ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂನಿಯಲ್ಲಿ ಮುಂಬೈ ಮತ್ತು ಜಮ್ಮು ಕಾಶ್ಮೀರ ತಂಡಗಳ ನಡುವೆ ಪಂದ್ಯ ನಡುತ್ತಿದೆ. 10 ವರ್ಷಗಳ ನಂತರ ರೋಹಿತ್ ಶರ್ಮಾ ರಣಜಿ ಆಡುತ್ತಿದ್ದಾರೆ. ಫಾರ್ಮ್ ಸಮಸ್ಯೆ ಎದುರಿಸುತ್ತಿರುವ ರೋಹಿತ್ ಶರ್ಮಾ ಪ್ರದರ್ಶನದ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆದರೆ ರೋಹಿತ್ ಶರ್ಮಾ ರಣಜಿ ಟ್ರೋಫಿಯಲ್ಲೂ ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದ್ದಾರೆ. ರೋಹಿತ್ ಶರ್ಮಾ ಕೇವಲ 3 ರನ್‌ಗಳಿಗೆ ಔಟಾಗಿದ್ದಾರೆ.
ರೋಹಿತ್ ಶರ್ಮಾ ಅವರನ್ನು ಕಡಿಮೆ ರನ್‌ಗಳಿಗೆ ಔಟ್ ಮಾಡುವಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಬೌಲರ್ ಉಮರ್ ನಜೀರ್ ಮಿರ್ ಯಶಸ್ವಿಯಾಗಿದ್ದಾರೆ. ಆದರೆ ಅವರು ರೋಹತ್ ವಿಕೆಟ್ ಪಡೆದಾಗ ಸಂಭ್ರಮಿಸಲಿಲ್ಲ. ಇದರ ಹಿಂದಿರುವ ಆಸಲಿ ಕಾರಣವನ್ನು ಉಮರ್ ನಜೀರ್ ಮಿರ್ ಪಂದ್ಯದ ಮೊದಲ ದಿನದಾಟದ ನಂತರ ಬಹಿರಂಗಪಡಿಸಿದ್ದಾರೆ.

ಕ್ರಿಕೆಟ್‌ನಲ್ಲಿ ಸ್ಟಾರ್ ಬ್ಯಾಟರ್‌ಗಳ ವಿಕೆಟ್ ಪಡೆಯುವುದು ಯುವ ಬೌಲರ್‌ಗಳ ಕನಸಾಗಿರುತ್ತದೆ. ಅದರಂತೆ ಉಮರ್ ನಜೀರ್ ಮಿರ್ ಅವರ ಕನಸು ರಣಜಿ ಟ್ರೋಫಿಯಲ್ಲಿ ನಸಾಗಿದೆ. ರೋಹಿತ್ ಶರ್ಮಾ ವಿಕೆಟ್ ಅವರಿಗೆ ಸಿಕ್ಕ ದೊಡ್ಡ ಯಶಸ್ಸು. ಅದ್ಭುತವಾಗಿ ಬೌಲಿಂಗ್ ಮಾಡಿದ ಅವರು 41 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದ್ದಾರೆ. ಪರಿಣಾಮ ಬಲಿಷ್ಠ ಮುಂಬೈ ತಂಡ ಮೊದಲ ಇನ್ನಿಂಗ್ಸ್ ಕೇವಲ 120 ರನ್‌ಗಳಿಗೆ ಸರ್ವಪತನವಾಗಿದೆ. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡುತ್ತಿರುವ ಜಮ್ಮು ಮತ್ತು ಕಾಶ್ಮೀರ್ 7 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿದೆ.
ಉಮರ್ ನಜೀರ್ ಪಂದ್ಯದ ಆರಂಭಿಕ ದಿನದಂದು ವೇಗದ ಬೌಲರ್‌ಗಳಿಗೆ ಅನುಕೂಲಕರ ಪರಿಸ್ಥಿತಿಯ ಲಾಭವನ್ನು ಪಡೆದರು. 41 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಪಡೆದರು. ರೋಹಿತ್ ಹೊರತುಪಡಿಸಿ, ಅಜಿಂಕ್ಯ ರಹಾನೆ (12), ಶಿವಂ ದುಬೆ (0) ಮತ್ತು ಹಾರ್ದಿಕ್ ತಮೋರ್ (7) ಅವರನ್ನು ಬಲಿ ಪಡೆದರು. ಮೊದಲ ದಿನದಾಟದ ನಂತರ ಪಂದ್ಯದ ನಂತರ ಮಾತನಾಡಿದ ಅವರು ರೋಹಿತ್ ಶರ್ಮಾ ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಇದರಿಂದಾಗಿ ರೋಹಿತ್ ಶರ್ಮಾ ವಿಕೆಟ್ ಪಡೆದಾಗ ಸಂಭ್ರಮಿಸಲಿಲ್ಲ ಎಂದಿದ್ದಾರೆ.
ನಜೀರ್ ಹೇಳಿದ್ದೇನು?
ರೋಹಿತ್ ಶರ್ಮಾ ವಿಕೆಟ್ ಪಡೆದ ಬಗ್ಗೆ ಪಂದ್ಯದ ನಂತರ ಉಮರ್ ನಜೀರ್ ಮಾತನಾಡಿದ್ದಾರೆ. 'ಯಾವುದೇ ಆಟಗಾರನ ವಿರುದ್ಧ ಉತ್ತಮ ಬೌಲಿಂಗ್ ಮಾಡಿದಾಗ, ನೀವು ಆಟಗಾರನ ಸ್ಥಿತಿಯನ್ನು ನೋಡಬೇಡಿ. ಆದರೆ ರೋಹಿತ್ ಶರ್ಮಾ ಅವರ ವಿಕೆಟ್ ಪಡೆದಿದ್ದು ನನಗೆ ಸಂತೋಷವಾಗಿದೆ. ಅವರನ್ನು ಔಟ್ ಮಾಡಿದ ನಂತರ ನನ್ನ ಮನಸ್ಸಿಗೆ ಬಂದ ಮೊದಲ ಆಲೋಚನೆಯೆಂದರೆ ರೋಹಿತ್ ಶರ್ಮಾ ಅವರ ಅಭಿಮಾನಿಯಾದ ನಾನು ಸಂಭ್ರಮಿಸಬಾರದು ಎಂದು ಉಮರ್ ನಜೀರ್ ಹೇಳಿದ್ದಾರೆ.
ಗೆಲುವಿನ ಹಂಬಲ
ರೋಹಿತ್ ಶರ್ಮಾ ಅವರು ದೊಡ್ಡ ಆಟಗಾರ ಎಂದು ನನಗೆ ತಿಳಿದಿದೆ. ನಾನು ಅವರನ್ನು ಔಟ್ ಮಾಡಿದ್ದೇನೆ. ಅಲ್ಲದೆ, ನಾನು ರೋಹಿತ್ ಶರ್ಮಾ ಅವರ ದೊಡ್ಡ ಅಭಿಮಾನಿ. ಈ ಪಂದ್ಯವನ್ನು ಗೆದ್ದರೆ ಅದು ಹೆಮ್ಮೆಯ ಕ್ಷಣವಾಗಿದೆ. ಏಕೆಂದರೆ ಭಾರತ ತಂಡದ ನಾಯಕ ಎದುರಾಳಿ ತಂಡಕ್ಕೆ ಸೇರಿದ್ದಾರೆ ಎಂದು ಉಮರ್ ನಜೀರ್ ಗೆಲುವಿನ ಹಂಬಲವನ್ನು ವ್ಯಕ್ತಪಡಿಸಿದ್ದಾರೆ. 10 ವರ್ಷಗಳ ಹಿಂದೆ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ತಂಡವನ್ನು ಸೋಲಿಸಿದ್ದ ಜಮ್ಮು ಮತ್ತು ಕಾಶ್ಮೀರ್ ತಂಡದ ಭಾಗವಾಗಿ ನಜೀರ್ ಇದ್ದರು.