Rashid Khan: 3 ವಿಕೆಟ್ ಪಡೆಯುತ್ತಲೇ ವಿಶ್ವದಾಖಲೆ ಬರೆದ ರಶೀದ್ ಖಾನ್
ಟಿ20 ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ ಬೌಲರ್ ರಶೀದ್ಖಾನ್ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಯುಎಇ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲುವಿನಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸಿದರು. ಈ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸುವ ಮೂಲಕ ರಶೀದ್ಖಾನ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಹಾಗಿದ್ದರೆ ರಶೀದ್ಖಾನ್ ಬರೆದಿರುವ ವಿಶ್ವ ದಾಖಲೆ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಅಫ್ಘಾನಿಸ್ತಾನ ಹಾಗೂ ಯುಎಇ ನಡುವ ಮೂರನೇ ಟಿ20 ಪಂದ್ಯ ಶಾರ್ಜಾದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 188 ರನ್ ಸೇರಿಸಿತು. ಆಫ್ಘನ್ ಪರ ಸೇದಿಕುಲ್ಲಾ ಅಟಲ್ ಹಾಗೂ ಇಬ್ರಾಹಿಂ ಜದ್ರಾನ್ ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಯುಎಇನ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 150 ರನ್ ಕಲೆ ಹಾಕಿ, 38 ರನ್‌ಗಳ ಸೋಲು ಕಂಡಿತು.

ಇದೇ ಪಂದ್ಯದಲ್ಲಿ ರಶೀದ್ಖಾನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇವರು ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದಾರೆ. ತ್ರಿಕೋನ ಸಣಿಯಲ್ಲಿ ಯುಎಇ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ, ರಶೀದ್ ಖಾನ್ ತಮ್ಮ ನಾಲ್ಕು ಓವರ್‌ಗಳಲ್ಲಿ 21 ರನ್‌ಗಳಿಗೆ 3 ವಿಕೆಟ್ ಪಡೆದರು. ಈ ಮೂಲಕ ನ್ಯೂಜಿಲೆಂಡ್ ಸ್ಟಾರ್ ವೇಗದ ಬೌಲರ್ ಟೀಮ್ ಸೌಥಿ ಸಾಧನೆ ಅಳಿಸಿ ಹಾಕಿದ್ದಾರೆ.
ರಶೀದ್ಖಾನ್ ವಿಶ್ವ ದಾಖಲೆ
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಈಗ ಅಫ್ಘಾನಿಸ್ತಾನದ ಸ್ಪಿನ್ ಬೌಲರ್ ರಶೀದ್ಖಾನ್ ನಂಬರ್ 1 ಸ್ಥಾನವನ್ನು ತಲುಪಿದ್ದಾರೆ. ಇವರು ಆಡಿದ 165 ವಿಕೆಟ್ ಗಳನ್ನು ಪಡೆಯಲು 98 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ನ್ಯೂಜಿಲೆಂಡ್ ತಂಡದ ಸ್ಟಾರ್ ಬೌಲರ್ ಟೀಮ್ ಸೌಥಿ 126 ಪಂದ್ಯಗಳಲ್ಲಿ 164 ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಕಿವೀಸ್ ತಂಡದವರೇ ಆದ ಇಶ್ ಸೋದಿ ಇದ್ದು ಇವರು 126 ಪಂದ್ಯಗಳಲ್ಲಿ 150 ವಿಕೆಟ್ ಪಡೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿ ಬಾಂಗ್ಲಾದೇಶ ಬೌಲರ್‌ಗಳು ಇದ್ದಾರೆ.
T-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು
ರಶೀದ್ ಖಾನ್, 98 ಪಂದ್ಯ, 165 ವಿಕೆಟ್
ಟಿಮ್ ಸೌಥಿ, 126 ಪಂದ್ಯ, 164 ವಿಕೆಟ್
ಇಶ್ ಸೋಧಿ, 126 ಪಂದ್ಯ, 150 ವಿಕೆಟ್
ಶಕೀಬ್ ಅಲ್ ಹಸನ್, 129 ಪಂದ್ಯ, 149 ವಿಕೆಟ್
ಮುಸ್ತಫಿಜುರ್ ರೆಹಮಾನ್, 113 ಪಂದ್ಯ, 142 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications