್ತಿ, ವಿನಾಯಕ್ ವಿಕ್ರಮ್, ಆಶಿಶ್ ಕುಮಾರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications