ಮುಂದಿನ ಆವೃತ್ತಿಗೂ ಮುನ್ನ ತಂಡವನ್ನು ಬದಲಾಯಿಸಿದ ಬಿಷ್ಣೋಯ್! ಈ ತಂಡದ ಪರ ಆಡಲಿದ್ದಾರೆ ಯುವ ಸ್ಪಿನ್ನರ್
ದೇಶೀಯ ಕ್ರಿಕೆಟ್‌ನ ಆವೃತ್ತಿಯ ಆರಂಭಕ್ಕೂ ಮುನ್ನ ಭಾರತದ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ತಮ್ಮ ತಂಡವನ್ನು ಬದಲಾಯಿಸಿಕೊಂಡಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಈವರೆಗೆ ರವಿ ಬಿಷ್ಣೋಯ್ ತಮ್ಮ ತವರು ತಂಡವಾಗಿ ರಾಜಸ್ಥಾನವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಮುಂದಿನ ಆವೃತ್ತಿಗೂ ಮುನ್ನ ಅವರು ತಮ್ಮ ತಂಡವನ್ನು ಬದಲಾಯಿಸಿಕೊಂಡಿದ್ದಾರೆ.
ರವಿ ಬಿಷ್ಣೋಯ್ ಮುಂದಿನ ದೇಶೀಯ ಕ್ರಿಕೆಟ್ ಆವೃತ್ತಿಯಲ್ಲಿ ರಾಜಸ್ತಾನ ತಂಡದ ಪರವಾಗಿ ಕಣಕ್ಕಿಳಿಯುವುದಿಲ್ಲ. ಇದೀಗ ಅವರು ಗುಜರಾತ್ ತಂಡದ ಪರವಚಾಗಿ ಆಡುವ ನಿರ್ಧಾರವನ್ನು ಮಾಡಿದ್ದು ಹೊಸ ತಂಡದ ಜರ್ಸಿಯೊಂದಿಗೆ ಅನುಭವಿ ಸ್ಪಿನರ್ ಪಿಯೂಷ್ ಚಾವ್ಲಾ ಜೊತೆಗೆ ಸಾಥ್ ನೀಡಲಿದ್ದಾರೆ. ಈ ಬಗ್ಗೆ ಬಿಷ್ಣೋಯ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ರವಿ ಬಿಷ್ಣೋಯ್ ಫೊಟೊವೊಂದನ್ನು ಹಂಚಿಕೊಂಡಿದ್ದು ಈ ಮೂಲಕ ಗುಜರಾತ್ ತಂಡವನ್ನು ಸೇರ್ಪಡೆಯಾಗಿವ ಬಗ್ಗೆ ಘೋಷಣೆ ಮಾಡಿದ್ದಾರೆ. "ಹೊಸ ಆರಂಭ" ಎಂದು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ್ ಫೋಟೋವನ್ನು ಹಂಚಿಕೊಂಡಿದ್ದಾರೆ ಬಿಷ್ಣೋಯ್. ಈ ಫೋಟೋದಲ್ಲಿ ಅವರು ಗುಜರಾತ್ ತಂಡದ ಜರ್ಸಿಯನ್ನು ತೊಟ್ಟುಕೊಂಡಿದ್ದು ಗುಜರಾತ್ ಕ್ರಿಕೆಟ್ ಅಸೊಸಿಯೇಶನ್‌ಗೆ ಟ್ಯಾಗ್ ಮಾಡಿದ್ದಾರೆ.
ಗುಜರಾತ್ ತಂಡದ ಪ್ರಮುಖ ಆಟಗಾರನಾಗಿರುವ ಹಿರಿಯ ಸ್ಪಿನ್ನರ್ ಪಿಯೂಷ್ ಚಾವ್ಲಾ ಜೊತೆಗೆ ಬೌಲಿಂಗ್ ಹಂಚಿಕೊಳ್ಳುವ ಅವಕಾಶವನ್ನು ಈ ಮೂಲಕ ಬಿಷ್ಣೋಯ್ ಪಡೆಯಲಿದ್ದಾರೆ. ಈಗಾಗಲೇ ಟೀಮ್ ಇಂಡಿಯಾದ ಕ್ಯಾಪ್ ತೊಟ್ಟಿರುವ ಈ ಯುವ ಆಟಗಾರ 2022ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತದಲ್ಲಿ ನಡೆದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾಗೆ ಪ್ಆರ್ಪಣೆ ಮಾಡಿದ್ದು ಅದಾದ ಬಿಕ ತಂಡದಿಂದ ಹೊರಬಿದ್ದಿದ್ದಾರೆ.
ಇದೀಗ ರವಿ ಷಿಷ್ಣೋಯ್ ಮುಂಬರುವ ವೆಸ್ಟ್ ಇಂಡಿಸ್ ವಿರುದ್ಧದ ಟಿ20 ಸರಣಿ ತಂಡದಲ್ಲಿ ಸ್ಥಾನವ್ನು ಗಿಟ್ಟಿಸಿಕೊಳ್ಳಲಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿಗೆ ಟೀಮ್ ಇಂಡಿಯಾದ ಆಟಗಾರರ ಪಡೆಯನ್ನು ಬಿಸಿಸಿಐ ಈಗಾಗಲೇ ಘೋಷಣೆ ಮಾಡಿದೆ. ಆದರೆ ಚುಟುಕು ಮಾದರಿಗೆ ಮಾತ್ರ ಇನ್ನಷ್ಟೇ ತಂಡವನ್ನು ಪ್ರಕಟಿಸಬೇಕಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಹಾಗೂ ವಿಂಡೀಸ್ ತಂಡಗಳು ಮೊದಲಿಗೆ ಎರಡು ಪಂದ್ಯದ ಟೆಸ್ಟ್ ಸರಣಿ ಆಡಿದರೆ ಅದಾದ ಬಳಿಕ ಮೂರು ಪಂದ್ಯಗ ಏಕದಿ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ನಂತರ ಐದು ಒಂದ್ಯಗಳ ಟಿ20 ಸರಣಿ ಆಯೋಜನೆಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications