Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ranji Trophy: ದೇವದತ್, ಕರುಣ್‌, ಸ್ಮರಣ್‌ ಕರ್ನಾಟಕಕ್ಕೆ ಆಸರೆ

ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಆರಂಭವಾಗಿದೆ. ಈ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ಸೌರಾಷ್ಟ್ರ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 295 ರನ್‌ ಗಳಿಸಿ ಸುಸ್ಥಿತಿಯಲ್ಲಿದೆ.

ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡದ ಆರಂಭಿಕರಾದ ನಿಕ್ಕಿನ್ ಜೋಸ್‌ (12) ಹಾಗೂ ನಾಯಕಿ ಮಯಾಂಕ್ ಅಗರ್‌ವಾಲ್‌ (2) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ಗೆ ದೇವದತ್‌ ಪಡಿಕ್ಕಲ್‌ ಹಾಗೂ ಕರ್ನಾಟಕದ ಸ್ಟಾರ್ ಆಟಗಾರ ಕರುಣ್ ನಾಯರ್‌ ತಂಡಕ್ಕೆ ಆಧಾರವಾದರು. ಈ ಜೋಡಿ ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು.

Ranji Trophy Padikkal 96 and Nair 73 Shine for Karnataka

ಬಹು ವರ್ಷದ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದ ಕರುಣ್ ನಾಯರ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರಿಂದ, ಇವರನ್ನು ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯಿಂದ ಕೈ ಬಿಡಲಾಗಿತ್ತು. ಈಗ ಇವರು ಸಿಕ್ಕ ಅವಕಾಶವನ್ನು ಎರಡೂ ಕೈಯಲ್ಲಿ ಬಳಸಿಕೊಂಡ ಕರುಣ್‌ ಮೊದಲ ಪಂದ್ಯದಲ್ಲಿ 73 ರನ್‌ಗಳ ಅಮೋಘ ಆಟವನ್ನು ಆಡಿದರು. ಈ ವೇಳೆ 9 ಬೌಂಡರಿ ಸಹ ಸೇರಿವೆ. ಇನ್ನೋರ್ವ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್‌ ತಮ್ಮ ಅಮೋಘ ಫಾರ್ಮ್‌ ಮುಂದೆ ವರಿಸಿದರು. ಇವರು 141 ಎಸೆತಗಳಲ್ಲಿ 11 ಬೌಂಡರಿ ಸಹಾಯದಿಂದ 96 ರನ್‌ ಬಾರಿಸಿ ಔಟ್ ಆದರು. ವಿಕೆಟ್‌ ಕೀಪರ್ ಕೃಷ್ಣಾ ಶ್ರೀಜೇತ್‌ (5) ರನ್‌ ಕಲೆ ಹಾಕುವಲ್ಲಿ ವಿಫಲರಾದರು.

ಆರನೇ ವಿಕೆಟ್‌ಗೆ ರವಿಚಂದ್ರನ್‌ ಸ್ಮರಣ್‌ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 66 ರನ್‌ ಬಾರಿಸಿದರೆ, ಶ್ರೇಯಸ್ ಗೋಪಾಲ್‌ 2 ಸಿಕ್ಸರ್, 2 ಬೌಂಡರಿ ನೆರವಿನಿಂದ ಅಜೇಯ 38 ರನ್‌ ಬಾರಿಸಿದ್ದು ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ವೈಭವ್ ನಿರಾಸೆ

ಬೀಹಾರದ ವಿರುದ್ಧ ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಅರುಣಾಚಲ ಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 105 ರನ್‌ ಕಲೆ ಹಾಕಿತು. ಬಿಹಾರದ ಪರ ಶಕಿಬ್ ಹುಸೇನ್‌ 6 ವಿಕೆಟ್‌ ಪಡೆದು ಮಿಂಚಿದರು. ಮೊದಲ ಇನಿಂಗ್ಸ್ ಆರಂಭಿಸಿದ ಬಿಹಾರ ತಂಡದ ಪರ ಇನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ (14) ದೊಡ್ಡ ಇನಿಂಗ್ಸ್ ಕಟ್ಟುವಲಲ್ಲಿ ವಿಫಲರಾದರು. ಅರ್ನವ್ ಕಿಶೋರ್ 52, ಆಯುಷ್ ಲೋಹರುಕ ಅಜೇಯ 155 ರನ್ ಬಾರಿಸಿದರು. ದಿನದಾಟದ ಅಂತ್ಯಕ್ಕೆ ಬಿಹಾರ 2 ವಿಕೆಟ್‌ಗೆ 283 ರನ್‌ ಕಲೆ ಹಾಕಿದೆ.

ಶಮಿಗೆ 3 ವಿಕೆಟ್‌

ಸಿ ಗುಂಪಿನ ಪಂದ್ಯದಲ್ಲಿ ಉತ್ತರಾಖಂಡ ವಿರುದ್ಧ ಬಂಗಾಲ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಇನಿಂಗ್ಸ್ ಆರಂಭಿಸಿದ ಉತ್ತರಾಖಂಡ 213 ರನ್‌ಗಳಿಸಿತು. ಬಂಗಾಳ ಪರ ಸ್ಟಾರ್ ಪೇಸರ್ ಮೊಹಮ್ಮದ್ ಶಮಿ 3 ವಿಕೆಟ್‌ ಪಡೆದು ಮಿಂಚಿದರು. ಸೂರಜ್‌ ಜೈಸ್ವಾಲ್ 4 ವಿಕೆಟ್‌ ಕಬಳಿಸಿದರು.

Story first published: Wednesday, October 15, 2025, 19:51 [IST]
Other articles published on Oct 15, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+