ರಣಜಿ: ಸೌರಾಷ್ಟ್ರವನ್ನು 227/7ಕ್ಕೆ ಕಟ್ಟಿಹಾಕಿದ ರೋನಿತ್ ಮೋರೆ

ಬೆಂಗಳೂರು, ಜನವರಿ 25: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2ನೇ ಸೆಮಿಫೈನಲ್ ಶುಕ್ರವಾರದ (ಜನವರಿ 25) 2ನೇ ದಿನದಾಟದ ಅಂತ್ಯಕ್ಕೆ ಸೌರಾಷ್ಟ್ರ 66.3 ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದು 227 ಬಾರಿಸಿದೆ. ಕರ್ನಾಟಕದ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ರೋನಿತ್ ಮೋರೆ ಮತ್ತು ಅಭಿಮನ್ಯು ಮಿಥುನ್ ಎದುರಾಳಿ ತಂಡವನ್ನು ಕಟ್ಟಿ ಹಾಕುವಲ್ಲಿ ನೆರವಾದರು.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಕರ್ನಾಟಕ ತಂಡದ ನೆರವಿಗೆ ನಾಯಕ ಮನೀಷ್ ಪಾಂಡೆ ನಿಂತರು. 62 ರನ್ ಬಾರಿಸಿದ ಪಾಂಡೆ ಜಯದೇವ್ ಉನಾದ್ಕತ್‌ಗೆ ವಿಕೆಟ್ ನೀಡಿದರು.
ಶ್ರೇಯಸ್ ಗೋಪಾಲ್ 87, ಶ್ರೀನಿವಾಸ್ ಶರತ್ 83 ರನ್ ಕೊಡುಗೆಯೊಂದಿಗೆ ತಂಡ 100.3 ಓವರ್‌ಗೆ 275 ರನ್ ಕಲೆ ಹಾಕಿತು.
ಸೌರಾಷ್ಟ್ರ ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕದ ರೋನಿತ್ ಮೋರೆ 54ಕ್ಕೆ5 ಮಾರಕ ಬೌಲಿಂಗ್ ನಡೆಸಿದರು. ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಗಳಿಸಿದರು. ನಾಳೆ (ಜನವರಿ 26) ಸೌರಾಷ್ಟ್ರ ಬೇಗ ಇನ್ನಿಂಗ್ಸ್ ಮುಗಿಸುವಂತೆ ನೋಡಿಕೊಂಡು ದ್ವಿತೀಯ ಇನ್ನಿಂಗ್ಸ್‌ನಲ್ಲಿ ರಾಜ್ಯ ತಂಡ ಉತ್ತಮ ರನ್ ಪೇರಿಸುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications