Ranji Trophy: ಕರ್ನಾಟಕಕ್ಕೆ ಇನಿಂಗ್ಸ್ ಹಾಗೂ 164 ರನ್ ಜಯ
ಭರವಸೆಯ ಬೌಲರ್ ಮೊಹ್ಸಿನ್ ಖಾನ್ ಅವರ (29ಕ್ಕೆ 6) ಇವರ ಬಿಗುವಿನ ದಾಳಿಯ ಪರಿಣಾಮ ಕರ್ನಾಟಕ ಮಂಗಲಾಪುರಂನಲ್ಲಿ ನಡೆದ ರಣಜಿ ಟ್ರೋಫಿ "ಬಿ" ಗುಂಪಿನ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 164 ರನ್‌ಗಳಿಂದ ಕೇರಳ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಕರ್ನಾಟಕ ಆಡಿದ ಮೂರು ಪಂದ್ಯಗಳಲ್ಲಿ 1 ಜಯ, 2 ಡ್ರಾ ಸಾಧಿಸಿದ್ದು, 11 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಮಂಗಳವಾರ ಕೇರಳ ತಂಡ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 10 ರನ್‌ಗಳಿಂದ ಆಟ ಮುಂದುವರೆಸಿತು. ಕೇರಳ ತಂಡದ ಪರ ಆರಂಭಿಕ ಕೃಷ್ಣಾ ಪ್ರಸಾದ್ 5 ಬೌಂಡರಿ ನೆರವಿನಿಂದ 33 ರನ್ ಬಾರಿಸಿದರು. ಉಳಿದಂತೆ ಅಹ್ಮದ್ ಇಮ್ರಾನ್ 23, ಬಾಬಾ ಅಪರ್ಜಿತ್ 19 ಹಾಗೂ ಕೆಳ ಕ್ರಮಾಂಕದ ಬ್ಯಾಟರ್ ಇಡನ್ ಎಪ್ಲೆ 39 ರನ್ ಸಿಡಿಸಿದರು. ಅಂತಿಮವಾಗಿ ಕೇರಳ ಎರಡನೇ ಇನಿಂಗ್ಸ್‌ನಲ್ಲಿ 184 ರನ್‌ಗಳಿಗೆ ಆಲೌಟ್ ಆಯಿತು.

ಕರ್ನಾಟಕದ ತಂಡದ ಪರ ಮೊಹ್ಸಿನ್ ಖಾನ್ 29 ರನ್ ನೀಡಿ 6 ವಿಕೆಟ್ ಕಬಳಿಸಿದರು. ವಿದ್ವತ್ ಕಾವೇರಪ್ಪ 2 ವಿಕೆಟ್ ಉರುಳಿಸಿದರು. ಕರ್ನಾಟಕ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಕರ್ನಾಟಕ ಹಾಗೂ ಗೋವಾ ತಂಡಗಳು ಸಮನಾದ ಅಂಕಗಳನ್ನು ಕಲೆ ಹಾಕಿವೆ. ಆದರೆ ಗೋವಾ ತಂಡದ ರನ್ ಸರಾಸರಿ ಉತ್ತಮವಾಗಿದ್ದರಿಂದ ಮೊದಲ ಸ್ಥಾನದಲ್ಲಿದೆ. ಕರ್ನಾಟಕದ ಸ್ಟಾರ್ ಆಟಗಾರ ಕರುಣ್ ನಾಯರ್ ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 389 ಎಸೆತಗಳಲ್ಲಿ 25 ಬೌಂಡರಿ, 2 ಸಿಕ್ಸರ್ ನೆರವಿನಿಂದ 233 ರನ್ ಸಿಡಿಸಿದರು. ಇವರ ಅಮೋಘ ಆಟಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿದೆ.
ಯಶಸ್ವಿ ಶತಕ
ರಾಜಸ್ಥಾನ ಹಾಗೂ ಮುಂಬೈ ನಡುವಣ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಮುಂಬೂ ತಂಡದ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಬಾರಿಸಿದ್ದಾರೆ. ಇವರು 174 ಎಸೆತಗಳಲ್ಲಿ 18 ಬೌಂಡರಿ, 1 ಸಿಕ್ಸರ್ ಸಹಾಯದಿಂದ 156 ರನ್ ಸಿಡಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಗೂ ಮುನ್ನ ಲಯ ಕಂಡು ಕೊಂಡಿದ್ದಾರೆ. ಇನ್ನು ಮುಶೀರ್ ಖಾನ್ 63 ರನ್ ಸಿಡಿಸಿದರು. ಮುಂಬೈ 3 ವಿಕೆಟ್ ನಷ್ಟಕ್ಕೆ 269 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಮುಂಬೈ ತಂಡ "ಡಿ" ಗುಂಪಿನ ಅಂಕ ಪಟ್ಟಿಯಲ್ಲಿ ಆಡಿದ 3 ಮೂರು ಪಂದ್ಯಗಳಲ್ಲಿ 1 ಜಯ, 2 ಡ್ರಾ ಸಾಧಿಸಿದ್ದು, 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಹೈದರಾಬಾದ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
"ಡಿ" ಗುಂಪಿನ ಪಂದ್ಯದಲ್ಲಿ ಹೈಧರಾಬಾದ್ ತಂಡ 4 ವಿಕೆಟ್‌ಗಳಿಂದ ಹಿಮಾಚಲ ಪ್ರದೇಶ ತಂಢವನ್ನು, "ಸಿ" ಗುಂಪಿನ ಪಂದ್ಯದಲ್ಲಿ ಉತ್ತರಾಖಂಡ ತಂಡ 17 ರನ್‌ಗಳಿಂದ ಸರ್ವಿಸಸ್ ತಂಡವನ್ನು, "ಸಿ" ಗುಂಪಿನಲ್ಲಿ ಗುಜರಾತ್ 4 ವಿಕೆಟ್‌ಗಳಿಂದ ಹರಿಯಾಣ ತಂಡವನ್ನು ಮಣಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications