Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

1983ರ ವಿಶ್ವಕಪ್ ಜಯಭೇರಿ ಸಂಭ್ರಮ : ರವಿಶಾಸ್ತ್ರಿ ಯುವರಾಜ್ ಕುತೂಹಲಕಾರಿ ಸಂವಾದ

Ravi Shastri And Yuvraj Singh Engage In Twitter Banter

ಮೂವತ್ತೇಳು ವರ್ಷದ ಹಿಂದೆ ಇದೇ ದಿನ ಭಾರತೀಯ ಕ್ರಿಕೆಟ್ ವಿಶ್ವ ಕ್ರಿಕೆಟ್‌ನಲ್ಲಿ ಮಾಡಿದ ಅಭೂತಪೂರ್ವ ಸಾಧನೆ ವಿಶ್ವಕಪ್ ಗೆಲುವು. ಮೊದಲ ಬಾರಿಗೆ ವಿಶ್ವಕಪ್‌ಗೆ ಮುತ್ತಿಕ್ಕಿದ ಸಂಭ್ರಮದ ಕ್ಷಣವನ್ನು ಇಂದು ಮತ್ತೊಮ್ಮೆ ಸ್ಮರಿಸಿಕೊಳ್ಳುವ ಸಂದರ್ಭ. ಕ್ರಿಕೆಟ್ ಪ್ರೇಮಿಗಳು ಆಟಗಾರರು ಈ ಸಂಭ್ರಮದ ಕ್ಷಣಗಳನ್ನು ಅವರದ್ದೇ ರೀತಿಯಲ್ಲಿ ಸ್ಮರಿಸಿಕೊಳ್ಳುತ್ತಿದ್ದಾರೆ.

ಈ ಮಧ್ಯೆ ಟೀಮ್ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತು ರವಿ ಶಾಸ್ತ್ರಿ ನಡುವಿನ ಟ್ವಿಟ್ಟರ್ ಸಂವಾದ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಈ ಸಂವಾದಕ್ಕೆ ಪುಟ್ಟ ಹಿನ್ನೆಲೆಯೂ ಇದೆ. ಮೊದಲಿಗೆ ಅದೇನೆಂದು ತಿಳಿದುಕೊಳ್ಳೋಣ.

ಎರಡು ತಿಂಗಳ ಹಿಂದೆ...

ಎರಡು ತಿಂಗಳ ಹಿಂದೆ...

ಎರಡು ತಿಂಗಳ ಹಿಂದೆ ಭಾರತದ ಎರಡನೇ ವಿಶ್ವಕಪ್‌ ಗೆಲುವಿನ ಸಂಭ್ರಮಾಚರಣೆಯ ದಿನದಂದು ರವಿಶಾಸ್ತ್ರಿ ಅಂದಿನ ತಂಡದ ಆಟಗಾರರಿಗೆ ಶುಭಾಶಯವನ್ನು ಕೋರಿದ್ದರು. ಆ ಟ್ವೀಟ್‌ಗೆ ರವಿಶಾಸ್ತ್ರಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಯನ್ನು ಟ್ಯಾಗ್ ಮಾಡಿದ್ದರು. ಅದಕ್ಕೆ ಯುವರಾಜ್ ಸಿಂಗ್ ಧನ್ಯವಾದವನ್ನು ತಿಳಿಸುತ್ತಾ 'ನೀವು ನನ್ನನ್ನು ಮತ್ತು ಧೋನಿಯನ್ನೂ ಟ್ಯಾಗ್ ಮಾಡಬಹುದಿತ್ತು' ಎಂದು ಪ್ರತಿಕ್ರಿಯಿಸಿದ್ದರು.

ಶುಭಾಶಯ ಕೋರಿದ ಯುವರಾಜ್

ಶುಭಾಶಯ ಕೋರಿದ ಯುವರಾಜ್

ಗುರುವಾರ ಭಾರತದ ಕ್ರಿಕೆಟ್ ಅಭಿಮಾನಿಗಳು ಮೊದಲ ವಿಶ್ವಕಪ್ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದು ಈ ಸಂದರ್ಭದಲ್ಲಿ ಯುವರಾಜ್ ಸಿಂಗ್ ಟ್ವಿಟ್ಟರ್‌ನಲ್ಲಿ ಹಿರಿಯ ಆಟಗಾರರಿಗೆ ಶುಭಾಶಯವನ್ನು ಕೋರುತ್ತಾ ಟ್ವೀಟ್ ಮಾಡಿದ್ದರು.

ರವಿಶಾಸ್ತ್ರಿ ಪ್ರತಿಕ್ರಿಯೆ

ರವಿಶಾಸ್ತ್ರಿ ಪ್ರತಿಕ್ರಿಯೆ

ಆದರೆ ಈ ಟ್ವೀಟ್‌ಗೆ ಯಾವುದೇ ಹಿರಿಯ ಆಟಗಾರರನ್ನು ಯುವಿ ಟ್ಯಾಗ್ ಮಾಡಿರಲಿಲ್ಲ. ತಕ್ಷಣವೇ ಇದಕ್ಕೆ ಪ್ರತಿಕ್ರಿಯಿಸಿದ ರವಿ ಶಾಸ್ತ್ರಿ, ಧನ್ಯವಾದ ಜ್ಯೂನಿಯರ್, ನೀವು ನನ್ನನ್ನು ಮತ್ತು ಕಪಿಲ್ ದೇವ್ ಅವರನ್ನು ಟ್ಯಾಗ್ ಮಾಡಬಹುದಿತ್ತು ಎಂದು ಬರೆದುಕೊಂಡಿದ್ದಾರೆ.

ಹೊಗಳಿದ ಯುವರಾಜ್ ಸಿಂಗ್

ಇದಕ್ಕೆ ಮತ್ತೆ ಯುವರಾಜ್ ಸಿಂಗ್ ನಗುತ್ತಾ ಪ್ರತಿಕ್ರಿಯಿಸಿದ್ದಾರೆ. ನೀವು ಅಂಗಳದೊಳಗೆ ಮತ್ತು ಹೊರಗೆ ದಿಗ್ಗಜ. ಕಪಿಲ್ ಪಾಜಿ(ಕಪಿಲ್ ದೇವ್) ಎಲ್ಲವನ್ನೂ ಒಳಗೊಂಡ ವಿಭಿನ್ನ ವ್ಯಕ್ತಿತ್ವ ಹೊಂದಿದವರು ಎಂದು ಪ್ರತಿಕ್ರಿಯಿಸಿದ್ದಾರೆ. ಯುವರಾಜ್ ಸಿಂಗ್ ಮತ್ತು ರವಿ ಶಾಸ್ತ್ರಿ ನಡುವಿನ ಟ್ವೀಟ್ ಸಂವಾದ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿಸಿತ್ತು.

Story first published: Thursday, June 25, 2020, 22:35 [IST]
Other articles published on Jun 25, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+