Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತನ್ನ ಬಿಯರ್ ಸ್ನೇಹಿತರ ಹೆಸರಿಸಿದ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ

Ravi Shastri picks Roger Binny, Laxman Sivaramakrishnan as his beer buddies

ನವದೆಹಲಿ, ಮೇ 6: ಟೀಮ್ ಇಂಡಿಯಾದ ಹೆಡ್ ಕೋಚ್ ರವಿ ಶಾಸ್ತ್ರಿ, ತನ್ನ ಬಿಯರ್ ಸ್ನೇಹಿತರಾಗಿ ಮಾಜಿ ಕ್ರಿಕೆಟರ್ ರೋಜರ್ ಬಿನ್ನಿ, ಲಕ್ಷ್ಮಣ್ ಶಿವರಾಮಕೇಷ್ಣನ್ ಅವರನ್ನು ಹೆಸರಿಸಿದ್ದಾರೆ. ಭಾರತದಲ್ಲಿ ಲಾಕ್‌ಡೌನ್ ಜಾರಿಯಲ್ಲಿರುವಾಗ ತಾನು ಈ ಸ್ನೇಹಿತರೊಡನೆ ಬಿಯರ್ ಕುಡಿಯಬಯಸುವುದಾಗಿ ಶಾಸ್ತ್ರಿ ಹೇಳಿಕೊಂಡಿದ್ದಾರೆ.

ಕೊರೊನಾ ವೈರಸ್ ಕಾರಣ ಮಹಾರಾಷ್ಟ್ರದ ಅಲಿಬಾಗ್‌ ಅನ್ನು ಕೇಸರಿ ಝೋನ್‌ ಆಗಿ ಹೆಸರಿಸಲಾಗಿದೆ. ಇದೇ ಭಾಗದಲ್ಲಿ ವಾಸವಿರುವ ರವಿ ಶಾಸ್ತ್ರಿ ಬಿಡುವಿನ ವೇಳೆಯನ್ನು ಕಳೆಯುತ್ತಿದ್ದಾರೆ. ಲಾಕ್‌ ಡೌನ್ ನಿಯಮಗಳನ್ನು ಸರ್ಕಾರ ಸಡಿಲಿಸಿದ್ದರಿಂದ ತಾನು ಬಿಯರ್ ಖರೀದಿಸಲು ಹೋಗುತ್ತಿರುವುದಾಗಿ ಭಾರತದ ಮಾಜಿ ಆಲ್ ರೌಂಡರ್ ಶಾಸ್ತ್ರಿ ಬಾಯ್ಬಿಟ್ಟಿದ್ದಾರೆ.

ಕೊರೊನಾ ಕಾರಣ ಭಾರತದಲ್ಲಿ ಲಾಕ್‌ ಡೌನ್ ವಿಧಿಸಿದ ಬಳಿಕ ಅಂದರೆ ಸುಮಾರು ಒಂದೂವರೆ ತಿಂಗಳಿನ ಬಳಿಕ ಮೇ 4ರಂದು ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಹೀಗಾಗಿ ಮದ್ಯದಂಗಡಿಗಳ ಮುಂದೆ ಮಾರುದ್ದದ ಸಾಲು ಇದ್ದುದು ಸಾಮಾನ್ಯವಾಗಿ ಕಂಡು ಬರುತ್ತಿತ್ತು.

'ನನ್ನ ಬಿಯರ್ ಸ್ನೇಹಿತರಲ್ಲಿ ಶಿವ (ಲಕ್ಷ್ಮಣ್ ಶಿವರಾಮಕೃಷ್ಣನ್), ರೋಜರ್ (ಬಿನ್ನಿ) ಮೊದಲಿಗೆ ಬರುತ್ತಾರೆ. ನಾನಿವತ್ತು ರಾತ್ರಿ ಬಿಯರ್ ತರಲು ಹೋಗುತ್ತಿದ್ದೇನೆ. ಕೆಲ ಅಂಗಡಿಗಳು ತೆರೆದಿರುತ್ತವೆ ಎಂದು ನನಗೆ ಗೊತ್ತು. ಬಿಯರ್‌ಗೆ ಹೋಗುವಾಗ ನನಗೆ ಇಬ್ಬರು ಜೊತೆಗೆ ಬೇಕೆನಿಸಿದರೆ ರೋಜರ್ ಮತ್ತು ಶಿವ ಖಂಡಿತಾ ನನ್ನ ಜೊತೆ ಬರುತ್ತಾರೆ ಅಂತ ನನಗೆ ಭರವಸೆಯಿದೆ,' ಎಂದು ಇಂಡಿಯಾ ಟುಡೇ ಜೊತೆ ಮಾತನಾಡುತ್ತ ಶಾಸ್ತ್ರಿ ಹೇಳಿದ್ದಾರೆ.

Story first published: Wednesday, May 6, 2020, 15:41 [IST]
Other articles published on May 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+