ನಿಮ್ರತ್ ಕೌರ್ ಜೊತೆಗಿನ ಡೇಟಿಂಗ್ ವದಂತಿಗೆ ಸೆಗಣಿ ಸಾರಿಸಿದ ರವಿ ಶಾಸ್ತ್ರಿ!

ನವದೆಹಲಿ, ಸೆಪ್ಟೆಂಬರ್ 4: ಬಾಲಿವುಡ್ ನಟಿ ನಿಮ್ರತ್ ಕೌರ್ ಜೊತೆಗಿನ ಡೇಟಿಂಗ್ ವಿಚಾರವನ್ನು ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ತಳ್ಳಿ ಹಾಕಿದ್ದಾರೆ. ನಾವಿಬ್ಬರೂ ಡೇಟಿಂಗ್ ಮಾಡುತ್ತಿದ್ದೇವೆ ಎಂದು ಹೇಳಲಾಗುತ್ತಿದೆ. ಈ ವದಂತಿ ದೊಡ್ಡ ಸೆಗಣಿ ರಾಶಿಯಷ್ಟೆ ಎಂದಿದ್ದಾರೆ.
56ರ ಹರೆಯದ ರವಿ ಶಾಸ್ತ್ರಿ ಮತ್ತು 36ರ ಹರೆಯದ ನಟಿ ನಿಮ್ರತ್ ಕೌರ್ ಡೇಟಿಂಗ್ ನಲ್ಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿತ್ತು. ಅಕ್ಷಯ್ ಕುಮಾರ್ ಅಭಿನಯದ ಏರ್ ಲಿಫ್ಟ್ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಮಿಂಚಿದ್ದ ನಿಮ್ರತ್ ಅವರು ಶಾಸ್ತ್ರಿ ಜೊತೆ ಅಫೇರ್ ಹೊಂದಿದ್ದಾರೆ ಎನ್ನಲಾಗಿತ್ತು.
ಇತ್ತ ಟೀಮ್ ಇಂಡಿಯಾ ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 3-1ರಿಂದ ಸೋತ ಬಳಿಕ ಕ್ರಿಕೆಟ್ ಅಭಿಮಾನಿಗಳ ಸಹಿತ ಬಿಸಿಸಿಐ ಕೆಂಗಣ್ಣಿಗೆ ಕೋಚ್ ಶಾಸ್ತ್ರಿ ಗುರಿಯಾಗಿದ್ದರು. ಈ ನಡುವಲ್ಲೇ ಇಬ್ಬರ ಡೇಟಿಂಗ್ ವಿಚಾರ ಇನ್ನಷ್ಟು ಕಾವೇರಿದೆ.

ವದಂತಿ ಕಿಡಿ ಹತ್ತಿದ್ದು
ಮೊದಲು ಮುಂಬೈ ಮಿರರ್, ರವಿ ಶಾಸ್ತ್ರಿ ಮತ್ತು ನಿಮ್ರತ್ ಕೌರ್ ಗೆ ನಂಟಿರುವ ಬಗ್ಗೆ ವರದಿ ಪ್ರಕಟಿಸಿತ್ತು. ದಶಕಗಳ ಹಿಂದೆ ಪತ್ನಿ ರೀತು ಅವರಿಂದ ದೂರವಿದ್ದ ರವಿ ಶಾಸ್ತ್ರಿ ಮೋಹಕ ನಟಿ ನಿಮ್ರತ್ ಜೊತೆ ಕಳೆದೆರಡು ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ ಎಂದು ವರದಿಯಲ್ಲಿ ಹೇಳಿತ್ತು.

ಗಾಳಿ ಸುದ್ದಿಗೆ ಪುಷ್ಟಿ
ಶಾಸ್ತ್ರಿ-ಕೌರ್ ಸಂಬಂಧ ಹೊಂದಿದ್ದಾರೆ ಎಂಬ ಸುದ್ದಿಗೆ ಪುಷ್ಟಿ ಬಂದಿದ್ದು ಈ ವದಂತಿಯ ಜೋಡಿ ಜೊತೆಯಲ್ಲೇ ಕಾಣಿಸಿಕೊಂಡಾಗ. ಕಳೆದ ವರ್ಷ ದೆಹಲಿಯಲ್ಲಿ ಜರ್ಮನ್ ಕಾರ್ ಒಂದರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಇಬ್ಬರೂ ಸಾರ್ವಜನಿಕವಾಗಿ ಕಣ್ಣಿಗೆ ಬಿದ್ದಿದ್ದರು. ಅಲ್ಲಿಂದ ಶುರುವಾಯ್ತು ನೋಡಿ..

ಬಾಯ್ಬಿಟ್ಟ ಶಾಸ್ತ್ರಿ
ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ಬಗ್ಗೆಯೂ ಭರ್ಜರಿ ಗುಸುಗುಸು ಹಬ್ಬುತ್ತಿದ್ದಂತೆ ರವಿ ಶಾಸ್ತ್ರಿ ಬಾಯ್ಬಿಟ್ಟಿದ್ದಾರೆ. 'ನಮ್ಮಿಬ್ಬರ ಬಗೆಗಿನ ವದಂತಿ ಅದೊಂದು ದೊಡ್ಡ ಸೆಗಣಿಯ ರಾಶಿಯಷ್ಟೆ. ಸೆಗಣಿ ರಾಶಿಯ ಬಗ್ಗೆ ಮಾತಾಡುವುದಕ್ಕೇನಿಲ್ಲ' ಎಂದರು. ಮತ್ತೂ ವರದಿಗಾರರು ಕೆದಕೋ ಪ್ರಯತ್ನ ಮಾಡಿದಾಗ, 'ಹೇಳಿದೆನಲ್ಲ? ಅದು ಸೆಗಣಿ ರಾಶಿ ಅಂದಾಗಲೇ ನೀವದನ್ನು ಅರ್ಥ ಮಾಡಿಕೊಳ್ಳಬೇಕು' ಎಂದು ಪ್ರತಿಕ್ರಿಯಿಸಿದರು.

ಸಿನಿಮಾ ಧಾಟಿಯಲ್ಲೇ ನಿಮ್ರತ್ ಉತ್ತರ
ಇವತ್ತು ನಾನೇನು ಓದುತ್ತಿದ್ದೇನೋ ಅವೆಲ್ಲ ಕಾಲ್ಪನಿಕ. ಕಾಲ್ಪನಿಕ ಸಂಗತಿಗಳು ಹೆಚ್ಚು ನೋವು ತರುವಂತವಾಗಿರುತ್ತವೆ. ವಾಸ್ತವದಲ್ಲಿ ಅಂಥದ್ದೇನಿರುವುದಿಲ್ಲ. ನನಗೀಗ ಖುಷಿಯ ದಿನಗಳು ಬೇಕಿವೆ. ಇಲ್ಲದ್ದಕ್ಕೆಲ್ಲಾ ತಲೆಕೆಡಿಸಿಕೊಳ್ಳಲಾರೆ ಎಂಬರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications