Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2020: ನಿಸ್ವಾರ್ಥ ಪ್ರೀತಿ ತೋರಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ರಶೀದ್ ಖಾನ್

Rashid Thanks Fans For Unconditional Support This Season

ಐಪಿಎಲ್ 13ನೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಪ್ಲೇಆಫ್ ಹಂತದಿಂದ ಹೊರಬಿದ್ದಿದೆ. ಡೆಲ್ಲಿ ವಿರುದ್ಧ ನಡೆದ ನಿರ್ಣಾಯಕ ಪಂದ್ಯದಲ್ಲಿ ಹೈದರಾಬಾದ್ 17 ರನ್‌ಗಳ ಸೋಲು ಅನುಭವಿಸಿ ಟೂರ್ನಿಯಲ್ಲಿ ಹೋರಾಟ ಅಂತ್ಯಗೊಳಿಸಿತು. ಈ ಸೋಲಿನ ಬಳಿಕ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ಪ್ರತಿಕ್ರಿಯಿಸಿದ್ದು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಸನ್‌ರೈಸರ್ಸ್ ಹೈದರಬಾದ್ ತಂಡವನ್ನು ಹಾಗೂ ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಟೂರ್ನಿಯುದ್ದಕ್ಕೂ ನೀವು ನಮಗೆ ಬೆಂಗಲವನ್ನು ನೀಡಿದ್ದೀರಿ. ಕಿತ್ತಳೆ ಸೇನೆ ಸೋಲು ಗೆಲುವು ಏನೇ ಇರಲಿ ಎಂದಿಗೂ ನಮಗೆ ಬೆಂಬಲವಾಗಿ ನಿಲ್ಲುತ್ತದೆ. ನಿಮ್ಮ ಈ ಬೆಂಬಲ ನಮಗೆ ಹೋರಾಡಲು ಬಲ ನೀಡುತ್ತದೆ. ಧನ್ಯವಾದಗಳು, ಮುಂದಿನ ಆವೃತ್ತಿಯವರೆಗೆ" ಎಂದು ರಶೀದ್ ಖಾನ್ ಟ್ವೀಟ್ ಮಾಡಿದ್ದಾರೆ.

ರಶೀದ್ ಖಾನ್ ಈ ಬಾರಿಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. 16 ಪಂದ್ಯಗಳಲ್ಲಿ ರಶೀದ್ ಖಾನ್ 16 ವಿಕೆಟ್ ಕಿತ್ತಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ನಾಲ್ಕನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ. 5.37 ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿರುವುದು ಟೂರ್ನಿಯಲ್ಲೇ ಅತಿ ಕಡಿಮೆ ಎನಿಸಿದೆ.

ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿ 189 ರನ್‌ಗಳಲ್ಲಿ ಕಲೆ ಹಾಕಿತು. ಶಿಖರ್ ಧವನ್ ಹಾಗೂ ಶಿಮ್ರಾನ್ ಹೇಟ್ಮೆಯರ್ ಭರ್ಜರಿ ಪ್ರದರ್ಶನವನ್ನು ನೀಡಿದರು. ಬಳಿಕ ಬೌಲಿಂಗ್‌ನಲ್ಲಿ ಕಗಿಸೋ ರಬಡಾ 4 ಹಾಗೂ ಮಾರ್ಕಸ್ ಸ್ಟೋಯ್ನಿಸ್ 3 ವಿಕೆಟ್ ಪಡೆದು ಮಿಂಚಿದ್ದರು. ಈ ಮೂಲಕ ಹೈದರಾಬಾದ್ ಸೋಲಿಗೆ ಕಾರಣರಾದರು.

Story first published: Monday, November 9, 2020, 15:51 [IST]
Other articles published on Nov 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+