ಮತ್ತೆ ಹ್ಯಾಟ್ರಿಕ್ ವಿಕೆಟ್ ಪಡೆದ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್: ವೀಡಿಯೋ

ಅಡಿಲೇಡ್, ಜನವರಿ 8: ಅಫ್ಘಾನಿಸ್ತಾನ ಲೆಗ್ ಸ್ಪಿನ್ನರ್ ರಶೀದ್ ಖಾನ್ ಮತ್ತೊಂದು ಹ್ಯಾಟ್ರಿಕ್ ಸಾಧನೆ ಮೆರೆದಿದ್ದಾರೆ. ಬಿಗ್ ಬ್ಯಾಷ್ ಲೀಗ್‌ನಲ್ಲಿ ಖಾನ್‌ಗೆ ಹ್ಯಾಟ್ರಿಕ್ ವಿಕೆಟ್‌ಗಳು ಲಭಿಸಿವೆ. ಇದು ಟಿ20 ಕ್ರಿಕೆಟ್ ಮಾದರಿಯಲ್ಲಿ ರಶೀದ್ ಮಾಡಿದ 5ನೇ ಹ್ಯಾಟ್ರಿಕ್ ದಾಖಲೆ.
ಅಡಿಲೇಡ್ ಓವಲ್‌ನಲ್ಲಿ ಬುಧವಾರ (ಜನವರಿ 8) ನಡೆದ ಬಿಗ್ ಬ್ಯಾಷ್ ಲೀಗ್‌ನ ಅಡಿಲೇಡ್ ಸ್ಟ್ರೈಕರ್ಸ್ vs ಸಿಡ್ನಿ ಸಿಕ್ಸರ್ಸ್ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಪ್ರತಿನಿಧಿಸಿದ್ದ ರಶೀದ್ ಖಾನ್ ಕ್ರಮವಾಗಿ 10.5, 106 ಮತ್ತು 12.1ನೇ ಓವರ್‌ನಲ್ಲಿ ವಿಕೆಟ್ ಪಡೆದು ಹ್ಯಾಟ್ರಿಕ್ ದಾಖಲೆ ಪೂರೈಸಿಕೊಂಡರು.
ರಶೀದ್ ಬೌಲಿಂಗ್‌ಗೆ ಸಿಡ್ನಿ ಸಿಕ್ಸರ್ಸ್ ತಂಡದ ಜೇಮ್ಸ್ ವಿನ್ಸ್ (10.5), ಜ್ಯಾಕ್ ಎಡ್ವರ್ಡ್ಸ್ (10.6) ಮತ್ತು ಜೋರ್ಡನ್ (12.1) ಸಿಲ್ಕ್ ಬಲಿಯಾಗದರು. ಪಂದ್ಯದಲ್ಲಿ ರಶೀದ್ ಒಟ್ಟಿಗೆ 4 ವಿಕೆಟ್ ಪಡೆದರು. ಆದರೆ ರಶೀದ್ ಮಾರಕ ಬೌಲಿಂಗ್ ಹೊರತಾಗಿಯೂ ಸಿಡ್ನಿ ಸಿಕ್ಸರ್ ಪಂದ್ಯವನ್ನು 2 ವಿಕೆಟ್‌ಗಳಿಂದ ಗೆದ್ದುಕೊಂಡಿತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಅಡಿಲೇಡ್ ಸ್ಟ್ರೈಕರ್ಸ್, ಜೇಕ್ ವೀಥರಾಲ್ಡ್ 47, ನಾಯಕ ಅಲೆಕ್ಸ್ ಕ್ಯಾರಿ 32 ರನ್‌ನೊಂದಿಗೆ 19.4ನೇ ಓವರ್‌ಗೆ ಸರ್ವಪತನ ಕಂಡು 135 ರನ್ ಮಾಡಿತ್ತು. ಗುರಿ ಬೆಂಬತ್ತಿದ ಸಿಡ್ನಿ ಸಿಕ್ಸರ್ಸ್, ಜೇಮ್ಸ್ ವಿನ್ಸ್ 27, ಟಾಮ್ ಕರನ್ 21 ರನ್‌ನೊಂದಿಗೆ 18.4ನೇ ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 137 ರನ್ ಗೆರೆ ದಾಟಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications