Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಂ ಇಂಡಿಯಾ ಕೋಚ್ ಹುದ್ದೆಗೆ ರವಿಶಾಸ್ತ್ರಿ ಅರ್ಜಿ ಸಲ್ಲಿಕೆ

ಮುಂಬೈ, ಜುಲೈ 3: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಅವರು ತಂಡದ ಮುಖ್ಯ ಕೋಚ್ ಹುದ್ದೆಗೆ ಸೋಮವಾರ ಅರ್ಜಿ ಹಾಕಿದ್ದಾರೆ.

ಕಳೆದೊಂದು ವರ್ಷದಿಂದ ಕೋಚ್ ಹುದ್ದೆಯಲ್ಲಿದ್ದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಯವರಿಂದ ತೆರವಾಗಿರುವ ಸ್ಥಾನಕ್ಕೆ ಈಗ ರವಿಶಾಸ್ತ್ರಿ ಅರ್ಜಿ ಸಲ್ಲಿಸಿರುವುದು ಎಲ್ಲರಲ್ಲೂ ಸಹಜವಾಗಿಯೇ ಕುತೂಹಲ ಮೂಡಿಸಿದೆ.

Ravi Shastri applies for head coach role of Virat Kohli’s Team India

ಕೋಚ್ ಹುದ್ದೆಗೆ ಶಾಸ್ತ್ರಿ ಅರ್ಜಿ ಸಲ್ಲಿಸುವ ಇರಾದೆ ಹೊಂದಿದ್ದಾರೆಂದು ಈಗಾಗಲೇ ಕೆಲವಾರು ಮಾಧ್ಯಮಗಳು ವರದಿ ಮಾಡಿದ್ದವು. ಸೋಮವಾರ, ಆ ವರದಿಗಳು ನಿಜವಾಗಿವೆ.

2014ರಿಂದ 2016ರ ಅವಧಿಯಲ್ಲಿ ಶಾಸ್ತ್ರಿ, ಟೀಂ ಇಂಡಿಯಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ವಿರಾಟ್ ಕೊಹ್ಲಿಗೆ ಹೆಚ್ಚು ಆಪ್ತರಾಗಿರುವ ಕಾರಣದಿಂದ ಈ ಬಾರಿ ಕೋಚ್ ಹುದ್ದೆಯ ಆಯ್ಕೆಯಲ್ಲಿ ಉಂಟಾಗಿರುವ ತುರುಸಿನ ಸ್ಪರ್ಧೆಯಲ್ಲಿ ಮಿಕ್ಕೆಲ್ಲಾ ಅಭ್ಯರ್ಥಿಗಳಿಂದ ಮಂಚೂಣಿಯಲ್ಲಿದ್ದಾರೆಂದು ಹೇಳಲಾಗಿದೆ.

ಕೋಚ್ ಹುದ್ದೆಗೆ ಈಗಾಗಲೇ ಮಾಜಿ ಕ್ರಿಕೆಟಿಗರಾದ ಭಾರತದ ವೀರೇಂದ್ರ ಸೆಹ್ವಾಗ್, ಲಾಲ್ ಚಂದ್ ರಜಪೂತ್, ಕರ್ನಾಟಕದ ದೊಡ್ಡ ಗಣೇಶ್, ಆಸ್ಟ್ರೇಲಿಯಾದ ಟಾಮ್ ಮೂಡಿ, ಇಂಗ್ಲೆಂಡ್ ನ ರಿಚರ್ಡ್ ಪೈಬಸ್ ಹಾಗೂ ವೆಸ್ಟ್ ಇಂಡೀಸ್ ನ ಫಿಲ್ ಸೈಮನ್ಸ್ ಅರ್ಜಿ ಸಲ್ಲಿಸಿರುವುದರಿಂದ ಸ್ಪರ್ಧೆ ಜೋರಾಗಿಯೇ ಇದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+