ರಣಜಿ: ಸೌರಾಷ್ಟ್ರ ವಿರುದ್ಧ ಕರ್ನಾಟಕಕ್ಕೆ ಪಾಂಡೆ, ಶ್ರೇಯಸ್, ಶರತ್ ಆಸರೆ

ಬೆಂಗಳೂರು, ಜನವರಿ 24: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಗುರುವಾರ (ಜನವರಿ 24) ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದು 264 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮನೀಶ್ ಪಾಂಡೆ ಬಳಗಕ್ಕೆ ಆರಂಭಿಕ ಆಟಗಾರರಾದ ರವಿಕುಮಾರ್ ಸಮರ್ಥ್ (0), ಮಯಾಂಕ್ ಅಗರ್ವಾಲ್ (2) ರನ್ ಬೆಂಬಲ ದೊರೆಯಲಿಲ್ಲ. ಕೃಷ್ಣ ಮೂರ್ತಿ ಸಿದ್ಧಾರ್ಥ್ ಮತ್ತು ಕರುಣ್ ನಾಯರ್ ಕೂಡ ಬೇಗನೆ ಔಟ್ ಆಗಿದ್ದರಿಂದ ರಾಜ್ಯ ತಂಡ ಭೀತಿಗೆ ಒಳಗಾಯಿತು.
ಆದರೆ ತಂಡದ ನೆರವಿಗೆ ನಾಯಕ ಮನೀಷ್ ನಿಂತರು. 62 ರನ್ ಬಾರಿಸಿದ ಪಾಂಡೆ ಜಯದೇವ್ ಉನಾದ್ಕತ್‌ಗೆ ವಿಕೆಟ್ ನೀಡಿದರು. ಅನಂತರ ಬಂದ ಶ್ರೇಯಸ್ ಗೋಪಾಲ್ ಕೂಡ 87 ರನ್ ಸೇರಿಸಿದ್ದರಿಂದ ಕರ್ನಾಟಕ ಕೊಂಚ ಚೇತರಿಕೆ ಕಂಡಿತು.
ಗುರುವಾರ (ಜನವರಿ 24) ದಿನದಾಟದ ಅಂತ್ಯಕ್ಕೆ 7ನೇ ಕ್ರಮಾಂಕದಲ್ಲಿ ಬ್ಯಾಟ್ ಕೈಗೆತ್ತಿಕೊಂಡ ಶ್ರೀನಿವಾಸ್ ಶರತ್ 74 ರನ್, ಅಂತಿಮ ಬ್ಯಾಟ್ಸ್ಮನ್ ರೋನಿತ್ ಮೋರೆ (0) ಕ್ರೀಸ್‌ನಲ್ಲಿದ್ದಾರೆ. ಕರ್ನಾಟಕ 90 ಓವರ್ ಮುಕ್ತಾಯಕ್ಕೆ 9 ವಿಕೆಟ್ ಕಳೆದು 264 ರನ್ ಪೇರಿಸಿದೆ. ಕರ್ನಾಟಕ ಇನ್ನಿಂಗ್ಸ್ ವೇಳೆ ಸೌರಾಷ್ಟ್ರದ ಉನಾದ್ಕತ್ 4, ಕಮಲೇಶ್ ಮಕ್ವಾನ 3 ವಿಕೆಟ್‌ನೊಂದಿಗೆ ಪಾರಮ್ಯ ಮೆರೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications