ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರನೇ ಏಕದಿನ ಪಂದ್ಯ ಶನಿವಾರ ನಡೆಯಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗ ವಿರಾಟ್ ಕೊಹ್ಲಿ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇನ್ನು ಟೀಮ್ ಇಂಡಿಯಾದ ಈ ಇಬ್ಬರೂ ಆಟಗಾರರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಆಡುವ ಕನಸು ಹೊಂದಿದ್ದಾರೆ. ಈ ಬಗ್ಗೆ ಹಲವರು ಚರ್ಚೆಗಳ ಆರಂಭಿಸಿವೆ. ಇನ್ನು ಈ ಬಗ್ಗೆ ರವಿ ಶಾಸ್ತ್ರಿ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸ್ಥಾನದ ಮೇಲೆ ಎದಿದ್ದ ಪ್ರಶ್ನೆಗಳಿಗೆ ಮಾಜಿ ಭಾರತ ತಂಡದ ಕೋಚ್ ರವಿ ಶಾಸ್ತ್ರಿ ಉತ್ತರ ನೀಡಿದ್ದಾರೆ. ಈ ಸ್ಟಾರ್ ಆಟಗಾರರನ್ನು ಕಡೆಗಣಿಸಬಾರದು ಎಂದು ಮಾಜಿ ಕೋಚ ಹೇಳದ್ದಾರೆ. 2027ರ ವಿಶ್ವಕಪ್‌ಗೆ ಭಾರತ ತಂಡದ ಕಾರ್ಯತಂತ್ರದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ರವಿ ಶಾಸ್ತ್ರಿ ಉತ್ತರ ನೀಡಿದ್ದಾರೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಅನುಭವವನ್ನು ಹಗುರವಾಗಿ ಪರಿಗಣಿಸುವಂತಲ್ಲ. ಏಕದಿನ ಫಾರ್ಮೆಟ್‌ನಲ್ಲಿ ಇವರಿಬ್ಬರೂ ದಿಗ್ಗಜರು. ಈ ಆಟಗಾರರ ವಿರುದ್ಧ ತಾರತಮ್ಯ ಮಾಡಬಾರದು ಎಂದಿದ್ದಾರೆ. ಇನ್ನು ಈ ಪ್ರಶ್ನೆಗಳನ್ನು ಯಾರು ಎತ್ತುತ್ತಿದ್ದಾರೆ ಎಂದು ಕೇಳಿದಾಗ ಯಾರನ್ನೂ ಹೆಸರಿಸದೆ ಶಾಸ್ತ್ರಿ, ಕೆಲವರು ಈ ರೀತಿ ಮಾಡುತ್ತಿದ್ದಾರೆ. ಈ ಇಬ್ಬರೂ ಆಟಗಾರರು ಸಂಪೂರ್ಣ ಫಿಟ್ ಆಗಿದ್ದು, ಲಯದಲ್ಲಿದ್ದರೆ ಪ್ರಶ್ನೆ ಕೇಳಿದಾಗ ಸುಮ್ಮನಾಗುತ್ತಾರೆ ಎಂದು ಹೇಳಿದ್ದಾರೆ.
ರವಿ ಶಾಸ್ತ್ರಿ ಹೀಗೆ ಮಾತು ಮುಂದುವರೆಸಿ " ಇಂತಹ ಆಟಗಾರರಿಗೆ ತಮಾಷೆ ಮಾಡಬೇಡಿ ಎಂದರು. ವಿರಾಟ್, ರೋಹಿತ್ ಅವರ ಫಾರ್ಮ್ ಬಗ್ಗೆ ಪ್ರಶ್ನೆಗಳನ್ನು ಕೇಳುವುದು ಯಾರು ಎಂದು ಮತ್ತೆ ಕೇಳದಾಗ, ಪ್ರಶ್ನೆಗಳು ಪ್ರಶ್ನೆಗಳನ್ನು ಮಾಡುತ್ತಲೇ ಇರುತ್ತಾರೆ ಎಂದು ಶಾಸ್ತ್ರಿ ತಿಳಿಸಿದ್ದಾರೆ.
ಭಾರತ ತಂಡದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸದ್ಯ ಅಮೋಘ ಫಾರ್ಮ್‌ನಲ್ಲಿದ್ದಾರೆ. ರೋಹಿತ್ ಶರ್ಮಾ ಆಸ್ಟ್ರೇಲಿಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇನ್ನು ಭಾರತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೂ ರೋಹಿತ್ ಶರ್ಮಾ ಅರ್ಧಶತಕ ಬಾರಿಸಿ ಮಿಂಚಿದ್ದರು. ಆದರೆ ರಾಯ್ಪುರದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಇನ್ನು ಸಿಡ್ನಿ ಆಸ್ಟ್ರೇಲಿಯಾದಲ್ಲಿ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಸೊನ್ನೆ ಸುತ್ತಿದ್ದರೆ, ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ರಾಂಚಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹಾಗೂ ರಾಯ್ಪುರದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕ್ಲಾಸಿಕ್ ಪ್ರದರ್ಶನ ನೀಡಿ ಶತಕ ಬಾರಿಸಿದರು. ಈ ಮೂಲಕ 11ನೇ ಬಾರಿಗೆ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದರು. ಈ ಮೂಲಕ ತಮ್ಮಲ್ಲಿ ಇನ್ನು ಬ್ಯಾಟಿಂಗ್ ಕ್ಷಮತೆ ಇದೆ ಎಂಬುದನ್ನು ಸಾಬೀತು ಪಡಿಸಿದರು.