For Quick Alerts
ALLOW NOTIFICATIONS  
For Daily Alerts
 

ರಣಜಿ ಟ್ರೋಫಿ: ಬಂಗಾಳವನ್ನು ಮಣಿಸಿ 23 ವರ್ಷದ ಬಳಿಕ ಫೈನಲ್ ಹಂತಕ್ಕೇರಿದ ಮಧ್ಯ ಪ್ರದೇಶ

Ranji Trophy: Madhya Pradesh enter final after defeat Bengal by 174 runs in semi Final Battle

ಈ ಬಾರಿಯ ರಣಜಿ ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡ ಸುದೀರ್ಘ ಕಾಲದ ಬಳಿಕ ಫೈನಲ್ ಹಂತಕ್ಕೇರಿದ ಸಾಧನೆ ಮಾಡಿದೆ. ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಂಗಾಳ ತಂಡವನ್ನು 174 ರನ್‌ಗಳ ಅಂತರದಿಂದ ಮಣಿಸಿದ ಮಧ್ಯಪ್ರದೇಶ ತಂಡ 1998-99 ಬಳಿಕ ಇದೇ ಮೊದಲ ಬಾರಿಗೆ ರಣಜಿ ಫೈನಲ್ ಹಂತಕ್ಕೇರಿದ ಸಾಧನೆ ಮಾಡಿದೆ.

ಈ ಪಂದ್ಯದಲ್ಲಿ ಬಂಗಾಳ ತಂಡ ಮಧ್ಯಮ ಪ್ರದೇಶದ ವಿರುದ್ಧ ಅದ್ಭುತ ಪ್ರದರ್ಶನವನ್ನು ನಿಡಿತ್ತು. ಅದರಲ್ಲೂ ಮನೋಜ್ ತಿವಾರಿ ಹಾಗೂ ಆಹ್ಬಾಜ್ ಅಹ್ಮದ್ ಸರ್ವ ಪ್ರಯತ್ನವನ್ನು ಕೂಡ ನಡೆಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಶಹ್ಬಾಜ್ 116 ರನ್‌ಗಳಿಸಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಮತ್ತೊಂದೆಡೆ ಮನೋಜ್ ತಿವಾರಿ ಮೊದಲ ಇನ್ನಿಂಗ್ಸ್‌ನಲ್ಲಿ 102 ರನ್‌ಗಳನ್ನು ಗಳಿಸಿದ್ದರು. ಆದರೆ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಕುಸಿತ ಕಂಡ ಬಂಗಾಳ ಸೆಮಿಫೈನಲ್‌ನಲ್ಲಿ ಭಾರೀ ಅಂತರದ ಸೋಲು ಅನುಭವಿಸಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮಧ್ಯ ಪ್ರದೇಶ ತಂಡ ಹಿಮಾನ್ಶು ಮಂತ್ರಿ ಅವರ ಭರ್ಜರಿ ಶತಕದ ನೆರವಿನಿಂದಾಗಿ 341 ರನ್‌ಗಳನ್ನು ಸಿಡಿಸಲು ಯಶಸ್ವಿಯಾಗಿತ್ತು. ಅಕ್ಷತ್ ರಘುವಂಶಿ ಕೂಡ ಅರ್ಧ ಶತಕ ಸಿಡಿಸಿ ಉತ್ತಮ ಸಾಥ್ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ್ದ ಬಂಗಾಳ ತಂಡದ ಪರವಾಗಿ ಮನೋಜ್ ತಿವಾರಿ 102 ರನ್ ಹಾಗೂ ಶಹ್ಬಾಜ್ ಅಹ್ಮದ್ 116 ರನ್‌ಗಳ ಕೊಡುಗೆ ನೀಡಿದರು. ಆದರೆ ಇತರ ಬ್ಯಾಟರ್‌ಗಳಿಂದ ಉತ್ತಮ ಬೆಂಬಲ ದೊರೆಯದ ಕಾರಣ ಮೊದಲ ಇನ್ನಿಂಗ್ಸ್‌ನಲ್ಲಿ ಬಂಗಾಳ 68 ರನ್‌ಗಳ ಹಿನ್ನಡೆಯನ್ನು ಅನುಭವಿಸಿತ್ತು.

ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಿದ ಮಧ್ಯ ಪ್ರದೇಶ ತಂಡಕ್ಕೆ ರಜತ್ ಪಾಟಿದಾರ್ 79 ರನ್‌ಗಳ ಕೊಡುಗೆ ನೀಡಿ ಮಿಂಚಿದರೆ ಆದಿತ್ಯ ಶ್ರೀವಾತ್ಸವ 82 ರನ್‌ಗಳನ್ನು ಸಿಡಿಸಿದರು. ಈ ಮೂಲಕ ಎರಡನೇ ಇನ್ನಿಂಗ್ಸ್‌ನಲ್ಲಿ 281 ರನ್‌ಗಳಿಸಿದ ಮಧ್ಯ ಪ್ರದೇಶ ತಂಡ ಎದುರಾಳಿಗೆ 349 ರನ್‌ಗಳ ಸವಾಲನ್ನು ಮುಂದಿಟ್ಟಿತ್ತು.

