ವಿಶ್ವಕಪ್: ಕೊಹ್ಲಿ ಕೊಟ್ಟ ಬ್ಯಾಟ್ ಕದ್ದು ಹೋಗಿದ್ದರ ಗಮ್ಮತ್ತು ಬಿಚ್ಚಿಟ್ಟ ರಶೀದ್!

ಲಂಡನ್, ಜೂನ್ 1: ಮೈದಾನದಲ್ಲಿ ಬ್ಯಾಟ್ ಮೂಲಕ ಅಬ್ಬರಿಸುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಲ್ಲಾ ಕ್ರಿಕೆಟ್ ಆಟಗಾರರ ಜೊತೆಗೂ ಅತ್ಯಂತ ಸ್ನೇಹ ಭಾವ ಹೊಂದಿರುವವರು. ಎದುರಾಳಿ ಆಟಗಾರರೇ ಆಗಲಿ, ಕೊಹ್ಲಿ ಬ್ಯಾಟಿಂಗ್ ಸಲಹೆಗಳನ್ನು ನೀಡಲು ಅಂಜಿಕೊಳ್ಳಲಾರರು.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್‌ಗಳಿಂದ ಬ್ಯಾಟ್ ಸಂಗ್ರಹಿಸುವ ತನ್ನ ಹವ್ಯಾಸದ ಬಗ್ಗೆ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಶನಿವಾರದ (ಜೂನ್ 1) ವಿಶ್ವಕಪ್ ಪಂದ್ಯಕ್ಕೂ ಮುನ್ನ, ಅಫ್ಘಾನ್ ಆಲ್ ರೌಂಡರ್ ರಶೀದ್ ಖಾನ್, ಕ್ರಿಕೆಟ್ ಡಾಟ್ ಕಾಮ್ ಡಾಟ್ ಎಯು ಜೊತೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಗೆಳೆಯ ಕೊಹ್ಲಿಯನ್ನೂ ಉಲ್ಲೇಖಿಸಿದ್ದಾರೆ.
ಶ್ರೀಲಂಕಾ vs ನ್ಯೂಜಿಲ್ಯಾಂಡ್, ಜೂನ್ 1, Live ಸ್ಕೋರ್‌ಕಾರ್ಡ್
ಕ್ರಿಕೆಟ್ ಡಾಟ್ ಕಾಮ್ ಡಾಟ್ ಎಯು ಜೊತೆ ಮಾತನಾಡುತ್ತ ರಶೀದ್, ಕೊಹ್ಲಿ ಬ್ಯಾಟ್ ಬಳಸಿದಾಗ ತನಗಾದ ಅನುಭವ, ಅನಂತರ ಅದೇ ಬ್ಯಾಟನ್ನು ಇನ್ನೊಬ್ಬ ಕಸಿದುಕೊಂಡಿದ್ದ ಘಟನೆಯನ್ನು ವಿವರಿಸಿದ್ದಾರೆ.

ಬೇರೆಯವರಿಂದ ಬ್ಯಾಟ್ ಪಡೆದಿದ್ದೇನೆ
'ಬ್ಯಾಟಿಂಗ್ ಕೌಶಲಗಳನ್ನು ನೀವು ಕಲಿಯುವಾಗ ನಿಮಗೆ ಉತ್ತಮ ಬ್ಯಾಟ್ ಕೂಡ ಬೇಕಾಗುತ್ತದೆ. ನಾನು ಕೆಲ ಬ್ಯಾಟ್‌ಗಳನ್ನು ಬೇರೆಯವರಿಂದ ಪಡೆದುಕೊಂಡಿದ್ದೇನೆ. ಹಾಗೆ ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್, ಕೆಎಲ್ ರಾಹುಲ್ ಅವರಿಂದಲೂ ವಿಶೇಷ ಬ್ಯಾಟ್‌ಗಳನ್ನು ಪಡೆದುಕೊಂಡಿದ್ದೆ' ಎಂದು ರಶೀದ್ ತಿಳಿಸಿದರು.

ಫೋರ್ ಬಾರಿಸಿದ್ದು ಸಿಕ್ಸ್ ಹೋಗಿತ್ತು!
'ನಾನು ಐರ್ಲೆಂಡ್ ವಿರುದ್ಧ ಬ್ಯಾಟಿಂಗ್ ಮಾಡುತ್ತಿದ್ದಾಗ ಒಂದು ಎಸೆತಕ್ಕೆ ಬೌಂಡರಿಗೆ ಯತ್ನಿಸಿದೆ; ಅದು ಸಿಕ್ಸ್ ಅನ್ನಿಸಿತು. ನಾನು, ಅರೆ ಇದೇನಾಗುತ್ತಿದೆ? ಇದು ಸಿಕ್ಸ್ ಹೋಗಿಬಿಟ್ಟಿತಾ ಅಂತ ಬೆರಗಾದೆ. ಈ ಬ್ಯಾಟ್ ನಲ್ಲಿ ಏನೋ ವಿಶೇಷತೆ ಇದೆ ಅನ್ನಿಸಿತು. ಆ ಬ್ಯಾಟ್ ನಂಗೆ ಭಾಳ ಇಷ್ಟವೂ ಆಯ್ತು' ಎಂದು ಘಟನೆಯೊಂದನ್ನು ವಿವರಿಸಿದರು.

ಸಾಧ್ಯವಿಲ್ಲ ಎಂದಿದ್ದೆ
ಮಾತು ಮುಂದುವರೆಸಿದ ರಶೀದ್, 'ಅನಂತರ ನಾನು ಪೆವಿಲಿಯನ್‌ಗೆ ಬಂದಾಗ ನಮ್ಮ ಮೊದಲಿನ ಕ್ಯಾಪ್ಟನ್ ಅಸ್ಘರ್ ಅಫ್ಘಾನ್ ನನ್ನ ಸಮೀಪಕ್ಕೆ ಬಂದರು. ಆ ಬಳಸಿದ್ದೆಯಲ್ಲ ಆ ಬ್ಯಾಟ್ ನನಗೆ ಕೊಡು ಎಂದ. ನಾನಾಗ ಓಹ್, ಇಲ್ಲ, ಸಾಧ್ಯವಿಲ್ಲ ಎಂದಿದ್ದೆ' ಎಂದರು.

ಕೇಳೋ ಮೊದಲೇ ಕದ್ದಿದ್ದ
'ನಿಜ ಹೇಳಬೇಕೆಂದರೆ ಆತ ನನ್ನಲ್ಲಿ ಕೇಳುವ ಮೊದಲೇ ಆ ಬ್ಯಾಟನ್ನು ನನ್ನ ಬ್ಯಾಗಿನಿಂದ ಎತ್ತಿಕೊಂಡು ಎತ್ತಿಕೊಂಡು ತನ್ನ ಬ್ಯಾಗ್‌ಗೆ ತುಂಬಿಕೊಂಡುಬಿಟ್ಟಿದ್ದ. ಅದು ತುಂಬಾ ಸ್ಪೆಷಲ್ ಬ್ಯಾಟ್ ಆಗಿತ್ತು. ತುಂಬಾ ತುಂಬಾ ವಿಶೇಷ ಬ್ಯಾಟ್ಸ್ಮನ್(ಕೊಹ್ಲಿ)ನಿಂದ ಲಭಿಸಿದ ಬ್ಯಾಟ್ ಅದಾಗಿತ್ತು' ಎಂದು ಹಿಂದಿನ ಕ್ಷಣವೊಂದನ್ನು ಸ್ಮರಿಸಿ ರಶೀದ್ ನಕ್ಕರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications