ಅನಿಲ್ ಕುಂಬ್ಳೆಗೆ ನಿರಾಕರಿಸಿದ ವೇತನ ರವಿಶಾಸ್ತ್ರಿಗೆ?
ನವದೆಹಲಿ, ಜುಲೈ 16 : ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವ ರವಿಶಾಸ್ತ್ರಿ ಅವರು ವಾರ್ಷಿಕ 7 ರಿಂದ 7.5 ಕೋಟಿ ರು. ಸಂಭಾವನೆಯನ್ನು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ರವಿಶಾಸ್ತ್ರಿ ಅವರಿಗೆ ವಾರ್ಷಿಕವಾಗಿ 7 ಕೋಟಿ ರು. ಅಧಿಕ ಸಂಭಾವನೆಯನ್ನು ನೀಡುವ ಭರವಸೆ ನೀಡಿದೆ. ಈ ಹಿಂದೆ ಅನಿಲ್ ಕುಂಬ್ಳೆ ಅವರು ಕೋಚ್ ಆಗಿದ್ದಾಗ ಮೇ ತಿಂಗಳಲ್ಲಿ 7.5 ಕೋಟಿ ರು. ನೀಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದರು. ಬಿಸಿಸಿಐ ಅಷ್ಟೊಂದು ಸಂಭಾವನೆ ಕೊಡಲು ಆಗುವುದಿಲ್ಲವೆಂದು ಖಡಕ್ ಆಗಿ ಹೇಳಿತ್ತು.

ರವಿಶಾಸ್ತ್ರಿ ಅವರು ವೀಕ್ಷಕ ವಿವರಣೆ ಮತ್ತು ಕ್ರಿಕೆಟ್ ವಿಶ್ಲೇಷಕ ಜವಬ್ದಾರಿಗಳನ್ನು ಬಿಟ್ಟು ಕೋಚ್ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಈ ಕಾರಣದಿಂದಾಗಿ ಸಹಜವಾಗಿ ಅವರಿಗೆ ವಾರ್ಷಿಕವಾಗಿ ಗರಿಷ್ಠ 7.5 ಕೋಟಿ ರು. ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹಿಂದೆ ಭಾರತ ಕ್ರಿಕೆಟ್ ತಂಡದ ನಿರ್ದೇಶಕರಾಗಿದ್ದಾಗ ರವಿಶಾಸ್ತ್ರಿ ಅವರು ವಾರ್ಷಿಕವಾಗಿ 7 ರಿಂದ 7.5 ಕೋಟಿ ರು. ವರೆಗೆ ಸಂಭಾವನೆ ಪಡೆದಿಕೊಂಡಿದ್ದರು.
ಇನ್ನು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಕೋಚ್ ಗಳಿಗೆ ವಾರ್ಷಿಕ 2 ಕೋಟಿ ಸಂಭಾವನೆ ದೊರೆಯುವ ಸಾಧ್ಯತೆ ಇದ್ದು, ಟೀಂ ಇಂಡಿಯಾದ ಎಲ್ಲಾ ವಿಭಾಗಗಳ ಕೋಚ್ ಗಳ ಒಪ್ಪಂದ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಪೂರ್ಣ ಮಾಹಿತಿ ದೊರೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications