ರಣಜಿ ಸೆ.ಫೈನಲ್: ಕರ್ನಾಟಕ ವಿರುದ್ಧ ಬೆಂಗಾಲ್‌ನ ಅನುಸ್ತೂಪ್ ಅಬ್ಬರದಾಟ

ಕೋಲ್ಕತ್ತಾ, ಫೆಬ್ರವರಿ 29: ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆಯಯುತ್ತಿರುವ ರಣಜಿ ಟ್ರೋಫಿ ಸೆಮಿ ಫೈನಲ್ ಪಂದ್ಯದಲ್ಲಿ ಬೆಂಗಾಲ್ ಬ್ಯಾಟ್ಸ್‌ಮನ್ ಅನುಸ್ತೂಪ್ ಮಜುಂದಾರ್ ಆಕರ್ಷಕ ಶತಕ ಬಾರಿಸಿದ್ದಾರೆ. ಅನುಸ್ತೂಪ್ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಕರ್ನಾಟಕ ವಿರುದ್ಧ ಬೆಂಗಾಲ್ ಪ್ರಥಮ ಇನ್ನಿಂಗ್ಸ್‌ನಲ್ಲಿ ಉತ್ತಮ ರನ್ ಕಲೆ ಹಾಕಿದೆ.
ಶನಿವಾರ (ಫೆಬ್ರವರಿ 29) ಆರಂಭಿಕ ದಿನದಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಬೆಂಗಾಲ್ ತಂಡವನ್ನು ಕರ್ನಾಟಕ ತಂಡದ ಬೌಲರ್‌ಗಳು ಕಾಡಹತ್ತಿದ್ದು ನಿಜವೆ. ಆದರೆ ಅನುಸ್ತೂಪ್ ಅಜೇಯ 120, ಶಹಬಾಝ್ ಅಹಮದ್ 35, ಆಕಾಶ್ ದೀಪ್ 44 ರನ್ ಕೊಡುಗೆ ಬೆಂಗಾಲ್ ತಂಡವನ್ನು ರನ್ ಕುಸಿತದಿಂದ ಪಾರು ಮಾಡಿದೆ.
ಫೆಬ್ರವರಿ 29ರ ದಿನದಾಟದ ಕೊನೆಗೆ ಬೆಂಗಾಲ್ 82 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 275 ರನ್ ಮಾಡಿತ್ತು. ಶತಕದ ಸರದಾರ ಮಜುಂದಾರ್ ಮತ್ತು ಇಶಾನ್ ಪೊರೇಲ್ ಕ್ರೀಸ್‌ನಲ್ಲಿದ್ದರು. ಕರ್ನಾಟಕ ಬೌಲರ್‌ಗಳಾದ ಅಭಿಮನ್ಯು ಮಿಥುನ್ 3, ಪ್ರಸಿದ್ಧ್ ಕೃಷ್ಣ 2, ರೋನಿತ್ ಮೋರೆ 2, ಕೃಷ್ಣಪ್ಪ ಗೌತಮ್ 2 ವಿಕೆಟ್ ಮುರಿದಿದ್ದರು.
ಕರ್ನಾಟಕ ತಂಡ: ಲೋಕೇಶ್ ರಾಹುಲ್, ದೇವದತ್ ಪಡಿಕ್ಕಲ್, ರವಿಕುಮಾರ್ ಸಮರ್ಥ್, ಕರುಣ್ ನಾಯರ್ (ಸಿ), ಕೃಷ್ಣಮೂರ್ತಿ ಸಿದ್ಧಾರ್ಥ್, ಮನೀಶ್ ಪಾಂಡೆ, ಶ್ರೀನಿವಾಸ್ ಶರತ್ (ವಿಕೆ), ಕೃಷ್ಣಪ್ಪ ಗೌತಮ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಪ್ರಸಿದ್ಧ್ ಕೃಷ್ಣ.
ಬೆಂಗಾಲ್ ತಂಡ: ಅಭಿಮನ್ಯು ಈಶ್ವರನ್ (ಸಿ), ಅಭಿಷೇಕ್ ರಾಮನ್, ಸುದೀಪ್ ಚಟರ್ಜಿ, ಅರ್ನಾಬ್ ನಂದಿ, ಮನೋಜ್ ತಿವಾರಿ, ಅನುಸ್ತೂಪ್ ಮಜುಂದಾರ್, ಶ್ರೀವತ್ಸ್ ಗೋಸ್ವಾಮಿ (ವಿಕೆ), ಶಹಬಾಜ್ ಅಹ್ಮದ್, ಮುಖೇಶ್ ಕುಮಾರ್, ಇಶಾನ್ ಪೊರೇಲ್, ಆಕಾಶ್ ದೀಪ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications