Mohammed Shami: ಶಮಿ ಗಾಯದ ಬಗ್ಗೆ ರವಿ ಶಾಸ್ತ್ರ ಪ್ರಶ್ನೆ? ಕೊನೆಯ ಎರಡು ಟೆಸ್ಟ್‌ಗೆ ಅವಕಾಶ ಸಿಗಬೇಕಿತ್ತು?
ಭಾರತ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಿರಾಸೆ ಅನುಭವಿಸಿದೆ. ಕಳೆದ ಎರಡು ಪ್ರವಾಸದ ವೇಳೆ ಆರ್ಭಟ ನಡೆಸಿದ್ದ ಟೀಮ್ ಇಂಡಿಯಾ ಪ್ಲೇಯರ್ಸ್ ಈಗ ಸೋಲನ್ನು ಅಪ್ಪಿಕೊಂಡಿದ್ದಾರೆ. ಆಸೀಸ್ ಪಡೆಯ ರಣತಂತ್ರದ ಮುಂದೆ ಪ್ರವಾಸಿ ತಂಡದ ಆಟಗಾರರು ಮಂಡಿಯೂರಿದ್ದಾರೆ. ಈ ವೇಳೆ ಸ್ಟಾರ್ ಆಟಗಾರರ ಕಳಪೆ ಫಾರ್ಮ್ ಟೀಕೆಗೆ ಗುರಿಯಾಗಿದೆ. ಇನ್ನು ಟೀಮ್ ಇಂಡಿಯಾದ ಸ್ವಿಂಗ್ ಬೌಲರ್ ಮೊಹಮ್ಮದ್ ಶಮಿ ಅವರನ್ನು ತಂಡಕ್ಕೆ ಏಕೆ ಸೇರಿಸಿರಲಿಲ್ಲ ಎಂಬ ಪ್ರಶ್ನೆಗಳು ಸಹ ಮೂಡುತ್ತಿವೆ.
ಟೀಮ್ ಇಂಡಿಯಾದ ಸ್ವಿಂಗ್ ವೇಗಿ ಮೊಹಮ್ಮದ್ ಶಮಿಯನ್ನು ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡವನ್ನು ಸೇರಿಕೊಳ್ಳದ್ದರ ಬಗ್ಗೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಮೊಹಮ್ಮದ್ ಶಮಿ ನಿಶ್ಚಿತವಾಗಿಯೂ ಕೊನೆಯ ಎರಡು ಟೆಸ್ಟ್‌ಗಳನ್ನು ಆಡಬಹುದಿತ್ತು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಶಮಿ ಅವರನ್ನು ಏಕೆ ಆಯ್ಕೆ ಮಾಡಿಲ್ಲ?
ಶಮಿ ಅವರನ್ನು ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ತಂಡದಲ್ಲಿ ಸೇರಿಸಿಕೊಳ್ಳ ಬಹುದಿತ್ತಾಲ್ಲಾ ಎಂದು ಕೇಳಲಾದ ಪ್ರಶ್ನೆಗೆ? ಉತ್ತರಿಸಿದಿ ರವಿ ಶಾಸ್ತ್ರಿ, ಅವರನ್ನು ಕೈ ಬಿಟ್ಟಿದ್ದು ಏಕೆ ಎಂಬುದೇ ನನಗೆ ತಿಳಿಯದು. ಶಮಿ ಆರೋಗ್ಯದ ಬಗ್ಗೆ ಯಾವುದೆ ಅಪ್‌ಡೇಟ್ ಸಿಗಲಿಲ್ಲ. ಅವರಿಗೆ ಏನಾಗಿದೆ ಎಂದು ಅರ್ಥವೇ ಆಗುತ್ತಿಲ್ಲ. ಎನ್‌ಸಿಎದಲ್ಲಿ ಅವರು ಎಷ್ಟು ದಿನ ಟೈಮ್ ಸ್ಪೆಂಡ್ ಮಾಡಿದ್ದಾರೆ ತಿಳಿದಿಲ್ಲ. ಅವರಲ್ಲಿನ ಸಾಮರ್ಥ್ಯವನ್ನು ಕಂಡು ಖಂಡಿತವಾಗಿಯೂ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಕರೆದುಕೊಂಡು ಬರುತ್ತಿದ್ದೆ ಎಂದು ಶಾಸ್ತ್ರಿ ತಿಳಿಸಿದ್ದಾರೆ.
ಶಮಿ ಅವರನ್ನು ನಾನು ಖಂಡಿತವಾಗಿಯೂ ತಂಡದಲ್ಲಿ ಆಯ್ಕೆ ಮಾಡುತ್ತಿದೆ. ಅಲ್ಲದೆ ತಂಡದೊಂದಿಗೆ ಪ್ರಯಾಣಿಸಿ ಚೇತರಿಸಿಕೊಳ್ಳವ ಅವಕಾಶವನ್ನು ನೀಡುತ್ತಿದ್ದೆ. ಇನ್ನು ಅವರು ಮೂರು ಟೆಸ್ಟ್‌ಗಳ ಬಳಿಕವೂ ಅವರು ಫಿಟ್ ಇಲ್ಲ ಎಂದು ನನಗೆ ತೋರಿದ್ದರೆ ನಿಶ್ಚಿತವಾಗಿಯೂ ಅವರನ್ನು ತಂಡದಿಂದ ಕೈ ಬಿಡುತ್ತಿದ್ದೆ. ಅವರು ತಂಡದೊಂದಿಗೆ ಬಂದಿದ್ದರೆ ಅವರಿಗೆ ನಾನು ಉತ್ತಮ ಫಿಸಿಯೋರನ್ನು ನೇಮಿಸಿ ಮೇಲ್ವಿಚಾರಣೆ ನಡೆಸುತ್ತಿದ್ದೆ. ಇವರ ಚೇತರಿಕೆಗೆ ಆಸ್ಟ್ರೇಲಿಯಾದಲ್ಲಿ ನೆಲಿಸಿದ್ದ ಫಿಸಿಯೋ ಸಹಾಯವನ್ನು ಸಹ ಪಡೆಯುತ್ತಿದ್ದೆ ಎಂದು ತಿಳಿಸಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಪೇಸ್ ಬೌಲರ್ ಮೊಹಮ್ಮದ್ ಶಮಿ ಕೊನೆಯ ಬಾರಿಗೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಅಂಗಳಕ್ಕೆ ಇಳಿದಿದ್ದರು. ಆ ಮೇಲೆ ಅವರು ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಪಾದದ ಗಾಯಕ್ಕೆ ತುತ್ತಾಗಿದ್ದರು. ಅಲ್ಲದೆ ಶಸ್ತ್ರ ಚಿಕಿತ್ಸೆಗೆ ಸಹ ಅವರು ಒಳಪಟ್ಟಿದ್ದರು. ಬಳಿಕ ಚೇತರಿಕಂಡು ನೆಟ್ಸ್‌ನಲ್ಲಿ ಅಭ್ಯಾಸ ಮಾಡಲು ಆರಂಭಿಸಿದರು. ಬಳಿಕ ದೇಶೀಯ ಟೂರ್ನಿಗಳಲ್ಲಿ ಬಗಾಳ ತಂಡದ ಪರ ಆಡಿದರು. ಮೊದಲು ರಣಜಿ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಶಮಿ, ನಂತರ ಸೈಯದ್ ಮುಷ್ತಾಕ್ ಅಲಿ ಹಾಗೂ ವಿಜಯ್ ಹಜಾರೆ ಏಕದಿನ ಸರಣಿಯಲ್ಲೂ ಸ್ಥಿರ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications