ರಶೀದ್ ಖಾನ್ ನೆಚ್ಚಿನ ಟಾಪ್ 5 ಟಿ20 ಆಟಗಾರರಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ

ದುಬೈ: ಅಫ್ಘಾನಿಸ್ತಾನದ ಸ್ಟಾರ್ ಬೌಲಿಂಗ್ ಆಲ್ ರೌಂಡರ್ ರಶೀದ್ ಖಾನ್ ಟಿ20 ಕ್ರಿಕೆಟ್‌ನಲ್ಲಿ ತನ್ನ ನೆಚ್ಚಿನ ಐದು ಆಟಗಾರರನ್ನು ಹೆಸರಿಸಿದ್ದಾರೆ. ಈ ಐವರಲ್ಲಿ ಖಾನ್ ಇಬ್ಬರು ಭಾರತೀಯರಿಗೆ ಸ್ಥಾನ ನೀಡಿದ್ದಾರೆ. ಖಾನ್ ನೆಚ್ಚಿನ ಐವರು ಟಿ20 ಆಟಗಾರರಲ್ಲಿರುವ ಇಬ್ಬರು ಭಾರತೀಯರೆಂದರೆ ನಾಯಕ ವಿರಾಟ್ ಕೊಹ್ಲಿ ಮತ್ತು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ.
ಟಿ20 ವರ್ಲ್ಡ್‌ಕಪ್ ಡಾಕ್ ಕಾಮ್ ಜೊತೆ ಸಂದರ್ಶನದಲ್ಲಿ ಮಾತನಾಡಿದ ರಶೀದ್ ಖಾನ್, ಭಾರತದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರೂ ಎಂಥ ಸಂದರ್ಭದಲ್ಲೂ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯ ಉಳ್ಳವರು ಎಂದಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲೂ ಪಂದ್ಯ ಗೆಲ್ಲಿಸುವ ಶಕ್ತಿ ಈ ಇಬ್ಬರಿಗಿದೆ ಎಂದು ಖಾನ್ ಹೇಳಿದ್ದಾರೆ.
ರಶೀದ್ ತನಗೆ ನೆಚ್ಚಿನ ಟಿ20 ಆಟಗಾರರಾಗಿ ಹೆಸರಿಸಿದವರೆಂದರೆ ದಕ್ಷಿಣ ಆಫ್ರಿಕಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ವೆಸ್ಟ್ ಇಂಡೀಸ್ ಸ್ಟಾರ್ ಕೀರನ್ ಪೊಲಾರ್ಡ್ ಮತ್ತು ಭಾರತದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಕೊಹ್ಲಿ 3,159 ರನ್ ಗಳಿಸಿದ್ದಾರೆ. ಹೀಗಾಗಿ ಕೊಹ್ಲಿ ಟಿ20ಐನಲ್ಲಿ ಅತ್ಯಧಿಕ ರನ್ ಗಳಿಸಿದವರಲ್ಲಿ ಮುಂಚೂಣಿಯಲ್ಲಿದ್ದಾರೆ. ಸಂದರ್ಶನದ ವೇಳೆ ರಶೀದ್, ಪೊಲಾರ್ಡ್ ಮತ್ತು ಹಾರ್ದಿಕ್ ಬಗ್ಗೆ ಮಾತನಾಡಿದ್ದಾರೆ. ಎಂಥ ಒತ್ತಡದ ಸಂದರ್ಭದಲ್ಲೂ ಇವರಿಬ್ಬರು ಪಂದ್ಯ ಗೆಲ್ಲಿಸುತ್ತಾರೆ ಎಂದು ಖಾನ್ ಅಭಿಪ್ರಾಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications