ರೋಚಕ ಘಟ್ಟದತ್ತ ಕರ್ನಾಟಕ, ಮುಂಬೈ ಪಂದ್ಯ
ಮುಂಬೈ: ಕರ್ನಾಟಕ ಹಾಗೂ ಮುಂಬೈ ತಂಡಗಳ ನಡುವಣ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯ ರೋಚಕ ಘಟ್ಟದತ್ತ ಮುಖ ಮಾಡಿದೆ. ಇನ್ನು ಪಂದ್ಯದಲ್ಲಿ ಎರಡು ದಿನಗಳು ಬಾಕಿ ಇದ್ದು, ಕರ್ನಾಟಕ 212 ರನ್ ಬಾರಿಸುವ ಅವಶ್ಯಕತೆ ಇದೆ. ಈ ವೇಳೆ ದೇವದತ್ ಪಡಿಕ್ಕಲ್ ಬಳಿ 8 ವಿಕೆಟ್‌ಗಳು ಉಳಿದಿವೆ.
ಭಾನುವಾರ ಮುಂಬೈ ತಂಡ ಎರಡನೇ ಇನಿಂಗ್ಸ್ 2 ವಿಕೆಟ್‌ಗೆ 189 ರನ್‌ಗಳಿಂದ ಮುಂದುವರೆಸಿತು. ಶನಿವಾರ 49 ಬಾರಿಸಿದ್ದ ಮುಶೀರ್ ಖಾನ್ ವಿದ್ಯಾಧರ್ ಪಾಟೀಲ್ ತೋಡಿದ ಖೆಡ್ಡಾಗೆ ಬಲಿಯಾದರು. ಅರ್ಧಶತಕ ಬಾರಿಸಿ ಭರವಸೆಯು ಮೂಡಿಸಿದ್ದ ಆಕಾಶ್ ಆನಂದ್ ಸಹ 70 ರನ್‌ಗೆಳಿಗೆ ಪೆವಿಲಿಯನ್ ಸೇರಿದರು.

ಉಳಿದಂತೆ ಮುಂಬೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಜವಾಬ್ದಾರಿ ಮರೆತು ಬ್ಯಾಟ್ ಮಾಡಿದರು. ಸಿದ್ದೇಶ್ ಲಾಡ್ 25, ಸೂರ್ಯಾಂಶ್ ಶೆಡ್ಜ್ 25 ರನ್ ಬಾರಿಸಿದರು. ಆದರೆ 9ನೇ ವಿಕೆಟ್‌ಗೆ ತುಷಾರ್ ದೇಶಪಾಂಡೆ ಹಾಗೂ ತನುಷ್ಕ ಕಾಟ್ಯಾನ್ ಜೊಡಿ ಕರ್ನಾಟಕದ ಬೌಲರ್‌ಗಳನ್ನು ಕೊಂಚ ಕಾಲ ಕಾಡಿದರು. ಈ ಜೋಡಿ 87 ರನ್ ಜೊತೆಯಾಟದ ಕಾಣಿಕೆ ನೀಡಿ ಆರ್ಭಟಿಸಿತು. ಈ ವೇಳೆ 47 ರನ್ ಬಾರಿಸಿ ಮುನ್ನಡೆಸುತ್ತಿದ್ದ ತುಷಾರ್ ವಿದ್ವತ್ ಕಾವೇರಪ್ಪ ತೋಡಿದ ಖೆಡ್ಡಾಗೆ ಬಲಿಯಾದರು. ತನುಷ್ಕ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 48 ರನ್ ಸಿಡಿಸಿದರು.ಅಂತಿಮವಾಗಿ ಮುಂಬೈ 377 ರನ್‌ಗಳಿಗೆ ಆಲೌಟ್ ಆಯಿತು.
ಕೆಎಲ್ ಅರ್ಧಶತಕ
ಸವಾಲಿನ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡದ ಆರಂಭ ಕಳಪೆಯಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಮಯಾಂಕ್ ಅಗರ್‌ವಾಲರ್ (3) ರನ್ ಬರವನ್ನು ಅನುಭವಿಸಿದರು. ಎರಡನೇ ವಿಕೆಟ್‌ಗೆ ಆರಂಭಿಕ ಕೆಎಲ್ ರಾಹುಲ್ ಹಾಗೂ ನಾಯಕ ದೇವದತ್ ಪಡಿಕ್ಕಲ್ ಜೊತೆಗೂಡಿ 84 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ಅವಧಿಯಲ್ಲಿ ದೇವದತ್ 39 ರನ್ ಬಾರಿಸಿ ಔಟ್ ಆದರು. ಭರವಸೆಯ ಬ್ಯಾಟರ್ ಕೆಎಲ್ ರಾಹುಲ್ 7 ಬೌಂಡರಿ ಸೇರಿದಂತೆ ಅಜೇಯ 60 ರನ್ ಬಾರಿಸಿದ್ದಾರೆ. ಕರುಣ್ ನಾಯರ್ ಇವರಿಗೆ ಸೋಮವಾರ ಬ್ಯಾಟಿಂಗ್ ಸಾಥ್ ನೀಡಲಿದ್ದಾರೆ.
ಕರ್ನಾಟಕ ಸೋಮವಾರ ಎಚ್ಚರಿಕೆಯಿಂದ ಬ್ಯಾಟಿಂಗ್ ಮಾಡುವ ಅವಶ್ಯಕತೆ ಇದೆ. ಮೊದಲಾವಧಿಯ ಆಟದಲ್ಲಿ ವಿಕೆಟ್‌ಗಳು ಬೀಳದಂತೆ ನೋಡಿಕೊಂಡು ಬ್ಯಾಟ್ ಮಾಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಕರ್ನಾಟಕ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಕನಸುನ್ನು ಕಾಣಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications