Champions Trophy: ಫೈನಲ್‌ನಲ್ಲಿ ಭಾರತದ ಮ್ಯಾಚ್ ವಿನ್ನರ್ ಹೆಸರಿಸಿದ ರವಿಶಾಸ್ತ್ರಿ
ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಭಾರತ ತಂಡ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಿತು. ಎಲ್ಲಾ ಪಂದ್ಯಗಳಲ್ಲಿ ಗೆದ್ದ ನಂತರ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಫೈನಲ್ ತಲುಪಿತು. ಟೀಮ್ ಇಂಡಿಯಾ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಲೀಗ್ ಹಂತದಲ್ಲಿ ಭಾರತ 44 ರನ್‌ಗಳಿಂದ ಸೋಲಿಸಿದ ನ್ಯೂಜಿಲೆಂಡ್ ತಂಡ ಗ್ರೂಪ್ ಎ ನಲ್ಲಿ ಎರಡನೇ ಸ್ಥಾನ ಪಡೆಯಿತು. ಲಾಹೋರ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಫೈನಲ್‌ಗೆ ಎಂಟ್ರಿ ಕೊಟ್ಟಿದೆ.
ಭಾನುವಾರ ಮಾರ್ಚ್ 9 ರಂದು ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ತಂಡವೇ ಫೇವರಿಟ್ ಎಂದು ಮಾಜಿ ಹೆಡ್‌ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಆದರೆ ನ್ಯೂಜಿಲೆಂಡ್ ಕೂಡ ಬಲಿಷ್ಠ ತಂಡವಾಗಿರುವುದರಿಂದ ಈ ಗೆಲುವು ಸುಲಭವಾಗಿಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ರವಿಶಾಸ್ತ್ರಿ, 'ಯಾವುದೇ ತಂಡ ಭಾರತವನ್ನು ಸೋಲಿಸಲು ಸಾಧ್ಯವಾದರೆ ಅದು ನ್ಯೂಜಿಲೆಂಡ್ ಮಾತ್ರ. ಭಾರತ ಪ್ರಬಲ ಸ್ಪರ್ಧಿಯಾಗಿದ್ದರೂ ಪ್ರಶಸ್ತಿ ಗೆಲ್ಲುವುದು ಸುಲಭವಾಗಿಲ್ಲ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ 'ಮ್ಯಾನ್ ಆಫ್ ಮ್ಯಾಚ್' ಆಲ್‌ರೌಂಡರ್ ಆಗಿರುತ್ತಾರೆ. ಭಾರತ ತಂಡದ ಪರ 'ಮ್ಯಾನ್ ಆಫ್ ಮ್ಯಾಚ್' ಅಕ್ಸರ್ ಪಟೇಲ್ ಅಥವಾ ರವೀಂದ್ರ ಜಡೇಜಾ ಆಗಬಹುದು. ನ್ಯೂಜಿಲೆಂಡ್ ಕಡೆ ಗ್ಲೆನ್ ಫಿಲಿಪ್ಸ್ ಕೂಡ ಆಗಬಹುದು ರವಿಶಾಸ್ತ್ರಿ ಹೇಳಿದ್ದಾರೆ.
ಫೈನಲ್ ಪಂದ್ಯದ ಗತಿಯನ್ನು ಬದಲಾಯಿಸಬಲ್ಲ ನಾಲ್ವರು ನ್ಯೂಜಿಲೆಂಡ್ ಆಟಗಾರರ ಬಗ್ಗೆ ಕೂಡ ರವಿಶಾಸ್ತ್ರಿ ಪ್ರಸ್ತಾಪಿಸಿದ್ದಾರೆ. ರಚಿನ್ ರವೀಂದ್ರ ಅವರನ್ನು 'ಪ್ರತಿಭಾನ್ವಿತ' ಆಟಗಾರ ಎಂದು ಬಣ್ಣಿಸಿದ್ದಾರೆ. ಆದರೆ ಕೇನ್ ವಿಲಿಯಮ್ಸನ್ ಅವರ 'ಸ್ಥಿರ ಪ್ರದರ್ಶನವನ್ನು ಶ್ಲಾಘಿಸಿದ್ದು, ನಾಯಕ ಮಿಚೆಲ್ ಸ್ಯಾಂಟ್ನರ್ ಬುದ್ಧಿವಂತಿಕೆ, ಗ್ಲೆನ್ ಫಿಲಿಪ್ಸ್ ಅವರ 'ಎಕ್ಸ್ ಫ್ಯಾಕ್ಟರ್' ಎಲ್ಲವನ್ನು ರವಿಶಾಸ್ತ್ರಿ ಹಾಡಿ ಹೊಗಳಿದ್ದಾರೆ.
ಕೇನ್ಸ್ ವಿಲಿಯಮ್ಸನ್ ಆಗಿರಲಿ ಅಥವಾ ವಿರಾಟ್ ಕೊಹ್ಲಿ ಆಗಿರಲಿ ಮೊದಲ ಹತ್ತು ರನ್ ಗಳಿಸಲು ಅವಕಾಶ ನೀಡಿದರೆ, ನಂತರ ಅವರು ಬಹಳ ಸಮಯದವರೆಗೆ ಆಡುತ್ತಾರೆ. ವಿರಾಟ್ ಕೊಹ್ಲಿಯ ಪ್ರಸ್ತುತ ಫಾರ್ಮ್ ಅನ್ನು 'ಗೇಮ್ ಚೇಂಜರ್' ಎಂದು ರವಿಶಾಸ್ತ್ರಿ ಬಣ್ಣಿಸಿದ್ದು, ನಿರ್ಣಾಯಕ ಕ್ಷಣಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಕೇನ್ ವಿಲಿಯಮ್ಸನ್ ಅವರನ್ನು ಶ್ಲಾಘಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications