ಎಂಎಸ್ ಧೋನಿ ಟೆಸ್ಟ್ ನಿವೃತ್ತಿ ಗುಟ್ಟು ಬಿಚ್ಚಿಟ್ಟ ರವಿ ಶಾಸ್ತ್ರಿ!
ನವದೆಹಲಿ, ಆಗಸ್ಟ್. 29: ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ಗೆ ದೀಢಿರ್ ವಿದಾಯ ಹೇಳಿದ್ದು ಏಕೆ ಎಂಬುದರ ಹಿಂದಿನ ಸತ್ಯವನ್ನು ಟೀಮ್ ಡೈರೆಕ್ಟರ್ ರವಿ ಶಾಸ್ತ್ರಿ ಬಿಚ್ಚಿಟ್ಟಿದ್ದಾರೆ.
ಯುವ ಪ್ರತಿಭೆ ವಿರಾಟ್ ಕೊಹ್ಲಿ ಅವರಿಗೆ ನಾಯಕತ್ವ ಅವಕಾಶ ಮಾಡಿಕೊಡಲೆಂದೇ ಧೊನಿ ಟೆಸ್ಟ್ ಬದುಕಿಗೆ ವಿದಾಯ ಹೇಳಿದೆರು. ಚಾಲಾಕಿನ ಮತ್ತು ನಿರ್ಭೀತಿಯ ನಾಯಕತ್ವ ಗುಣ ಇರುವ ಒಬ್ಬ ವ್ಯಕ್ತಿಯೊಬ್ಬ ತನ್ನ ತಂಡದಲ್ಲಿದ್ದಾನೆ ಎಂಬ ಅರಿವು ಧೋನಿಗಿತ್ತು ಎಂದು ಶಾಸ್ತ್ರಿ ಹೇಳಿದ್ದಾರೆ.
ಕೋಲಂಬೋದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರವಿ ಶಾಸ್ತ್ರಿ , ಇದು ಧೋನಿ ಕೈಗೊಂಡ ಉತ್ತಮ ನಿರ್ಧಾರವೇ ಸರಿ. ನಂತರ ನಾಯಕತ್ವ ವಹಿಸಿಕೊಂಡ ಕೊಹ್ಲಿ ಧೋನಿ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.

ಆಸ್ಟ್ರೇಲಿಯಾ ಪ್ರವಾಸದ ಸೋಲಿನಿಂದಾಗಿ ಧೋನಿ ಕಂಗೆಟ್ಟಿದ್ದರು. ಎಲ್ಲ ವಿಧದ ಕ್ರಿಕೆಟ್ ನಲ್ಲಿ ತಂಡವನ್ನು ಮುನ್ನಡೆಸುವುದು ಕಷ್ಟಕರವೆನೆಸಿತು. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ತಂಡವನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂಬುದನ್ನು ಅರಿತು ನಾಯಕತ್ವ ತ್ಯಜಿಸಿದರು ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಬಳಿಕ ಧೋನಿ ಟೆಸ್ಟ್ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಿಸಿದ್ದರು. ತಂಡಕ್ಕೆ ಬದಲಾವಣೆ ಒಂದು ಅಗತ್ಯವಿದೆ ಎಂದು ಮನಗಂಡಿದ್ದ ಧೋನಿ ಸೂಕ್ತ ನಿರ್ಧಾರವನ್ನೇ ಪ್ರಕಟಿಸಿದ್ದರು. ಇಂದು ಭಾರತ ತಂಡದ ಮೇಲೆ ಅದು ಪರಿಣಾಮ ಬೀರುತ್ತಿದೆ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications