Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Mayank Agarwal: ಚಿನ್ನಸ್ವಾಮಿಯಲ್ಲಿ ಮಾಯಂಕ್ ಚಿನ್ನದಂಥ ಇನ್ನಿಂಗ್ಸ್

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಣಜಿ ಟ್ರೋಫಿ ಟೂರ್ನಿಯ ಎಲೈಟ್ 'ಸಿ' ಪಂದ್ಯದ ಹರಿಯಾಣ ಮತ್ತು ಕರ್ನಾಟಕ ನಡುವೆ ನಡೆಯುತ್ತಿದೆ. ಈ ಪಂದ್ಯದ ಮೊದಲ ದಿನದಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕರ್ನಾಟಕ 5 ವಿಕೆಟ್‌ ನಷ್ಟಕ್ಕೆ 267 ರನ್ ಗಳಿಸಿದೆ. ನಾಕೌಟ್ ಸುತ್ತಿಗೆ ಅರ್ಹತೆ ಪಡೆಯಲು ಏಳು ಅಂಕಗಳ ಅಗತ್ಯವಿರುವ ಕರ್ನಾಟಕ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಐದು ವರ್ಷಗಳ ಬಳಿಕ ರಣಜಿ ಪಂದ್ಯ ಆಡುತ್ತಿರುವ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಮೇಲೆ ಭಾರೀ ನಿರೀಕ್ಷೆಯಿತ್ತು. ಆದರೆ ರಾಹುಲ್ ಕೇವಲ 26 ರನ್‌ಗಳಿಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ದಾರೆ. ಆದರೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಯಕ ಮಯಾಂಕ್ ಅರ್ಗವಾಲ್ ಚಿನ್ನದಂತ ಇನ್ನಿಂಗ್ಸ್ ಆಡುವ ಮೂಲಕ ಎಲ್ಲರ ಚಿತ್ತ ಕದ್ದಿದ್ದಾರೆ.

Ranji Trophy Mayank Agarwal golden innings against Haryana at M Chinnaswamy Stadium

ಕರ್ನಾಟಕ ತಂಡದ ಪರ ಆರಂಭಿಕರಾಗಿ ಅನೀಶ್ ಕೆವಿ ಮತ್ತು ಮಯಾಂಕ್ ಅರ್ಗವಾಲ್ ಇನ್ನಿಂಗ್ಸ್ ತೆರೆದರು. ಅನೀಶ್ 67 ಎಸೆತಗಳಲ್ಲಿ 17 ರನ್ ಗಳಿಸಿ ಅದ್ಭುತವಾಗಿ ಆಡುತ್ತಿದರು. ಆದರೆ ಹರಿಯಾಣ ವೇಗಿ ಅಂಶುಲ್ ಕಾಂಬೋಜ್ ಬೌಲಿಂಗ್‌ನಲ್ಲಿ ಅನ್ಶುಲ್ ಕಾಂಬೋಜ್ ವಿಕೆಟ್ ಕಳೆದುಕೊಂಡರು. ಬಳಿಕ ಕ್ರೀಸ್‌ಗೆ ಬಂದ ಕೆಎಲ್ ರಾಹುಲ್ ಬಿಗ್ ಇನ್ನಿಂಗ್ಸ್ ಆಡುವ ನಿರೀಕ್ಷೆಯಿತ್ತು. ಮಯಾಂಕ್ ಅರ್ಗವಾಲ್ ಜೊತೆಗೂಡಿದ ಕೆಎಲ್ ರಾಹುಲ್ ನಿಧನವಾಗಿ ರನ್ ಕಲೆ ಹಾಕಿದರು.

ರಾಹುಲ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ರಾಹುಲ್ ಔಟಾಗುತ್ತಿದ್ದಂತೆ ದೇವದತ್ ಪಡಿಕ್ಕಲ್ ಕ್ರೀಸ್‌ಗೆ ಬಂದರು. ದೇವದತ್ ಪಡಿಕ್ಕಲ್ ಕೂಡ ಜವಾಬ್ದಾರಿಯುತ ಬ್ಯಾಟಿಂಗ್ ಆಡುವ ಮೂಲಕ ತಂಡಕ್ಕೆ ನೆರವಾದರು. ಮತ್ತೊಂದೆಡೆ ಮಯಾಂಕ್ ಅರ್ಗವಾಲ್ ನಾಯಕನ ಆಟವನ್ನು ಪ್ರದರ್ಶಿಸಿದರು. ದೇವದತ್ ಪಡಿಕ್ಕಲ್ 93 ಎಸೆತಗಳಲ್ಲಿ 4 ಬೌಂಡರಿ ಬಾರಿಸುವ ಮೂಲಕ 43 ರನ್ ಗಳಿಸಿ ಅರ್ಧಶತಕ ಹೊಸ್ತಿಲಲ್ಲಿ ವಿಕೆಟ್ ಕಳೆದಕೊಂಡರು. ನಂತರ ಬಂದ ಸ್ಮರಣ್ ರವಿಚಂದ್ರನ್ ಕೂಡ ತಂಡಕ್ಕೆ 35 ರನ್ ಗಳ ಕೊಡುಗೆ ನೀಡಿ ಔಟಾದರು.

ಚಿನ್ನದಂತ ಇನ್ನಿಂಗ್ಸ್

ಸತತ ವಿಕೆಟ್‌ಗಳು ಬಿದ್ದರೂ, ಮಯಾಂಕ್ ಅರ್ಗವಾಲ್ ಚಿನ್ನದ ಇನ್ನಿಂಗ್ಸ್ ಆಡಿದರು. ಹರಿಯಾಣ ಬೌಲರ್‌ಗಳಿಗೆ ಬೆವರಿಳಿಸಿದ ಮಯಾಂಕ್ ಅರ್ಗವಾಲ್ ಕರ್ನಾಟಕ ತಂಡಕ್ಕೆ ನೆರವಾದರು. ಅವರು 149 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 91 ರನ್ ಗಳಿಸಿದರು. ಶತಕ ಪೂರೈಸುವ ಹಂತಕ್ಕೆ ತಲುಪುತ್ತಿದ್ದಂತೆ ಮಯಾಂಕ್ ವಿಕೆಟ್ ಕಳೆದುಕೊಂಡರು. ಈ ಮೂಲಕ ಅವರ ಶತಕ ಗಳಿಸಿ ಸಂಭ್ರಮಿಸುವ ಕನಸು ಭಗ್ನವಾಯಿತು. ಆದರೆ ಅವರು ನಾಯಕನ ಆಟವಾಡುವ ಮೂಲಕ ಮೆಚ್ಚುಗೆ ಪಾತ್ರರಾಗಿದ್ದಾರೆ.

ಕರ್ನಾಟಕ ಪರ ಕೃಷ್ಣನ್ ಶ್ರೀಜಿತ್ (18) ಮತ್ತು ಯಶೋವರ್ಧನ್ ಪರಂತಪ್ (18) ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಹರಿಯಾಣ ಪರ ಅಂಶುಲ್ ಕಾಂಬೋಜ್ ಹಾಗು ಅನುಜ್ ಥಕ್ರಾಲ್ ತಲಾ 2 ವಿಕೆಟ್ ಉರುಳಿಸಿದರೆ, ನಿಶಾಂತ್ ಸಿಂಧು ಒಂದು ವಿಕೆಟ್ ಪಡೆದಿದ್ದಾರೆ.

Story first published: Thursday, January 30, 2025, 22:57 [IST]
Other articles published on Jan 30, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+