ರಣಜಿ ಟ್ರೋಫಿಯ ಎರಡನೇ ಸುತ್ತಿನ ತನ್ನ ಕೊನೆಯ ಗುಂಪಿನ ಪಂದ್ಯದಲ್ಲಿ ಮುಂಬೈ ತಂಡವು ಮೇಘಾಲಯವನ್ನು ಇನಿಂಗ್ಸ್ ಮತ್ತು 456 ರನ್‌ಗಳಿಂದ ಸೋಲಿಸಿತು. ಮೇಘಾಲಯ ವಿರುದ್ಧ ಮುಂಬೈ ತಂಡದ ಗೆಲುವಿನಲ್ಲಿ ಸ್ಟಾರ್ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನೊಂದಿಗೆ ಮುಂಬೈ ತಂಡ ರಣಜಿ ಟ್ರೋಫಿ ಎಲೈಟ್ ಗ್ರೂಪ್ ಎ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇತ್ತ ಅದ್ಭುತ ಪ್ರದರ್ಶನಕ್ಕಾಗಿ ಶಾರ್ದೂಲ್ ಠಾಕೂರ್ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದಾರೆ.
ಮೇಘಾಲಯ ವಿರುದ್ಧ ಶಾರ್ದೂಲ್ ಠಾಕೂರ್ ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರಲ್ಲದೆ, 84 ರನ್‌ಗಳ ಮಹತ್ವದ ಕೊಡುಗೆಯನ್ನು ನೀಡಿದ ಮುಂಬೈ ತಂಡದ ಗೆಲುವಿನ ಹೀರೋ ಆದರು. ಅವರ ಈ ಪ್ರದರ್ಶನವು ಮುಂಬೈ ತಂಡದ ಗೆಲುವಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿತು.

ಶಾರ್ದೂಲ್ ಠಾಕೂರ್ ಮತ್ತು ತನುಷ್ ಕೋಟ್ಯಾನ್ ತಲಾ ನಾಲ್ಕು ವಿಕೆಟ್‌ಗಳನ್ನು ಮಿಂಚಿದರು. ಈ ಇಬ್ಬರ ಮಿಂಚಿನ ಬೌಲಿಂಗ್ ದಾಳಿಯ ನೆರವಿನಿಂದ ಮುಂಬೈ ತಂಡ ಶನಿವಾರ ಮೇಘಾಲಯವನ್ನು ಇನಿಂಗ್ಸ್ ಮತ್ತು 456 ರನ್‌ಗಳಿಂದ ಸೋಲಿಸಿ ರಣಜಿ ಟ್ರೋಫಿ ಎಲೈಟ್ ಗ್ರೂಪ್ ಎ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೆ ತಲುಪಿತು. ಈ ಗೆಲುವಿನೊಂದಿಗೆ ಮುಂಬೈ 29 ಅಂಕಗಳನ್ನು ಗಳಿಸಿದೆ. ಮತ್ತೊಂದೆಡೆ ಜಮ್ಮು ಮತ್ತು ಕಾಶ್ಮೀರವೂ ಅಷ್ಟೇ ಅಂಕಗಳನ್ನು ಹೊಂದಿದೆ. ಆದರೆ ಹಾಲಿ ಚಾಂಪಿಯನ್ ಜಮ್ಮು ಮತ್ತು ಕಾಶ್ಮೀರಕ್ಕಿಂತ (1.59) ನಿವ್ವಳ ರನ್ ರೇಟ್ (1.74) ಆಧಾರದ ಮೇಲೆ ಮುಂದಿದೆ. ಜಮ್ಮು ಮತ್ತು ಕಾಶ್ಮೀರವು ಬರೋಡಾ ವಿರುದ್ಧ ಕನಿಷ್ಠ ಮೂರು ಅಂಕಗಳನ್ನು ಗಳಿಸುವ ನಿರೀಕ್ಷೆಯಲ್ಲಿದೆ.
ಮೇಘಾಲಯ ಮೊದಲ ಇನಿಂಗ್ಸ್‌ನಲ್ಲಿ 86 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮುಂಬೈ ತಂಡ 7 ವಿಕೆಟ್‌ಗೆ 671 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಬೋನಸ್ ಪಾಯಿಂಟ್ ಗೆಲುವಿನ ಅಡಿಪಾಯ ಹಾಕಿತು. ಮೊದಲ ಇನಿಂಗ್ಸ್ ಆಧಾರದ ಮೇಲೆ 585 ರನ್‌ಗಳ ಬೃಹತ್ ಸ್ಕೋರ್‌ನಿಂದ ಹಿನ್ನಡೆಯಲ್ಲಿದ್ದ ಮೇಘಾಲಯದ ಬ್ಯಾಟರ್‌ಗಳು ಎರಡನೇ ಇನ್ನಿಂಗ್ಸ್‌ನಲ್ಲಿಯೂ ವಿಫಲರಾದರು. ಇಡೀ ತಂಡ 129 ರನ್‌ಗಳಿಗೆ ಕುಸಿಯಿತು. ಮುಂಬೈ ಪರ ಶಾರ್ದೂಲ್ ಠಾಕೂರ್ ಮತ್ತು ಕೋಟ್ಯಾನ್ ನಾಲ್ಕು ವಿಕೆಟ್ ಪಡೆದರು.
ಮೇಘಾಲಯ ವಿರುದ್ಧ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಆಲ್‌ರೌಂಡರ್ ಪ್ರದರ್ಶನ ನೀಡಿದರು. ಎಂಟನೇ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ ಅವರು 42 ಎಸೆತಗಳಲ್ಲಿ 200 ಸ್ಟ್ರೈಕ್ ರೇಟ್‌ನಲ್ಲಿ 84 ರನ್ ಗಳಿಸಿದರು. ಶಾರ್ದೂಲ್ ಇನ್ನಿಂಗ್ಸ್ ನಲ್ಲಿ 5 ಸಿಕ್ಸರ್ ಹಾಗೂ 9 ಸಿಕ್ಸರ್ ಸಿಡಿಸಿ ಮೇಘಾಲಯ ಬೌಲರ್‌ಗಳನ್ನು ಕಾಡಿದರು. ಇದಾದ ಬಳಿಕ ಎರಡೂ ಇನ್ನಿಂಗ್ಸ್‌ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುವ ಮೂಲಕ ಮೇಘಾಲಯದ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು. ಶಾರ್ದೂಲ್ ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ ನಾಲ್ಕು ವಿಕೆಟ್ ಪಡೆದು ಮಿಂಚಿದರು.