ಈ ಮೊತ್ತವನ್ನು ಬೆನ್ನಟ್ಟಿದ ಬಂಗಾಳ ತಂಡದ ಪರವಾಗಿ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಬರಲಿಲ್ಲ. ನಾಯಕ ಅಭಿಮನ್ಯು ಈಶ್ವರನ್ ಮಾತ್ರವೇ 78 ರನ್‌ಗಳನ್ನು ಗಳಿಸಿದರೆ ಉಳಿದ ಯಾವ ಆಟಗಾರರು ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಲು ವಿಫಲವಾದರು. ಇದರ ಪರಿಣಾಮವಾಗಿ ಬಂಗಾಳ ಕೇವಲ 175 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಮಧ್ಯ ಪ್ರದೇಶ ತಂಡ 174 ರನ್‌ಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದೆ.

ಮತ್ತೊಂದೆಡೆ ಮುಂಬೈ ತಂಡ ಕೂಡ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು ಬಂಗಾಳ ಹಾಗೂ ಮುಂಬೈ ತಂಡಗಳ ಮಧ್ಯೆ ಈ ಬಾರಿಯ ರಣಜಿ ಟ್ರೋಫಿಗಾಗಿ ಅಂತಿಮ ಸೆಣೆಸಾಟ ನಡೆಯಲಿದೆ. ಫೈನಲ್ ಪಂದ್ಯ ಕೂನ್ 22ರಿಂದ ಆರಂಭವಾಗಲಿದ್ದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.

ಬಂಗಾಳ ಪ್ಲೇಯಿಂಗ್ XI: ಅಭಿಷೇಕ್ ರಾಮನ್, ಅಭಿಮನ್ಯು ಈಶ್ವರನ್ (ನಾಯಕ), ಸುದೀಪ್ ಕುಮಾರ್ ಘರಾಮಿ, ಅನುಸ್ತುಪ್ ಮಜುಂದಾರ್, ಮನೋಜ್ ತಿವಾರಿ, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಸಯನ್ ಮೊಂಡಲ್, ಪ್ರದೀಪ್ತ ಪ್ರಮಾಣಿಕ್, ಆಕಾಶ್ ದೀಪ್, ಮುಖೇಶ್ ಕುಮಾರ್
ಬೆಂಚ್: ಸುದೀಪ್ ಚಟರ್ಜಿ, ರಿಟಿಕ್ ಚಟರ್ಜಿ, ಕೌಶಿಕ್ ಘೋಷ್, ಮೊಹಮ್ಮದ್ ಕೈಫ್, ಕರಣ್ ಲಾಲ್, ನೀಲಕಂಠ ದಾಸ್, ರಿತ್ವಿಕ್ ಚೌಧುರಿ, ಇಶಾನ್ ಪೊರೆಲ್

ಮಧ್ಯ ಪ್ರದೇಶ ಪ್ಲೇಯಿಂಗ್ XI: ಯಶ್ ದುಬೆ, ಹಿಮಾಂಶು ಮಂತ್ರಿ (ವಿಕೆಟ್ ಕೀಪರ್), ಶುಭಂ ಎಸ್ ಶರ್ಮಾ, ರಜತ್ ಪಾಟಿದಾರ್, ಆದಿತ್ಯ ಶ್ರೀವಾಸ್ತವ (ನಾಯಕ), ಅಕ್ಷತ್ ರಘುವಂಶಿ, ಸರನ್ಶ್ ಜೈನ್, ಕುಮಾರ್ ಕಾರ್ತಿಕೇಯ, ಪುನೀತ್ ದಾಟೆ, ಅನುಭವ್ ಅಗರ್ವಾಲ್, ಗೌರವ್ ಯಾದವ್
ಬೆಂಚ್: ಮಿಹಿರ್ ಹಿರ್ವಾನಿ, ಈಶ್ವರ್ ಪಾಂಡೆ, ಅರ್ಷದ್ ಖಾನ್, ಕುಲದೀಪ್ ಸೇನ್, ರಮೀಜ್ ಖಾನ್, ಪಾರ್ಥ್ ಸಹಾನಿ, ಅಜಯ್ ರೋಹೆರಾ, ರಾಕೇಶ್ ಠಾಕೂರ್

Story first published: Saturday, June 18, 2022, 17:02 [IST]
Other articles published on Jun 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+