Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುಎಇ ವಿರುದ್ಧದ ಸರಣಿಗೆ ತಂಡದಿಂದ ಹೊರಬಿದ್ದ ನಬಿ: ಅಫ್ಘಾನ್ ಪಡೆಗೆ ರಶೀದ್ ನೂತನ ನಾಯಕ

Rashid Khan will lead Afghanistans 18-member team for Afghanistan Series

ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧದ ಟಿ20 ಸರಣಿಗೆ 18 ಸದಸ್ಯರ ಅಫ್ಘಾನಿಸ್ತಾನ ತಂಡವನ್ನು ಪ್ರಕಟಿಸಲಾಗಿದ್ದು ಮೊಹಮ್ಮದ್ ನಬಿ ತಂಡದಿಂದ ಹೊರಬಿದ್ದಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಅಫ್ಘನ್ ತಂಡವನ್ನು ಮುನ್ನಡೆಸಿದ್ದ ನಬಿ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನಿಡಿದ ಬಳಿಕ ನಾಯಕತ್ವದಿಂದ ಕೆಳಗಿಳಿದಿದ್ದರು.

ಹೀಗಾಗಿ ರಶೀದ್ ಖಾನ್ ಅಪ್ಘಾನಿಸ್ತಾನ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಇನ್ನು ಈ ಸರಣಿಗೆ ಅಫ್ಘಾನಿಸ್ತಾನದ ಏಕದಿನ ತಂಡದ ಖಾಯಂ ಆಟಗಾರರಾದ ರಹ್ಮತ್ ಶಾ ಹಾಗೂ ಜಹೀರ್ ಖಾನ್ ಪಕ್ತೀನ್ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಅಫ್ಸರ್ ಝಜೈ, ನೂರ್ ಅಹ್ಮದ್, ನಿಜತ್ ಮಸೂದ್ ಮತ್ತು ಕರೀಂ ಜನತ್ ತಂಡಕ್ಕೆ ವಾಪಾಸಾಗಿದ್ದಾರೆ. ಇನ್ನು ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಮೀಸಲು ಆಟಗಾರನಾಗಿದ್ದ ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಶರಫುದ್ದೀನ್ ಅಶ್ರಫ್ ಕೂಡ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

"ನಾವು ಯಾವುದೇ ತಂಡವನ್ನು ಲಘುವಾಗಿ ಪರಿಗಣಿಸುವುದಿಲ್ಲ ಮತ್ತು ಯಾವುದೇ ಸರಣಿಗೂ ತಂಡವನ್ನು ಸಂಪೂರ್ಣವಾಗಿ ಸಿದ್ಧಪಡಿಸಲು ಬಯಸುತ್ತೇವೆ. ಸರಣಿಗೆ ಸಿದ್ಧವಾಗುವ ಹಿನ್ನೆಲೆಯಲ್ಲಿ ತಂಡವು ಸುಮಾರು 10 ದಿನಗಳಿಂದ ಯುಎಇಯಲ್ಲಿದೆ" ಎಂದು ಎಸಿಬಿ ಅಧ್ಯಕ್ಷ ಮಿರ್ವೈಸ್ ಅಶ್ರಫ್ ಹೇಳಿಕೆ ನೀಡಿದ್ದಾರೆ.

ಇನ್ನು ಅಫ್ಘಾನಿಸ್ತಾನ ಹಾಗೂ ಯುಎಇ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪೈಪೋಟಿ ನಡೆಸಲಿದೆ. ಈ ಪಂದ್ಯಗಳು ಫೆಬ್ರವರಿ 16, 18 ಮತ್ತು 19 ರಂದು ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ನಡೆಯಲಿವೆ. ಈ ಸರಣಿಯು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ನಡುವಿನ 5 ವರ್ಷಗಳ ಒಪ್ಪಂದದ ಭಾಗವಾಗಿದೆ.

ಅಫ್ಘಾನಿಸ್ತಾನ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಅಫ್ಸರ್ ಝಜೈ, ಅಜ್ಮತುಲ್ಲಾ ಒಮರ್ಝೈ, ಫರೀದ್ ಅಹ್ಮದ್, ಫಝಲ್ಹಕ್ ಫಾರೂಕಿ, ಗುಲ್ಬದಿನ್ ನೈಬ್, ಹಜರತುಲ್ಲಾ ಝಜೈ, ಇಬ್ರಾಹಿಂ ಝದ್ರಾನ್, ಕರೀಂ ಜನತ್, ಮುಜೀಬ್ ಉರ್ರಹಮಾನ್, ನವ್ಜ್ ಉರ್ರಹಮಾನ್, ನವ್ಜಾಲ್ ರಹಮಾನ್ ಮಸೂದ್, ನೂರ್ ಅಹ್ಮದ್, ರಹಮತ್ ಶಾ, ಶರಫುದ್ದೀನ್ ಅಶ್ರಫ್, ಜಹೀರ್ ಖಾನ್

Story first published: Wednesday, February 15, 2023, 23:37 [IST]
Other articles published on Feb 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+