ಮುಂಬೈ: ಕರ್ನಾಟಕ ವಿರುದ್ಧದ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಉತ್ತಮ ಮೊತ್ತದತ್ತ ದಾಪುಗಾಲು ಇಟ್ಟಿದೆ.
ಶನಿವಾರ ಕರ್ನಾಟಕ ಎರಡನೇ ದಿನದಾಟದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 110 ರನ್‌ಗಳಿಗೆ ಆಟ ಮುಂದುವರಿಸಿತು. ಮೊದಲಾವಧಿಯಲ್ಲಿ ಕರ್ನಾಟಕ ಎಚ್ಚರಿಕೆಯ ಆಟವನ್ನು ಆಡುವಲ್ಲಿ ವಿಫಲವಾಯಿತು. ಕರ್ನಾಟಕ ಮೊದಲಾವಧಿಯಲ್ಲಿ ಕೇವಲ 1 ರನ್ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡಿತು.

ಕರ್ನಾಟಕ 119 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆದರೆ ಈ ಹಂತದಲ್ಲಿ ಕರುಣ್ ನಾಯರ್ (4), ರವಿಚಂದ್ರನ್ ಸ್ಮರಣ್ (0), ಶ್ರೇಯಸ್ ಗೋಪಾಲ್ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಕರ್ನಾಟಕ 120 ರನ್ ಆಗುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 6ನೇ ವಿಕೆಟ್‌ಗೆ ಮಯಾಂಕ್ ಅಗರ್‌ವಾಲ್ ಹಾಗೂ ಕೃತಿಕ್ ಕೃಷ್ಣ ಜೋಡಿ ಕೊಂಚ ಮುಂಬೈ ಬೌಲರ್‌ಗಳನ್ನು ಕಾಡಿದರು. ಈ ಜೋಡಿ 70 ಎಸೆತಗಳಲ್ಲಿ 36 ರನ್ ಸಿಡಿಸಿತು. ಇದಾದ ಬಳಿಕ ಕರ್ನಾಟಕ ತಂಡದ ಪರ ಯಾವೊಬ್ಬ ಬ್ಯಾಟರ್ ನೆಲಕಚ್ಚಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು.
ಅನುಭವಿ ಬ್ಯಾಟರ್ ಮಯಾಂಕ್ ಅಗರ್‌ವಾಲ್ ಕ್ಲಾಸ್ ಬ್ಯಾಟ್ ನಡೆಸಿದರು. ಇವರು 134 ಎಸೆತಗಳಲ್ಲಿ 14 ಬೌಂಡರಿ, 1 ಸಿಕ್ಸರ್ ಸಹಾಯದಿಂದ 92 ರನ್ ಸಿಡಿಸಿ ಔಟ್ ಆದರು. ಅಂತಿಮವಾಗಿ ಕರ್ನಾಟಕ 173 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಕರ್ನಾಟಕ 43 ರನ್‌ಗಳ ಮುನ್ನಡೆ ಸಾಧಿಸಿತು.
ಮೊದಲ ಇನಿಂಗ್ಸ್‌ನಲ್ಲಿ ರನ್ ಕಲೆ ಹಾಕುವಲ್ಲಿ ಕಲೆ ಹಾಕಿದ್ದ ಮುಂಬೈ ಬ್ಯಾಟರ್ಸ್ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಮುಂಬೈ ತಂಡದ ಆರಂಭಿಕರಾದ ಅಖಿಲ್ ಹೆರ್ವಾಡ್ಕರ್ (33) ಹಾಗೂ ಯಶಸ್ವಿ ಜೈಸ್ವಾಲ್ (36) ಜೊಡಿ ಮೊದಲ ವಿಕೆಟ್‌ಗೆ 77 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಮೂರನೇ ವಿಕೆಟ್‌ಗೆ ಆಕಾಶ್ ಆನಂದ್ ಹಾಗೂ ಮುಸೀರ್ ಖಾನ್ ಶತಕದ ಜೊತೆಯಾಟವನ್ನು ನೀಡಿದರು. ದಿನದಾಟದಂತ್ಯಕ್ಕೆ ಮುಂಬೈ 2 ವಿಕೆಟ್‌ಗೆ 189 ರನ್ ಕಲೆ ಹಾಕಿದ್ದು, 136 ರನ್ ಮುನ್ನಡೆ ಸಾಧಿಸಿದೆ. ಮೂರನೇ ದಿನಕ್ಕೆ ಅಜೇಯ 53 ರನ್, ಮುಸೀರ್ ಖಾನ್ ಅಜೇಯ 49 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.