For Quick Alerts
ALLOW NOTIFICATIONS  
For Daily Alerts
 

ಬಾರ್ಡರ್‌ ಗವಾಸ್ಕರ್ ಟ್ರೋಫಿ: ಈ ತಂಡ ಹ್ಯಾಟ್ರಿಕ್‌ ಗೆಲುವು ಸಾಧಿಸಲಿದೆ: ರವಿ ಶಾಸ್ತ್ರಿ ಭವಿಷ್ಯ

ಈ ವರ್ಷದ ಬಹು ನಿರೀಕ್ಷಿತ ಟೆಸ್ಟ್‌ ಸರಣಿಗಳಲ್ಲಿ ಬಾರ್ಡರ್‌ ಗವಾಸ್ಕರ್‌ ಟೆಸ್ಟ್ ಸರಣಿ ಸಹ ಒಂದು. ಈಗಾಗಲೇ ಈ ಟೂರ್ನಿಯ ಬಗ್ಗೆ ಖ್ಯಾತನಾಮರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಇದ್ದಾರೆ. ಈ ಸಾಲಿಗೆ ಈಗ ಟೀಮ್ ಇಂಡಿಯಾದ ಮಾಜಿ ಕೋಚ್‌ ರವಿ ಶಾಸ್ತ್ರಿ ಸಹ ಸೇರುತ್ತಾರೆ.

ಸೋಮವಾರ ಈ ಸರಣಿಯ ಬಗ್ಗೆ ಆಸ್ಟ್ರೇಲಿಯಾ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದರು. ಅವರು ಆಸ್ಟ್ರೇಲಿಯಾ ಈ ಸರಣಿಯನ್ನು ತನ್ನ ವಶಕ್ಕೆ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದರು. ಅಲ್ಲದೆ ಟೀಮ್ ಇಂಡಿಯಾ ಆಸೀಸ್ ಪ್ರವಾಸದಲ್ಲಿ ಅಬ್ಬರದ ಪ್ರದರ್ಶನ ನೀಡಲಿದೆ ಎಂದು ತಿಳಿಸಿದ್ದರು. ಇವರ ಹೇಳಿಕೆ ಬೆನ್ನಲ್ಲೆ ಈಗ ಟೀಮ್ ಇಂಡಿಯಾದ ಮಾಜಿ ಕೋಚ್‌ ರವಿ ಶಾಸ್ತ್ರಿ ಸಹ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

Ravi Shastri Predicts India s Hat-Trick in Border-Gavaskar Series Despite Aussie Challenges

ಆಸ್ಟ್ರೇಲಿಯಾಕ್ಕೆ ಭಾರತ ಪ್ರವಾಸ

ವರ್ಷಾಂತ್ಯದಲ್ಲಿ ಬಾರ್ಡರ್-ಗವಾಸ್ಕರ್ ಸರಣಿಗಾಗಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಟೀಂ ಇಂಡಿಯಾ ಆತಿಥೇಯ ತಂಡದೊಂದಿಗೆ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ವೇಳೆ ಭಾರತ ತಂಡ ಮತ್ತೊಮ್ಮೆ ಆಸ್ಟ್ರೇಲಿಯಾವನ್ನು ಸೋಲಿಸಿ ಸರಣಿ ಗೆಲ್ಲಲಿದೆ ಎಂದು ಶಾಸ್ತ್ರಿ ನಂಬಿದ್ದಾರೆ.

ಭಾರತವು ಕಳೆದ ಎರಡು ಸರಣಿಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಮತ್ತು 2015 ರಿಂದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ನಡೆಯುತ್ತಿದೆ. ಕಳೆದ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿತ್ತು. ಇದರ ಬದಲಿಗೆ ಭಾರತ ಬಾರ್ಡರ್‌ ಗವಾಸ್ಕರ್ ಸರಣಿ ವಶ ಪಡಿಸಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

Ravi Shastri Predicts India s Hat-Trick in Border-Gavaskar Series Despite Aussie Challenges

ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆ

ಈ ಬಾರಿ ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಟೀಮ್ ಇಂಡಿಯಾ ನೂತನ ಕೋಚ್‌ ಜೊತೆ ಪ್ರಯಾಣ ಬೆಳೆಸಲಿದೆ. ಕಾಂಗರೂ ನಾಡಿನಲ್ಲಿ ಟೀಮ್ ಇಂಡಿಯಾ ಹ್ಯಾಟ್ರಿಕ್‌ ಸರಣಿ ಗೆಲುವನ್ನು ಸಾಧಿಸುವ ವಿಶ್ವಾಸವನ್ನು ಹೊಂದಿದೆ ಎಂದು ಶಾಸ್ತ್ರಿ ಹೇಳಿದ್ದಾರೆ.

ಐಸಿಸಿಯೊಂದಿಗೆ ಮಾತನಾಡಿದ ಶಾಸ್ತ್ರಿ, ಆಸ್ಟ್ರೇಲಿಯಾದಲ್ಲಿ ಐದು ಟೆಸ್ಟ್‌ಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ರೋಚಕತೆ ಹುಟ್ಟಿಸಿದೆ. ಕಳೆದ ಎರಡು ಬಾರಿ ಭಾರತ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಆಸ್ಟ್ರೇಲಿಯಾ ಸುಮಾರು ಒಂದು ದಶಕದಿಂದ ತವರಿನಲ್ಲಿ ಸರಣಿಯನ್ನು ಗೆದ್ದಿಲ್ಲ. ಈ ಎರಡೂ ತಂಡಗಳು ಯಾವುದೇ ಫಾರ್ಮೆಟ್‌ನಲ್ಲಿ ಸೆಣಸಿದರೂ ರೋಚಕತೆ ಫಿಕ್ಸ್‌ ಎಂದಿದ್ದಾರೆ.

ಬೌಲಿಂಗ್‌ ಬೆಸ್ಟ್‌

ಈ ಬಾರಿ ಟೀಮ್ ಇಂಡಿಯಾಕ್ಕೆ ಹ್ಯಾಟ್ರಿಕ್‌ ಗೆಲುವಿನ ನಗೆ ಬೀರಲು ಉತ್ತಮ ಅವಕಾಶ ಇದೆ. ಟೀಮ್ ಇಂಡಿಯಾದ ಬೌಲರ್‌ಗಳ ಫಿಟ್ ಆಗಿದ್ದು, ಆಸೀಸ್ ಪ್ರವಾಸ ಬೆಳೆಸಿದಲ್ಲಿ, ಆತಿಥೇಯ ಬ್ಯಾಟರ್‌ಗಳನ್ನು ಕಾಡಬಹುದು. ಆಸೀಸ್‌ ವಿರುದ್ಧ ಟೀಮ್ ಇಂಡಿಯಾದ ವೇಗದ ಬೌಲರ್‌ಗಳು ಸ್ಥಿರ ಪ್ರದರ್ಶನ ನೀಡಿದ್ದಾರೆ. ಇಷ್ಟೇ ಅಲ್ಲದೆ ಆಸೀಸ್ ತಂಡವನ್ನು ಹಗುರವಾಗಿ ಪರಿಗಣಿಸಬಾರದು ಎಂದು ಶಾಸ್ತ್ರಿ ಆಟಗಾರರಿಗೆ ಕಿವಿ ಮಾತು ನೀಡಿದ್ದಾರೆ.

ಇತ್ತೀಚಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಸಹ ಈ ಸರಣಿಯ ಮಹತ್ವವನ್ನು ಬಹಿರಂಗ ಪಡಿಸಿದ್ದರು. ಈ ಸರಣಿ ಸಹ ಆಶಸ್‌ ಸರಣಿಯಷ್ಟೇ ಪ್ರಾಮುಖ್ಯ ಪಡೆಯುತ್ತಿದೆ ಎಂದು ಅವರು ತಿಳಿಸಿದ್ದರು. ಇದೇ ವೇಳೆ ಭಾರತ, ಆಸ್ಟ್ರೇಲಿಯಾ ನಡುವಣ ಬಾರ್ಡರ್‌ ಗವಾಸ್ಕರ್‌ ಸರಣಿಯ ನೇರ ಪ್ರಸಾರದ ಹಕ್ಕುಗಳು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿವೆ ಎಂದು ಸಹ ತಿಳಿಸಿದ್ದರು.

Story first published: Wednesday, August 14, 2024, 17:10 [IST]
Other articles published on Aug 14, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+