ರವಿಶಾಸ್ತ್ರಿ ಸಂಭಾವನೆ ಎಲ್ಲರಿಗಿಂತ ಜಾಸ್ತಿಯಾಗಿದೆ ಏಕೆ?
ಬೆಂಗಳೂರು, ಅಕ್ಟೋಬರ್ 20: ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಅವರಿಗೆ ಸಿಗುತ್ತಿರುವ ಸಂಭಾವನೆ ಮೊತ್ತವನ್ನು ಇಎಸ್ ಪಿಎನ್ ಕ್ರಿಕ್ ಇನ್ಫೋ ಬಹಿರಂಗ ಪಡಿಸಿದೆ. ಬಿಸಿಸಿಐ ಕೂಡ ಆಗಾಗ ಕೋಚ್, ಆಟಗಾರರ ಸಂಬಳ, ಸಂಭಾವನೆ ವಿವರಗಳನ್ನು ಪ್ರಕಟಿಸುತ್ತಿದೆ.
ಈಗ ರವಿಶಾಸ್ತ್ರಿ ಸಂಭಾವನೆ ವರ್ಷಕ್ಕೆ 1.17 ಮಿಲಿಯನ್ ಡಾಲರ್ ಅಂದ್ರೆ ಇಂಡಿಯನ್ ಕರೆನ್ಸಿಯಲ್ಲಿ ವಾರ್ಷಿಕ ಸುಮಾರು 7, 61, 45, 355 ರೂ ನಷ್ಟಾಗುತ್ತದೆ. ಕ್ರಿಕೆಟ್ ಕೋಚ್‌ಗಳ ಸಂಭಾವನೆಗೆ ಹೋಲಿಸಿದರೆ ರವಿ ಶಾಸ್ತ್ರಿ ಅವರಿಗೆ ಸಿಗುತ್ತಿರುವ ಸಂಭಾವನೆ ಅಧಿಕವಾಗಿದೆ.
ಈ ಮೂಲಕ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ಕ್ರಿಕೆಟ್ ಕೋಚ್ ಎನಿಸಿಕೊಂಡಿದ್ದಾರೆ ಎಂದು ಇಎಸ್‌ಪಿನ್ ಕ್ರಿಕ್ ಇನ್ಫೋ ವರದಿ ಮಾಡಿದೆ.
ಬಿಸಿಸಿಐ- ಆಟಗಾರರ ನಡುವಿನ ಸಂಬಳ, ಸಂಭಾವನೆ ಒಪ್ಪಂದ ಕುರಿತಂತೆ ತಗಾದೆ ತೆಗೆದು, ಗುತ್ತಿಗೆ ಪುನರ್ ರಚನೆ ಕುರಿತಂತೆ ಈ ಹಿಂದಿನ ಕೋಚ್ ಅನಿಲ್ ಕುಂಬ್ಳೆ ಅವರು ಸಲ್ಲಿಸಿದ್ದ ಬೇಡಿಕೆಗೆ ಈಗ ಬೆಲೆ ಬಂದಿದೆ. ಕುಂಬ್ಳೆ ಅವರು ಕೋಚ್ ಹುದ್ದೆಗೆ ಕನಿಷ್ಠ 8 ಕೋಟಿ ರು ವಾರ್ಷಿಕ ಸಂಭಾವನೆ ಸಿಗಬೇಕು ಎಂದು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ರವಿಶಾಸ್ತ್ರಿಗೆ ಅತಿ ಹೆಚ್ಚಿನ ಸಂಭಾವನೆ
ಆಸ್ಟ್ರೇಲಿಯಾ ಕೋಚ್ ಡರೇನ್ ಲಿಮನ್ 0.55 ಮಿಲಿಯನ್ ಡಾಲರ್ (3.55 ಕೋಟಿ ರು), ಇಂಗ್ಲೆಂಡ್ ಕೋಚ್ ಟ್ರೆವರ್ ಬೆಲಿಸ್ 0.52 ಮಿಲಿಯನ್ ಡಾಲರ್(3.4 ಕೋಟಿ ರು) ಸಂಭಾವನೆ ಪಡೆಯುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಕೋಚ್ ರಸೆಲ್ ಡೊಮಿಗೋ ಅವರಿಗೆ 58.5 ಲಕ್ಷ ರು ಮಾತ್ರ ಸಿಗುತ್ತಿದೆ.

ಅನಿಲ್ ಕುಂಬ್ಳೆ ಬೇಡಿಕೆ ಈಡೇರಿದೆ
* ನಾಯಕನಿಗೆ ಸಿಗುವ ಸಂಬಳದ ಶೇ 60ರಷ್ಟು, ಅಂದಿನ ಲೆಕ್ಕದಂತೆ 6.5 ಕೋಟಿ ರು ನಿಂದ 7.5 ಕೋಟಿ ರುಗೆ ಏರಿಕೆ ಯಾಗಬೇಕು.
* ಶೇ 30ರಷ್ಟು ಸಂಬಳ, ತಂಡದ ಫಲಿತಾಂಶದ ಮೇಲೆ ವೇರಿಯಬಲ್ ಬೋನಸ್ ಸಿಗಬೇಕು.
* ನಾಯಕನಿಗೆ ಕೂಡಾ ಉತ್ತಮ ಫಲಿತಾಂಶ ನೀಡಿದರೆ ಮಾತ್ರ ಬೋನಸ್ ಗೆ ಅರ್ಹ ಎಂದು ಕುಂಬ್ಳೆ ತಮ್ಮ ಬೇಡಿಕೆ ಪಟ್ಟಿ ಸಲ್ಲಿಸಿದ್ದ್ರು. ಈ ಪೈಕಿ ಕೋಚ್ ಸಂಭಾವನೆ ಬೇಡಿಕೆ ಈಡೇರಿದೆ. ಇದರ ಲಾಭ ರವಿಶಾಸ್ತ್ರಿಗೆ ಸಿಕ್ಕಿದೆ.

ಕೊಹ್ಲಿಗಿಂತ ಕುಂಬ್ಳೆಗೆ ಹೆಚ್ಚು ಸಂಬಳ
ಕೊಹ್ಲಿ ವರ್ಷಕ್ಕೆ ಒಂದು ಮಿಲಿಯನ್ ಡಾಲರ್ ಅಂದರೆ 6, 50, 81, 500 ರೂ ಸಂಭಾವನೆ ಪಡೆಯುತ್ತಾರೆ. ಬಿಸಿಸಿಐನ 'ಎ' ಶ್ರೇಣಿ ಗುತ್ತಿಗೆಯನ್ನು ಹೊಂದಿದ್ದಾರೆ. ಆದರೆ, ಕೊಹ್ಲಿಗಿಂತ ರವಿಶಾಸ್ತ್ರಿಗೆ ಸಿಗುವ ಸಂಭಾವನೆ ಅಧಿಕವಾಗಿದೆ. ಆದರೆ, ಬಿಸಿಸಿಐ ಆದಾಯದ ಶೇ13ರಷ್ಟು ಪಾಲು ಕೊಹ್ಲಿಗೆ ಲಭಿಸಲಿದೆ. ನಾಯಕರ ಪೈಕಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರು ವಾರ್ಷಿಕ 9.6 ಕೋಟಿ ರು ಪಡೆಯುತ್ತಿದ್ದು ಅಗ್ರಸ್ಥಾನದಲ್ಲಿದ್ದಾರೆ.

ಆಟಗಾರರಿಗಿಂತಲೂ ಹೆಚ್ಚು ಸಂಭಾವನೆ
ಆಟಗಾರರಿಗಿಂತಲೂ ಅತ್ಯಧಿಕ ಸಂಭಾವನೆ ಗಳಿಸುವ ಕೋಚ್ ಗಳ ಪೈಕಿ ರವಿಶಾಸ್ತ್ರಿ ಮುಂದಿದ್ದಾರೆ. ಪಾಕಿಸ್ತಾನದ ಮಿಕಿ ಅರ್ಥರ್‌ಗೆ ಪಾಕಿಸ್ತಾನ ಟಾಪ್ ಕ್ರಿಕೆಟರ್ ಗಿಂತ ಮೂರು ಪಟ್ಟು ಹೆಚ್ಚು ಸಂಭಾವನೆ ಸಿಗುತ್ತಿದೆ. ಬಾಂಗ್ಲಾದೇಶದ ಕೋಚ್ ಚಂಡಿಕಾ ಹತುರ್‌ಸಿಂಗಾಗೆ ಆಟಗಾರರಿಗಿಂತ 5 ಪಟ್ಟು ಹೆಚ್ಚು ಸಂಭಾವನೆ ಸಿಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications