Virat Kohli: ದೆಹಲಿ ತಂಡದ ಮ್ಯಾನೇಜರ್ ವಿರಾಟ್ ಕೊಹ್ಲಿ ಬಗ್ಗೆ ಹೇಳಿದ್ದೇನು?
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ 12 ವರ್ಷಗಳ ನಂತರ ವಿರಾಟ್ ಕೊಹ್ಲಿ ತಮ್ಮ ರಣಜಿ ತಂಡ ದೆಹಲಿಗೆ ಕೊಡುಗೆ ನೀಡಲು ಸಿದ್ಧರಾಗಿದ್ದಾರೆ. ಕೊಹ್ಲಿ ತಮ್ಮ ತಂಡವನ್ನು ಸೇರಿರುವುದು ಉಳಿದ ಆಟಗಾರರಲ್ಲಿ ಉತ್ಸಾಹ ಹೆಚ್ಚಿಸಿದೆ. ಜನವರಿ 30 ರಿಂದ ದೆಹಲಿ ಮತ್ತು ರೈಲ್ವೇಸ್ ನಡುವೆ ರಣಜಿ ಟ್ರೋಫಿ ಪಂದ್ಯ ನಡೆಯಲಿದೆ. ದೆಹಲಿ ತಂಡ ಗೆಲುವಿನೊಂದಿಗೆ ರಣಜಿ ಟ್ರೋಫಿ ಟೂರ್ನಿಗೆ ವಿದಾಯ ಹೇಳಲು ಯೋಜನೆ ಹಾಕಿಕೊಂಡಿದೆ.
ಇದಕ್ಕೂ ಮುನ್ನ ನಡೆದ ಮೂರು ದಿನಗಳ ಕಾಲ ತಮ್ಮ ರೋಲ್ ಮಾಡೆಲ್ ವಿರಾಟ್ ಕೊಹ್ಲಿ ಅವರೊಂದಿಗೆ ಆಟಗಾರರು ಅಭ್ಯಾಸ ನಡೆಸಿದ್ದಾರೆ. ವಿರಾಟ್ ಕೊಹ್ಲಿ ಕೂಡ ಆಟಗಾರರೊಂದಿಗೆ ಸಖತ್ ಎಂಜಾಯ್ ಮಾಡಿದ್ದಾರೆ. ಇದು ದೆಹಲಿ ತಂಡದ ಆಟಗಾರರ ಮನೋಬಲವನ್ನೂ ಹೆಚ್ಚಿಸಿದೆ.

ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್‌ನಿಂದ ಶಾರ್ಟ್ಸ್, ಟಿ-ಶರ್ಟ್ ಮತ್ತು ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಲಾಂಛನವಿರುವ ಸ್ವೆಟರ್ ಧರಿಸಿ ಅಭ್ಯಾಸ ನಡೆಸಿದ್ದಾರೆ. ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ವಿರಾಟ್ ಕೊಹ್ಲಿ ಬರುವುದನ್ನು ದೆಹಲಿ ತಂಡದ ಆಟಗಾರರು ಕಾಯುತ್ತಿದ್ದರು. ಈ ವೇಳೆ ಕ್ರೀಡಾಂಗಣಕ್ಕೆ ಬಂದ ವಿರಾಟ್ ಕೊಹ್ಲಿ ಬನ್ನಿ, ಅಭ್ಯಾಸ ಶುರು ಮಾಡೋಣ ಎಂದಿದ್ದಾರೆ. ತಕ್ಷಣ ಸಂತಸಕೊಂಡ ಆಟಗಾರರು ವಿರಾಟ್ ಕೊಹ್ಲಿ ಅವರೊಂದಿಗೆ ಅಭ್ಯಾಸ ನಡೆಸಿದ್ದಾರೆ.
