Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರಣಜಿ ಟ್ರೋಫಿ 2019-20: ಆಕರ್ಷಕ ತ್ರಿಶತಕ ಬಾರಿಸಿದ ಮನೋಜ್ ತಿವಾರಿ

Ranji Trophy: Manoj Tiwary cracks maiden first-class triple ton

ಕೋಲ್ಕತ್ತಾ, ಜನವರಿ 20: ವೆಸ್ಟ್ ಬೆಂಗಾಲ್‌ನ ಬೆಂಗಾಲ್ ಕ್ರಿಕೆಟ್ ಅಕಾಡೆಮಿ ಗ್ರೌಂಡ್‌ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್ ಗ್ರೂಪ್‌ 'ಎ' ಮತ್ತು 'ಬಿ' 6ನೇ ಸುತ್ತಿನ ಪಂದ್ಯದಲ್ಲಿ ಬೆಂಗಾಲ್ ಬ್ಯಾಟ್ಸ್‌ಮನ್ ಮನೋಜ್ ತಿವಾರಿ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಚೊಚ್ಚಲ ತ್ರಿ-ಶತಕ ಬಾರಿಸಿದ್ದಾರೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ತಿವಾರಿ ಗಮನಾರ್ಹ ಸಾಧನೆ ತೋರಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಬೆಂಗಾಲ್‌ನಿಂದ ಮನೋಜ್‌ ತಿವಾರಿ ಅಜೇಯ 303 ರನ್ ಬಾರಿಸಿದರು. ಇನ್ನು ಅನುಸ್ತಪ್ ಮಜುಮ್ದಾರ್ 59, ಶ್ರೀವತ್ಸ್‌ ಗೋಸ್ವಾಮಿ 95, ಶಬಾಝ್ ಅಹ್ಮದ್ 49, ಅರ್ನಾಬ್ ನಂದಿ 65 ರನ್‌ ಕೊಡುಗೆಯೊಂದಿಗೆ ಬೆಂಗಾಲ್ 151.4 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 635 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ.

ಇನ್ನಿಂಗ್ಸ್‌ಗೆ ಇಳಿದಿರುವ ಹೈದರಾಬಾದ್‌, ನೀರಸ ಬ್ಯಾಟಿಂಗ್ ಪ್ರದರ್ಶಿಸಿದೆ. ತೆಲುಕುಪಲ್ಲಿ ರಾಜ್‌ತೇಜ್ 12, ರಾಹುಲ್ ಬುದ್ಧಿ 11, ಬವನಕ ಸಂದೀಪ್ 13, ಜಾವೀದ್ ಆಲಿ 19 (ಅಜೇಯ), ನಾಯಕ ತನ್ಮಯಿ ಅಗರ್ವಾಲ್ (ಅಜೇಯ) 10 ರನ್‌ ಬಾರಿಸಿದ್ದೇ ಹೆಚ್ಚು. ಉಳಿದೆಲ್ಲರೂ ಬೆರಳೆಣಿಕೆಯ ರನ್‌ಗೆ ವಿಕೆಟ್‌ ನೀಡಿದ್ದಾರೆ.

ಸೋಮವಾರ (ಜನವರಿ 20) 2ನೇ ದಿನದಾಟದ ಅಂತ್ಯಕ್ಕೆ ಹೈದರಾಬಾದ್‌ ತಂಡ 20 ಓವರ್ ಮುಕ್ತಾಯಕ್ಕೆ 5 ವಿಕೆಟ್‌ ನಷ್ಟದಲ್ಲಿ 83 ರನ್ ಬಾರಿಸಿತು. ಬೆಂಗಾಲ್‌ನ ಬೌಲರ್‌ಗಳಾದ ಮುಕೇಶ್ 2, ಆಕಾಶ್ ದೀಪ್‌ 3 ವಿಕೆಟ್‌ ಮುರುಳಿಸಿದ್ದರು. ಪಂದ್ಯದಲ್ಲಿ ಬೆಂಗಾಲ್ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ.

Story first published: Monday, January 20, 2020, 22:29 [IST]
Other articles published on Jan 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+