For Quick Alerts
ALLOW NOTIFICATIONS  
For Daily Alerts
 

Ranji: ಪಂಜಾಬ್ ವಿರುದ್ಧ ಅಬ್ಬರಿಸಿದ ಮಯಾಂಕ್ ಪಡೆ, ಪೂರ್ಣ ಅಂಕ ಕಲೆ ಹಾಕಿದ ಕರ್ನಾಟಕ

ದೇಶೀಯ ಟೂರ್ನಿ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕರ್ನಾಟ, ಸಿ ಗುಂಪಿನ ಲೀಗ್ ಹಂತದ ಮೊದಲ ಪಂದ್ಯವನ್ನು ಗೆದ್ದು ಕೊಂಡಿದೆ. ಮಯಾಂಕ್‌ ಅಗರ್‌ವಾಲ್‌ ಪಡೆ 7 ವಿಕೆಟ್‌ಗಳಿಂದ ಪಂಜಾಬ್‌ ತಂಡವನ್ನು ಮಣಿಸಿ ಅಬ್ಬರಿಸಿದೆ.

ಹುಬ್ಬಳ್ಳಿಯ ಕೆಎಸ್‌ಸಿಎ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಸೋಮವಾರ ಸಂಘಟಿತ ಆಟದ ಪ್ರದರ್ಶನ ನೀಡಿದ ಕರ್ನಾಟಕ ಅಬ್ಬರಿಸಿದೆ. ಪಂಜಾಬ್‌ ವಿರುದ್ಧ ಜಯ ಸಾಧಿಸಿರುವ ಕರ್ನಾಟಕ ಪೂರ್ಣ ಆರು ಅಂಕವನ್ನು ಕಲೆ ಹಾಕಿದೆ.

Ranji Trophy: Mayanks Team Shines Against Punjab, Karnataka Earns Full Points

ಸೋಮವಾರ ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 238 ರನ್‌ ಗಳಿಸಿ ಆಟ ಮುಂದುವರೆಸಿದಿ ಪಂಜಾಬ್‌ 413 ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕ ತಂಡಕ್ಕೆ ಗೆಲುವಿಗೆ 52 ರನ್‌ಗಳ ಗುರಿಯನ್ನು ನೀಡಲಾಯಿತು.

ಪಂಜಾಬ್ ಪರ ಮಂದೀಪ್ ಸಿಂಗ್ 27, ನೆಹಾಲ್ ವಧೇರ 26, ಗೀತಾಂಶ ಖೇರಾ 43, ಮಯಾಂಕ್ ಮಾರ್ಕಂಡೆ 36, ಅರ್ಷದೀಪ್ ಸಿಂಗ್ 36, ಬಲ್ತೇಜ್ ಸಿಂಗ್ 22 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಕರ್ನಾಟಕದ ಪರ ರೋಹಿತ್ ಕುಮಾರ್‌ ಹಾಗೂ ಶುಭಾಂಗ್ ಹೆಗ್ಡೆ ತಲಾ ಮೂರು ವಿಕೆಟ್‌ ಕಬಳಿಸಿದರು. ಇನ್ನು ವಿದ್ವತ್ ಕಾವೇರಪ್ಪ 2 ವಿಕೆಟ್‌ ಪಡೆದರು.

ಅಲ್ಪ ಮೊತ್ತವನ್ನು ಬೆನ್ನಟ್ಟಿದ ಕರ್ನಾಟದ ಆರಂಣ ಕಳಪೆ ಆಗಿತ್ತು. ನಾಯಕ ಮಾಯಂಕ್ ಅಗರ್‌ವಾಲ್‌ ಹಾಗೂ ನಿಕಿನ್ ಜೋಸ್‌ ಸೊನ್ನೆ ಸುತ್ತಿದ್ದರು. ಒತ್ತಡದಲ್ಲಿದ್ದ ತಂಡಕ್ಕೆ ಶ್ರೀನಿವಾಸ್ ಶರತ್ ಹಾಗೂ ರವಿಕುಮಾರ್ ಸಮರ್ಥ್ ಸಾಧಾರಣ ಜೊತೆಯಾಟ ನೀಡಿದರು. ಸಮರ್ಥ್ 21 ರನ್ ಬಾರಿಸಿ ಔಟ್ ಆದರು.

ಮನೀಷ್ ಪಾಂಡೆ ಹಾಗೂ ಶ್ರೀನಿವಾಸ್ ಶರತ್ ತಂಡಕ್ಕೆ ಗೆಲುವಿನ ಮಾಲೆ ತೊಡಿಸುವಲ್ಲಿ ಸಫಲರಾದರು.

ಇದೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಮನೀಷ್ ಪಾಂಡೆ ಹಾಗೂ ದೇವದತ್ ಪಡಿಕ್ಕಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು. ಅಲ್ಲದೆ ನಾಲ್ಕನೇ ವಿಕೆಟ್‌ಗೆ ದ್ವಿಶತಕದ ಜೊತೆಯಾಟವನ್ನು ನೀಡಿದ್ದರು. ದೇವದತ್ ಪಡಿಕ್ಕಲ್‌ 7 ರನ್‌ಗಳಿಂದ ದ್ವಿಶತಕವನ್ನು ತಪ್ಪಿಸಿಕೊಂಡರು. ಮನೀಷ್ ಪಾಂಡೆ ರಣಜಿ ಟೂರ್ನಿಯಲ್ಲಿ ಮತ್ತೊಮ್ಮೆ ಶತಕ ಬಾರಿಸಿ ಅಬ್ಬರಿಸಿದರು.

ಸಂಕ್ಷಿಪ್ತ ಸ್ಕೋರ್

ಪಂಜಾಬ್ 152, ದ್ವಿತೀಯ ಇನ್ನಿಂಗ್ಸ್ 413
ಕರ್ನಾಟಕ 8 ವಿಕೆಟ್‌ಗೆ 514 ಡಿಕ್ಲೇರ್, ಎರಡನೇ ಇನ್ನಿಂಗ್ಸ್ 3 ವಿಕೆಟ್‌ಗೆ 52

Story first published: Monday, January 8, 2024, 16:15 [IST]
Other articles published on Jan 8, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+