ಸ್ವಲ್ಪ ಹೊತ್ತಿನ ನಂತರ ಮತ್ತೆ ಡ್ರೆಸ್ಸಿಂಗ್ ರೂಮಿಗೆ ಬಂದ ಕೊಹ್ಲಿ ತನ್ನ ಕ್ರಿಕೆಟ್ ಕಿಟ್ ಹಿಡಿದು ಹೊರಬಂದಿದ್ದಾರೆ. ಈ ವೇಳೆ ಈಗಿನ ದೆಹಲಿ ತಂಡದ ಮ್ಯಾನೇಜರ್ ಹಾಗು ಅಂದು ಅಂಡರ್-19 ವಿಶ್ವಕಪ್ ತಂಡದ ಕೋಚ್ ಆಗಿದ್ದ ಮಹೇಶ್ ಭಾಟಿ ಅವರು ವಿರಾಟ್ ಕೊಹ್ಲಿ ಕಿಟ್‌ಗಳನ್ನು ಎತ್ತಿಕೊಳ್ಳಲು ಕೆಲವು ಚಿಕ್ಕ ಹುಡುಗರಿಗೆ ಸನ್ನೆ ಮಾಡಿದ್ದರು. ಆದರೆ ಕೊಹ್ಲಿ ಅದನ್ನು ತಿರಸ್ಕರಿಸಿದ್ದರು. ಇದಾದ ನಂತರ ಮಾತನಾಡಿದ ಮಹೇಶ್ ಭಾಟಿ ಅವರು ಕೊಹ್ಲಿ ಅನ್ನು ಹೊಗಳಿದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಮಹೇಶ್ ಭಾಟಿ ಅವರು, ' ಕೊಹ್ಲಿ ಅವರು ಈಗಲೂ ಹಾಗೆಯೇ ಇದ್ದಾರೆ. ಎಲ್ಲರಿಗೂ ಒಂದೇ ವಿರಾಟ್. ತರಬೇತಿ ಅವಧಿಯ ಮೊದಲ ದಿನ ಅವರು ಡ್ರೆಸ್ಸಿಂಗ್ ಕೊಠಡಿಯೊಳಗೆ ಹೋಗಿ ತಮ್ಮ ಕಿಟ್ ಬ್ಯಾಗ್ ಅನ್ನು ತೆಗೆದುಕೊಂಡರು. ನಂತರ, ಅವರು ಇಡೀ ದಿನ ಅಭ್ಯಾಸ ಮಾಡಿ ಕಿಟ್ ಬ್ಯಾಗ್ ಅನ್ನು ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿಸಿದರು. ಈ ಸಂದರ್ಭದಲ್ಲಿ ಕಿಟ್ ಬ್ಯಾಗ್ ತೆಗೆದುಕೊಳ್ಳಲು ವಿರಾಟ್, ನಾನು ನಿಮಗೆ ಸಹಾಯ ಮಡುತ್ತೇನೆ ಎಂದು ಹೇಳಿದೆ. ಇದಕ್ಕೆ ಉತ್ತರಿಸಿದ ಕೊಹ್ಲಿ, 'ಅಣ್ಣ, ನೀವು ಏನು ಮಾತನಾಡುತ್ತಿದ್ದೀರಿ? ಇದು ನನ್ನ ಆಟದ ವಸ್ತು, ನಾನೇ ತೆಗೆದುಕೊಳ್ಳುತ್ತೇನೆ' ಎಂದು ಭುಜದ ಮೇಲಿದ್ದ ಕಿಟ್ ಬ್ಯಾಗ್ ಎತ್ತಿಕೊಂಡು ಡ್ರೆಸ್ಸಿಂಗ್ ರೂಮಿನೊಳಗೆ ಹೋದರು ಎಂದು ವಿರಾಟ್ ಕೊಹ್ಲಿಯ ಸರಳತೆಯನ್ನು ಗುಣಗಾನ ಮಾಡಿದ್ದಾರೆ.
ರಣಜಿ ಟ್ರೋಫಿ ಟೂರ್ನಿಯಲ್ಲಿ ರೈಲ್ವೇಸ್ ತಂಡ ಆಡಿರುವ 6 ಪಂದ್ಯಗಳಿಂದ 17 ಅಂಕಗಳನ್ನು ಹೊಂದಿದೆ. ದೆಹಲಿಯನ್ನು ಸೋಲಿಸಿದರೆ ರೈಲ್ವೇಸ್ ತಂಡ ನಾಕೌಟ್ ತಲುಪಬಹುದು. ದೆಹಲಿ ಆರು ಪಂದ್ಯಗಳಿಂದ 14 ಅಂಕಗಳನ್ನು ಗಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications